ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಮತವೇ ಅಸಿಂಧು!

ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಅಂಚೆ ಮತವನ್ನು ಅಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್
ಬೆಂಗಳೂರು: ಸುಮಲತಾ ಅಂಬರೀಷ್ ಗೆ ಹಾಕಿದ್ದ ಮೊದಲ ಅಂಚೆ ಮತವನ್ನು ಅಸಿಂಧುಗೊಳಿಸಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.  
ಮಂಡ್ಯ ಮೂಲದ ಸಿರ್ ಪಿಎಫ್ ಯೋಧನೊಬ್ಬ ಲೋಕಸಭೆಯ ಚುನಾವಣೆಯ ಮತದಾನ ಹಾಕಿ ನಂತರ ಮತದಾನ ಮಾಡಿದ ಫೊಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದು, ಸದ್ಯ ಫೋಟೋ ವೈರಲ್ ಆಗಿತ್ತು.
ಸಿಆರ್ ಪಿಎಫ್ ಸೇನೆಯ ಯೋಧ ರಾಜನಾಯಕ ಎಂಬುವವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣದಿಂದ ಸ್ಪರ್ಧಿಸಿರುವ ಸುಮಲತಾ ಅಂಬರೀಷ್ ಗೆ ವೋಟ್ ಮಾಡಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು.
ಇದಕ್ಕೆ ಸಂಬಂಧಪಟ್ಟಂತೆ ಮಂಡ್ಯ ಮೂಲದ ವಕೀಲರಾದ ಕಿರಣ್‌ ಅವರು ಕೇಂದ್ರ ಚುನಾವಣಾ ಆಯೋಗಕ್ಕೂ ದೂರು ನೀಡಿದ್ದರು, ದೂರನ್ನು ಪರೀಶಿಲನೆ ನಡೆಸಿದ ಆಯೋಗ ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎನ್ನುವ ಕಾರಣಕ್ಕಾಗಿ ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣಾ ಆಯೋಗಕ್ಕೆ ಮೇ 23ರಂದು ನಡೆಯುವ ಮತ ಏಣಿಕೆ ವೇಳೆಯಲ್ಲಿ ಯೋಧ ರಾಜನಾಯಕ ಅವರ ಪೊಸ್ಟಲ್‌ ಮತವನ್ನು ಗಣನೆಗೆ ತೆಗೆದುಕೊಳ್ಳಬಾರದು ಎಂದು ಆದೇಶ ಹೊರಡಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com