ಪ್ರಾಮಾಣಿಕರಾಗಿದ್ದರೆ ಐಟಿ ದಾಳಿಗೆ ಭಯ ಏಕೆ?: ಬಿಎಸ್‍ ಯಡಿಯೂರಪ್ಪ

ಐಟಿ ದಾಳಿಗೊಳಗಾದವರು ಪ್ರಾಮಾಣಿಕರಾಗಿದ್ದರೆ ಭಯಪಡುವ, ಗಾಬರಿಗೊಳ್ಳುವುದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍.ಯಡಿಯೂರಪ್ಪ ಹೇಳಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಬೆಂಗಳೂರು: ಐಟಿ ದಾಳಿಗೊಳಗಾದವರು ಪ್ರಾಮಾಣಿಕರಾಗಿದ್ದರೆ ಭಯಪಡುವ, ಗಾಬರಿಗೊಳ್ಳುವುದು ಏಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‍.ಯಡಿಯೂರಪ್ಪ ಹೇಳಿದ್ದಾರೆ.
ಇಂದು ಬೆಳಿಗ್ಗೆ ಸಚಿವ ಪುಟ್ಟರಾಜು ಮನೆ ಸೇರಿದಂತೆ ವಿವಿಧ ಕಡೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಗಳಿಗೆ ಮಂಡ್ಯ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್‍ ಕಾರಣ ಎಂದು ಸಚಿವ ಪುಟ್ಟರಾಜು ಹೇಳಿದ್ದಾರೆ. ಇಂತಹ ಹೇಳಿಕೆ ನೀಡಿದ ಪುಟ್ಟರಾಜುಗೆ ನಾಚಿಕೆಯಾಗಬೇಕು. ದಾಳಿಗಳು ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಅರ್ಥವಿಲ್ಲ. ಐಟಿ ಅಧಿಕಾರಿಗಳು ಅನುಮಾನ ಬಂದರೆ ನೇರವಾಗಿ ದಾಳಿ ಮಾಡಿ ತನಿಖೆ ನಡೆಸುತ್ತಾರೆ. ಪ್ರಾಮಾಣಿಕರಾಗಿದ್ದರೆ ಇವರಿಗೇಕೆ ಭಯ? ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ. 
ಐಟಿ ದಾಳಿ ನಡೆಯುತ್ತೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ನಿನ್ನೆ ರಾತ್ರಿಯೇ ಹೇಳಿದ್ದಾರೆ. ನಿನ್ನೆ ರಾತ್ರಿಯೇ ದಾಳಿಗಳ ಬಗ್ಗೆ ಮಾಹಿತಿ ಇತ್ತು ಎನ್ನುವುದಾದರೆ, ಅವರು ಮೊದಲೇ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಅನ್ನೋ ಅನುಮಾನ ಇದೆ.  ಅನಗತ್ಯವಾಗಿ ಸಿಬಿಐ, ಐಟಿ ಮೇಲೆ ಆರೋಪ ಮಾಡುವುದು ಕುಮಾರಸ್ವಾಮಿ ಅವರಿಗೆ ಚಾಳಿ ಆಗಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. 
ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ಮುಂಜಾನೆಯೇ ಸಚಿವ ಪುಟ್ಟರಾಜು, ವಿಧಾನ ಪರಿಷತ್‍ ಸದಸ್ಯ ಬಿ.ಎಂ.ಫಾರೂಖ್‍ ಮತ್ತು ಎಚ್‍.ಡಿ.ರೇವಣ್ಣ ಆಪ್ತರು, ಗುತ್ತಿಗೆದಾರರು ಹಾಗೂ ಅಧಿಕಾರಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com