ಕುಂದಗೋಳ ಉಪಚುನಾವಣೆ: ಲಿಂಗಾಯತ ಮತಗಳ ಮೇಲೆ ಯಡಿಯೂರಪ್ಪ ಕಣ್ಣು

ಕುಂದಗೋಳ ಹಾಗೂ ಚಿಂಚೋಳ್ಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಣತಂತ್ರ ರೂಪಿಸುತ್ತಿದ್ದಾರೆ.
ಬಿಜೆಪಿ ಮುಖಂಡರು
ಬಿಜೆಪಿ ಮುಖಂಡರು
ಬೆಂಗಳೂರು:  ಕುಂದಗೋಳ ಹಾಗೂ ಚಿಂಚೋಳ್ಳಿ ವಿಧಾನಸಭಾ ಉಪ ಚುನಾವಣೆಯಲ್ಲಿ ಗೆಲ್ಲುವ ನಿಟ್ಟಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ರಣತಂತ್ರ ರೂಪಿಸುತ್ತಿದ್ದಾರೆ.
ಕ್ಷೇತ್ರದಲ್ಲಿನ ಲಿಂಗಾಯತ ಮತಗಳ ಮೇಲೆ ಕಣ್ಣಿಟ್ಟಿರುವ ಯಡಿಯೂರಪ್ಪ ಮುಂದಿನ 10 ದಿನಗಳ ಕಾಲ ಎರಡು ಕ್ಷೇತ್ರಗಳಿಗೂ ಮೂರು ಭಾರಿ ಭೇಟಿ ನೀಡಲಿದ್ದಾರೆ.
.2018ರ ವಿಧಾನಸಭಾ ಚುನಾವಣೆಯಲ್ಲಿ ಕೇವಲ 634 ಮತಗಳ ಅಂತರದಲ್ಲಿ ಕ್ಷೇತ್ರ ಕಳೆದುಕೊಂಡಿದ್ದ ಬಿಜೆಪಿ ಉಪಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.ಜನರ ಒಲವು ನಮ್ಮ ಪರವಾಗಿದೆ.2018ರ ಚುನಾವಣೆಯಲ್ಲಿ ಕೆಲವು ಲೋಪಗಳಿಂದಾಗಿ ಕ್ಷೇತ್ರ ಕಳೆದುಕೊಂಡಿದ್ದೇವು. ಆದರೆ, ಈ ಬಾರಿ ಅನುಮಾನವಿಲ್ಲ,ಲಿಂಗಾಯತ ಮತಗಳು ಬಿಜೆಪಿ ಗೆಲುವಿಗೆ ನೆರವಾಗಲಿವೆ ಎಂಬ ವಿಶ್ವಾಸ ಇರುವುದಾಗಿ ಯಡಿಯೂರಪ್ಪ ಹೇಳಿದ್ದಾರೆ.
ಚುನಾವಣೆ ಹತ್ತಿರ ಇರುವಂತೆಯೇ ಯಡಿಯೂರಪ್ಪ ಮೇ 14ರಂದು ಕುಂದಗೋಳಕ್ಕೆ ಮತ್ತೆ ಆಗಮಿಸಲಿದ್ದು, ಮತ್ತೊಂದು ಸುತ್ತಿನ ಪ್ರಚಾರ ನಡೆಸಲಿದ್ದಾರೆ. ಈ ಕ್ಷೇತ್ರದಲ್ಲಿ ಮರಾಠ ಹಾಗೂ ಲಿಂಗಾಯತ ಮತಗಳು ಬಿಜೆಪಿಯ ಸಾಂಪ್ರದಾಯಿಕ ಮತಗಳಾಗಿವೆ. ಆದರೆ, ಆ ಮತಗಳನ್ನು ವಿಭಜಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಯಾರು ವರ್ಗಾವಣೆ ಮಾಡಲಿದ್ದಾರೆ ಎಂಬುದರ ಬಗ್ಗೆ ನಮಗೆ ಅನುಕೂಲವಾಗಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ಹೇಳಿದ್ದಾರೆ.
ಮೇ 19 ರಂದು ಕುಂದಗೋಳ ಹಾಗೂ ಚಿಂಚೋಳಿ ವಿಧಾನಸಭಾ ಉಪಚುನಾವಣೆ ನಡೆಯಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com