ಬಿಜೆಪಿಯಲ್ಲಿ ಹಲವು ನಾಯಕರು ನೊಂದು ಮೇ.23ರ ನಂತರ ತಮ್ಮ ಹುದ್ದೆ ತ್ಯಜಿಸಲಿದ್ದಾರೆ: ದಿನೇಶ್ ಗುಂಡೂರಾವ್

ಶಾಸಕ ರಮೇಶ್ ಜಾರಕಿಹೊಳಿ ಬಂಡಾಯದ ನಂತರ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ದಿನಕ್ಕೊಂದು ಸುದ್ದಿಗಳು..

Published: 05th May 2019 12:00 PM  |   Last Updated: 05th May 2019 09:56 AM   |  A+A-


Dinesh Gundu Rao

ದಿನೇಶ್ ಗುಂಡೂರಾವ್

Posted By : SUD SUD
Source : The New Indian Express
ಶಾಸಕ ರಮೇಶ್ ಜಾರಕಿಹೊಳಿ ಬಂಡಾಯದ ನಂತರ ಮೈತ್ರಿ ಸರ್ಕಾರದ ಭವಿಷ್ಯದ ಬಗ್ಗೆ ದಿನಕ್ಕೊಂದು ಕಥೆಗಳು ಹುಟ್ಟಿಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ನ್ಯೂ ಸಂಡೆ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆ ಸಂದರ್ಶನದಲ್ಲಿ ಹಲವು ವಿಷಯಗಳ ಕುರಿತು ಹಂಚಿಕೊಂಡಿದ್ದಾರೆ.

ಗೋಕಾಕ್ ಕ್ಷೇತ್ರದ ಶಾಸಕ ರಮೇಶ್ ಜಾರಕಿಹೊಳಿ ಮೇ 23ರವರೆಗೆ ಲೋಕಸಭೆ ಚುನಾವಣೆ ಫಲಿತಾಂಶದವರೆಗೆ ಕಾದು ತಮ್ಮ ರಾಜಕೀಯ ನಿರ್ಧಾರ ಪ್ರಕಟಿಸುತ್ತಾರೆಯೇ?
-ಬಿಜೆಪಿಯವರ ಸ್ವಾರ್ಥ ರಾಜಕಾರಣಕ್ಕೆ ರಮೇಶ್ ಜಾರಕಿಹೊಳಿಯವರನ್ನು ಆಟವಾಡಿಸುತ್ತಿದ್ದಾರೆ. ರಮೇಶ್ ಜಾರಕಿಹೊಳಿ ಮೂಲತಃ ಕಾಂಗ್ರೆಸ್ಸಿಗ. ನಾವು ಅವರ ಪರವಾಗಿದ್ದೇವೆ. ಕೆಲವು ವೈಯಕ್ತಿಕ ಕಾರಣಗಳಿಂದ ಅವರಲ್ಲಿ ಅಸಮಾಧಾನ ಇರುವುದು ಹೌದು. ಕೆಲವು ಅಸಂತುಷ್ಟ ಶಾಸಕರು ಅವರ ಜೊತೆ ಇದ್ದಾರೆ ಎನ್ನುವುದೆಲ್ಲ ಸುಳ್ಳು. ಮಹೇಶ್ ಕುಮಟಳ್ಳಿ, ನಾಗೇಂದ್ರ, ಬಿ ಸಿ ಪಾಟೀಲ್, ಡಾ ಕೆ ಸುಧಾಕರ್ ಕಾಂಗ್ರೆಸ್ ಪರ ಪ್ರಚಾರದಲ್ಲಿ ಭಾಗಿಯಾಗಿದ್ದು ನಮ್ಮ ಜೊತೆಯೇ ಇರುತ್ತಾರೆ ಎಂದು ಹೇಳಿದ್ದಾರೆ.

ಚಿಂಚೋಳಿ, ಕುಂದಗೋಳ ಉಪ ಚುನಾವಣೆ ಬಗ್ಗೆ ಹೇಳಿ.
-ಚಿಂಚೋಳಿಯಲ್ಲಿ ಡಾ ಉಮೇಶ್ ಜಾಧವ್ ತಮ್ಮನ್ನು ತಾವೇ ಬಿಜೆಪಿಗೆ ಮಾರಿಕೊಂಡುಬಿಟ್ಟಿದ್ದಾರೆ. ಅನೈತಿಕ ಸಂಪ್ರದಾಯಗಳಿಗೆ ಉತ್ತಮ ಉದಾಹರಣೆ ಅದು, ಕ್ಷೇತ್ರದ ಜನ ಅವರನ್ನು ಎರಡು ಬಾರಿ ಆಯ್ಕೆ ಮಾಡಿ ಕಳುಹಿಸಿದರು. ಈ ಬಾರಿ ಜನರೇ ತಮಗೆ ಕುದುರೆ ವ್ಯಾಪಾರದಲ್ಲಿ ತೊಡಗುವ ಜನಪ್ರತಿನಿಧಿ ಬೇಡ ಎಂದು ಮನೆಗೆ ಕಳುಹಿಸುವುದು ಖಂಡಿತ. ತಂದೆ ಮತ್ತು ಮಗ ಅವಿನಾಶ್ ಜಾಧವ್ ಇಬ್ಬರೂ ಸೋಲುತ್ತಾರೆ. ಬಿಜೆಪಿಯ ನಡವಳಿಕೆಯಿಂದ ಮತ್ತೊಬ್ಬ ಅಭ್ಯರ್ಥಿಗೆ ಪ್ರಯೋಜನವಾಗಬಹುದು. ಕುಂದಗೋಳದಲ್ಲಿ ಕಳೆದ ಬಾರಿ ನಾವು ಸಣ್ಣ ಅಂತರದಿಂದ ಗೆದ್ದಿದ್ದೆವು. ಏಕೆಂದರೆ ಆಗ ಜೆಡಿಎಸ್ ಪ್ರತ್ಯೇಕವಾಗಿ ಸ್ಪರ್ಧಿಸಿತ್ತು. ಇಂದು ನಾವು ಒಂದಾಗಿದ್ದೇವೆ. ಸಿ ಎಸ್ ಶಿವಳ್ಳಿ ಅವರ ಪತ್ನಿ ಪರ ಅನುಕಂಪದ ಮತಗಳು ಕೂಡ ನಮಗೆ ವರದಾನವಾಗಬಹುದು.

