ಇದು ಅಧಿಕೃತ! ಉಪೇಂದ್ರ ಯುಪಿಪಿಯಿಂದ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧೆ

ಇದು ಅಧಿಕೃತ ಪ್ರಕಟಣೆ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ
ಉಪೇಂದ್ರ
ಉಪೇಂದ್ರ
ಬೆಂಗಳೂರು: ಇದು ಅಧಿಕೃತ ಪ್ರಕಟಣೆ, ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಿಂದ ರಿಯಲ್ ಸ್ಟಾರ್ ಉಪೇಂದ್ರ ನೇತೃತ್ವದ ಉತ್ತಮ ಪ್ರಜಾಕೀಯ ಪಕ್ಷ ಎಲ್ಲಾ 28 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ವಿಶೇಷವೆಂದರೆ ಈ ಪಕ್ಷದ ಅಭ್ಯರ್ಥಿಗಳನ್ನು ಸಾಮಾನ್ಯ ಜನರೇ ಆಯ್ಕೆ ಮಾಡಿದ್ದಾರೆ. ಇನ್ನು ಪಕ್ಷದ ಚಿಹ್ನೆ ಆಟೋ ರಿಕ್ಷಾವಾಗಿರಲಿದೆ.
ಆದರೆ ಉಪೇಂದ್ರ ಮಾತ್ರ ತಾವು ಯಾವ ಕ್ಷೇತ್ರದಿಂದಲೂ ಸ್ಪರ್ಧಿಸಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. "ಒಂದೊಮ್ಮೆ ನಾನು ಸ್ಪರ್ಧಿಸಿದರೆ ಆಗ ನನ್ನ ಗಮನವೆಲ್ಲಾ ಒಂದೇ ಲೋಕಸಭೆ ಕ್ಷೇತ್ರದ ಮೇಲಿರಲಿದೆ. ಆದರೆ ನನಗೆ ದೊಡ್ಡ ಮಟ್ಟದ ಜನಸಮೂಹವನ್ನು ತಲುಪಬೇಕಾಗಿದೆ. ಹಾಗಾಗಿ ನಾನು ಯಾವುದೇ ಕ್ಷೇತ್ರದಿಂದ ಸ್ಪರ್ಧಿಸುವುದಿಲ್ಲ. ಬದಲಿಗೆ ನಾನು ರಾಜ್ಯಾದ್ಯಂತ ಪ್ರವಾಸ ಮಾಡಿ ನಮ್ಮ  ಪಕ್ಷದ ಅಭ್ಯರ್ಥಿಗಳಿಗೆ ಸಹಾಯ ಮಾಡುವೆನು." ಉಪೇಂದ್ರ ಹೇಳಿದ್ದಾರೆ.
2017ರಲ್ಲಿ ರಾಜಕಾರಣಿಯಾಗಿ ಬದಲಾದ ನಟ ಉಪೇಂದ್ರ ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷವನ್ನು ಆರಂಭಿಸಿದರು.  ಆದರೆ ಕೆಲವು ತಿಂಗಳ ನಂತರ ವಿಧಾನಸಭೆ ಚುನಾವಣೆಗೆ ಮುನ್ನ ಆ ಪಕ್ಷದಿಂದ ಅವರು ದೂರವಾದರು.  ಆ ಬಳಿಕ ಅವರು ಮತ್ತೆ "ಪ್ರಜಾಕೀಯ" ಪ್ರಾರಂಭಕ್ಕೆ ಪ್ರಯತ್ನ ಮುಂದುವರಿಸಿದ್ದರು. ಅದರಂತೆ 2018ರ ಅವರ ಜನ್ಮದಿನದಂದು ತಮ್ಮ ಹೊಸ ಪಕ್ಷ ಉತ್ತಮ ಪ್ರಜಾಕೀಯ ಪಕ್ಷವನ್ನು ಘೋಷಣೆ ಮಾಡಿದ್ದರು.
