ಯಾರೂ ಏನೇ ಮಾಡಿದರೂ ಸರ್ಕಾರ ಸುಭದ್ರ: ಸತೀಶ್ ಜಾರಕಿಹೊಳಿ

ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕ ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ, ಇದರ ಬೆನ್ನಲ್ಲೇ ರಮೇಶ್ ..
ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ
ರಮೇಶ್ ಜಾರಕಿಹೊಳಿ ಮತ್ತು ಸತೀಶ್ ಜಾರಕಿಹೊಳಿ
ಬೆಂಗಳೂರು: ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ಶಾಸಕ ರಮೇಶ್ ಜಾರಕಿಹೊಳಿ ಪ್ರಯತ್ನಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ, ಇದರ ಬೆನ್ನಲ್ಲೇ ರಮೇಶ್ ಜಾರಕಿಹೊಳಿಗೆ ಯಾರ ಬೆಂಬಲವೂ ಇಲ್ಲ ಅರು ಈಗ ಒಂಟಿಯಾಗಿದ್ದಾರೆ ಎಂದು ಸಹೋದರ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸುವಷ್ಟು ಸಂಖ್ಯಾಬಲ ರಮೇಶ್ ಬಳಿಯಿಲ್ಲ, ಸರ್ಕಾರ ರಚನೆಯಾದಾಗಿನಿಂದ ಅಸ್ಥಿರಗೊಳಿಸುವ ಹುನ್ನಾರ ನಡೆಯುತ್ತಲೇ ಇದೆ, ದುರಾದೃಷ್ಟವೆಂದರೇ ರಮೇಶ್ ಅಸಮಾಧಾನಿತರ ಗುಂಪು ಸೇರಿದ್ದಾರೆ ಎಂದ ಸತೀಶ್ ಬೇಸರ ವ್ಯಕ್ತ ಪಡಿಸಿದ್ದಾರೆ.
ಇಬ್ಬರು ಅಥವಾ ಮೂವರು ಶಾಸಕರು ರಾಜಿನಾಮೆ ನೀಡಿದರೇ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಹಿರಿತನದ ಆಧಾರದಲ್ಲಿ ಡಿ.ಕೆ.ಶಿವಕುಮಾರ್ ಅವರಿಗೆ ಕುಂದಗೋಳದ ಉಸ್ತುವಾರಿ ಕೊಟ್ಟಿದ್ದಾರೆ. ಉಸ್ತುವಾರಿ ಕೊಟ್ಟಿರುವುದರ ಬಗ್ಗೆ ತಮಗೆ ಯಾವುದೇ ಅಸಮಧಾನ ಇಲ್ಲ. ಕುಂದಗೋಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವುದು ಜವಾಬ್ದಾರಿ ಎಲ್ಲರ ಮೇಲಿದೆ. ಡಿಕೆ ಶಿವಕುಮಾರ್ ಉತ್ತಮ ಸಂಘಟನ ಚತುರ ಎಂಬುದನ್ನು ಅಲ್ಲಗಳೆಯುವಂತಿಲ್ಲ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com