ಪ್ರಿಯಾಂಕಾ ಗಾಂಧಿಯವರು ಇಲ್ಲಿ ಬಂದು ಪ್ರಚಾರ ಮಾಡುತ್ತಿದ್ದರೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳಿಗೆ ಸಹಾಯವಾಗುತ್ತಿತ್ತೇ?
ಅದು ಕಾಂಗ್ರೆಸ್ ಗೆ ಒಳ್ಳೆಯದಾಗುತ್ತಿತ್ತು. ಕಡಿಮೆ ಸಮಯಾವಕಾಶದಿಂದಾಗಿ ಅವರನ್ನು ಇಲ್ಲಿಗೆ ಪ್ರಚಾರಕ್ಕೆ ಕರೆತರಲಾಗಲಿಲ್ಲ. ವಯನಾಡು ಮತ್ತು ಪೂರ್ವ ಉತ್ತರ ಪ್ರದೇಶದ ಕ್ಷೇತ್ರಗಳಲ್ಲಿ ಅವರಿಗೆ ಸಾಕಷ್ಟು ಕೆಲಸಗಳಿದ್ದವು,

ಮೇ 23ರ ನಂತರ ನಿಮ್ಮ ಸರ್ಕಾರದ ಸ್ಥಿರತೆ ಬಗ್ಗೆ ಏನು ಹೇಳುತ್ತೀರಿ?
-ಲೋಕಸಭೆ ಚುನಾವಣೆ ಫಲಿತಾಂಶದ ನಂತರ ಕೂಡ ನಮ್ಮ ಸರ್ಕಾರ ಸ್ಥಿರವಾಗಿ ಉಳಿಯುತ್ತದೆ. ಬಿಜೆಪಿ ನೇತೃತ್ವದ ಅನೈತಿಕ, ಭ್ರಷ್ಟ ಎನ್ ಡಿಎ ಸರ್ಕಾರವನ್ನು ಈ ಬಾರಿ ದೇಶದ ಜನರು ಸೋಲಿಸುತ್ತಾರೆ. ಪಶ್ಚಿಮ ಬಂಗಾಳದಲ್ಲಿ ಕುದುರೆ ವ್ಯಾಪಾರ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ ಪ್ರಧಾನಿ ಹುದ್ದೆಗೆ ಅಪಮಾನ ಮಾಡಿದ್ದಾರೆ. ಬಿಜೆಪಿಯಲ್ಲಿಯೇ ಹಲವು ಮಂದಿಗೆ ಸಾಕಾಗಿ ಹೋಗಿದೆ. ಬಿಜೆಪಿಯಲ್ಲಿ ಮೇ 23ರ ಫಲಿತಾಂಶ ನಂತರ ಹಲವು ಭಿನ್ನಮತೀಯಗಳು ತಲೆದೋರಲಿದೆ.

ಕಾಂಗ್ರೆಸ್ ನ ನ್ಯಾಯ್ ಯೋಜನೆಯನ್ನು ಮೊದಲೇ ಘೋಷಿಸಿದ್ದರೆ ಪಕ್ಷಕ್ಕೆ ಸಹಾಯವಾಗುತ್ತಿತ್ತು ಎಂದು ಅನಿಸುತ್ತಿದೆಯೇ?
ಈ ಎನ್ ಡಿಎ ಸರ್ಕಾರ ಅಲ್ಟ್ರಾ ರಾಷ್ಟ್ರೀಯತಾವಾದಿ ಭಾವನೆಗಳನ್ನು ತುಂಬಿಸಿ ಮಾಧ್ಯಮಗಳ ದಿಕ್ಕು ತಪ್ಪಿಸುತ್ತಿದೆ. ರಾಷ್ಟ್ರೀಯತೆ ವಿಚಾರ ಬಿಟ್ಟು ಜನರಿಗೆ ಉಪಯೋಗವಾಗುವಂತಹ, ಜನರ ಸಮಸ್ಯೆಗಳ ಬಗ್ಗೆ ಮಾಧ್ಯಮಗಳು ಹೆಚ್ಚು ಮಾತನಾಡಬೇಕಾಗಿತ್ತು ಎನಿಸುತ್ತದೆ.

ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಪಕ್ಷ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?
ಕಾಂಗ್ರೆಸ್-ಜೆಡಿಎಸ್ ಗೆ ಒಟ್ಟಾಗಿ 18ರಿಂದ 20 ಸ್ಥಾನಗಳು ಬರಬಹುದು.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp