ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಹಾಸನದಿಂದ ಎ ಮಂಜು, ಗುಲ್ಬರ್ಗಾದಿಂದ ಜಾಧವ್ ಗೆ ಟಿಕೆಟ್

ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 182 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೂ ಸಹ
ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ
ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಒಟ್ಟು 182 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು ರಾಜ್ಯದ 21 ಲೋಕಸಭಾ ಕ್ಷೇತ್ರಗಳಿಗೂ ಸಹ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. 
ಇತ್ತೀಚೆಗಷ್ಟೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಮಾಜಿ ಸಚಿವ ಎ. ಮಂಜುಗೆ ಹಾಸನದಿಂದ ಟಿಕೆಟ್ ನೀಡಲಾಗಿದ್ದರೆ, ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಮತ್ತೋರ್ವ ನಾಯಕ ಜಾಧವ್ ಗೆ ಗುಲ್ಬರ್ಗಾದಿಂದ  ಗೆ ಟಿಕೆಟ್ ಘೋಷಿಸಲಾಗಿದೆ. ಇನ್ನು ಉಳಿದಂತೆ ಬಹುತೇಕ ಹಾಲಿ ಸಂಸದರಿಗೆ ಟಿಕೆಟ್ ನ್ನು ನೀಡಲಾಗಿದೆ. 
ರಾಜ್ಯ ಅಭ್ಯರ್ಥಿಗಳ ವಿವರ ಹೀಗಿದೆ
ಚಾಮರಾಜನಗರ- ಶ್ರೀನಿವಾಸಪ್ರಸಾದ್ 
ಮೈಸೂರು-ಕೊಡಗು- ಪ್ರತಾಪ ಸಿಂಹ 
ಹಾಸನ- ಎ.ಮಂಜು
ಉಡುಪಿ, ಚಿಕ್ಕಮಗಳೂರು - ಶೋಭಾ ಕರಂದ್ಲಾಜೆ 
ದಕ್ಷಿಣ ಕನ್ನಡ- ನಳೀನ್ ಕುಮಾರ್ ಕಟೀಲ್ 
ಶಿವಮೊಗ್ಗ- ಬಿ.ವೈ ರಾಘವೇಂದ್ರ 
ಉತ್ತರ ಕನ್ನಡ- ಅನಂತಕುಮಾರ್ ಹೆಗಡೆ
ಬೆಳಗಾವಿ - ಸುರೇಶ್ ಅಂಗಡಿ 
ವಿಜಾಪುರ- ರಮೇಶ್ ಜಿಗಜಿಣಗಿ 
ಬಾಗಲಕೋಟೆ- ಪಿ.ಸಿ. ಗದ್ದೀಗೌಡರ್ 
ಹಾವೇರಿ- ಶಿವಕುಮಾರ್ ಉದಾಸಿ 
ಹುಬ್ಬಳ್ಳಿ ಧಾರವಾಡ- ಪ್ರಹ್ಲಾದ್ ಜೋಷಿ 
ದಾವಣಗೆರೆ- ಜಿ.ಎಂ. ಸಿದ್ದೇಶ್ವರ್ 
ಚಿತ್ರದುರ್ಗ- ಎ. ನಾರಾಯಣಸ್ವಾಮಿ
ಬಳ್ಳಾರಿ- ದೇವೇಂದ್ರಪ್ಪ 
ಬೀದರ್- ಭಗವಂತ ಖೂಬಾ 
ಕಲ್ಬುರ್ಗಿ- ಉಮೇಶ್ ಜಾಧವ್,
ಚಿಕ್ಕಬಳ್ಳಾಪುರ- ಬಿ.ಎನ್.ಬಚ್ಚೇಗೌಡ 
ತುಮಕೂರು- ಜಿ.ಎಸ್. ಬಸವರಾಜು 
ಬೆಂಗಳೂರು ಕೇಂದ್ರ- ಪಿ.ಸಿ. ಮೋಹನ್ 
ಬೆಂಗಳೂರು ಉತ್ತರ- ಡಿ.ವಿ. ಸದಾನಂದಗೌಡ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com