"ನಮ್ಮ ಪಕ್ಷದ ಅಭ್ಯರ್ಥಿಗಳ ಪೈಕಿ ಯಾರೊಬ್ಬರೂ ಸೆಲೆಬ್ರಟಿಗಳಲ್ಲ, ಯಾರೂ ಕ್ರಿಮಿನಲ್ ಹಿನ್ನೆಲೆಯುಳ್ಳವರಲ್ಲ.  ಅವರೆಲ್ಲಾ ಸಾಮಾನ್ಯ ನಾಗರಿಕರು. ಅವರ ವಿರುದ್ಧ ಯಾವುದೇ ಭ್ರಷ್ಟಾಚಾರ ಆರೋಪಗಳಿಲ್ಲ.  ಈಗ ಅವರೆಲ್ಲಾ ರಾಜಕೀಯದ ಶಿಶುಗಳು, ಆದರೆ ಮುಂದೆ ಇವರೇ ರಾಜಕೀಯ ಮುಖಂಡರಾಗಿ ಉತ್ತಮ ಪ್ರಜಾಕೀಯ ನಡೆಸುತ್ತಾರೆ ಎಂದು ನಾನು ನಂಬಿದ್ದೇನೆ. ಚುನಾಯಿತ ಪ್ರತಿನಿಧಿಗಳು ವೇತನಕ್ಕಾಗಿ ಕೆಲಸ ಮಾಡುವ ಜ ಉದ್ಯೋಗಿಗಳಂತೆ ಇರಲಿದ್ದಾರೆ. ಪ್ರಜಾಕೇಯ ಪಕ್ಷದ ಅಭ್ಯರ್ಥಿಗಳು ಸಂಬಳ ಪಡೆಯುವ ನೌಕರರಂತೆ ಜನರ ಸೇವೆಗೆ ಸದಾ ಸಿದ್ದವಾಗಿರುತ್ತಾರೆ." ಅವರು ಹೇಳಿದರು.
ಪಕ್ಷದ ಅಭ್ಯರ್ಥಿಗಳು ತಮ್ಮ ವಾರದ ಅಥವಾ ಹದಿನೈದು ದಿನಗಳ ಕೆಲಸಗಳ ವರದಿ ಬಗ್ಗೆ ಜನರಿಗೆ ಬರೆದು ತಿಳಿಸಬೇಕು. ಆ ಮೂಲಕ ಅವರು  ಪಾರದರ್ಶಕತೆಯನ್ನು ಕಾಯ್ದುಕೊಳ್ಳಬೇಕು. "ಯಾವುದೇ ರಾಜಕೀಯ ನೇತಾರರು ಈ ನಿಯಮ ಪಾಲನೆ ಮಾಡಿದ್ದಾದರೆ ಅವರು ಸಾರ್ವಜನಿಕರ ಆಕ್ರೋಶವನ್ನು ಎದುರಿಸುವುದು ತಪ್ಪಲಿದೆ. ಯಾವಾಗ ಪ್ರಜಾಸೇವಕರೆನ್ನಿಸಿಕೊಂಡ ನೇತಾರರು ಐದು ವರ್ಷಗಳಿಗೆ ಒಮ್ಮೆ ಮಾತ್ರ ಜನರ ಮುಂದೆ ಬರುವರೋ ಆಗ ಅವರು ಸಾರ್ವಜನಿಕರ ಆಕ್ರೋಶಕ್ಕೆ ಈಡಾಗುತ್ತಾರೆ.ರು. ಪ್ರಜಾಕೀಯ ಅಭ್ಯರ್ಥಿಗಳಿಗೆ ಕನಿಷ್ಠ ವೆಚ್ಚದಲ್ಲಿ ಕೆಲಸ ಮಾಡಲು ತಿಳಿಸಲಾಗಿದೆ, ವಣಿ ಪಾವತಿಸುವಂತಹ ಖರ್ಚುಗಳನ್ನು ವ್ಯವಸ್ಥೆಗೊಳಿಸಲಾಗುವುದು" ಉಪೇಂದ್ರ ಹೇಳಿದ್ದಾರೆ. 
ಸ್ಯಾಂಡಲ್ ವುಡ್ ನಿಂದ ನಿಮ್ಮ ಪಕ್ಷದ ಅಭ್ತರ್ಥಿಯಾಗಿ ಯಾರಾದರೂ ಸೇರಿದ್ದಾರೆಯೆ ಎಂದಾಗ ಉಪೇಂದ್ರ ಇಲ್ಲ ಎಂದು ಉತ್ತರಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com