ರೋಹಿಣಿ ಸಿಂಧೂರಿಗೆ ಪರೋಕ್ಷ ಟಾಂಗ್: SSLCಯಲ್ಲಿ ಹಾಸನ ನಂ.1 ಆಗಲು ನನ್ನ ಕೊಡುಗೆಯೂ ಇದೆ: ಭವಾನಿ

ನಾನು ಆಯೋಜಿಸಿದ ಹಲವು ಕಾರ್ಯಕ್ರಮಗಳಿಂದಾಗಿ ಹಾಸನದ ಮಕ್ಕಳು ಎಸ್ಎಸ್ಎಲ್ಸಿಯಲ್ಲಿ ನಂಬರ್ ಆಗಲು ಕಾರಣವಾಯಿತು. ನಮ್ಮ ಪ್ರಯತ್ನಕ್ಕೆ ಭಗವಂತ ಉತ್ತಮ ಫಲಿತಾಂಶವನ್ನು ಕೊಟ್ಟಿದ್ದಾನೆ.
ಭವಾನಿ ರೇವಣ್ಣ
ಭವಾನಿ ರೇವಣ್ಣ
ಹಾಸನ: ನಾನು ಆಯೋಜಿಸಿದ ಹಲವು ಕಾರ್ಯಕ್ರಮಗಳಿಂದಾಗಿ ಹಾಸನದ ಮಕ್ಕಳು ಎಸ್ಎಸ್ಎಲ್ಸಿಯಲ್ಲಿ ನಂಬರ್ ಆಗಲು ಕಾರಣವಾಯಿತು. ನಮ್ಮ ಪ್ರಯತ್ನಕ್ಕೆ ಭಗವಂತ ಉತ್ತಮ ಫಲಿತಾಂಶವನ್ನು ಕೊಟ್ಟಿದ್ದಾನೆ ಎಂದು ಸಚಿವ ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಹೇಳಿದ್ದಾರೆ.
ಹಾಸನ ನಂಬರ್ ಒನ್ ಆಗಲು ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಕಾರಣ ಎಂಬ ಮಾತಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟ ಭವಾನಿ ರೇವಣ್ಣ ಅವರು ಯಾರೇ ಏನೇ ಹೇಳಿಕೊಳ್ಳಲಿ, ಪ್ರಯತ್ನ ಮಾಡಿರೋರಿಗೆ ಗೊತ್ತಿರುತ್ತದೆ ಎಂದು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಭವಾನಿ ಹೇಳಿದ್ದಾರೆ.
ಹಾಸನ ನಂಬರ್ ಒನ್ ಸ್ಥಾನಕ್ಕೆ ಬಂದಿರುವುದು ಖುಷಿಯಾಗಿದೆ. 31ನೇ ಸ್ಥಾನದಿಂದ 7, ನಂತರ ಈಗ ಮೊದಲ ಸ್ಥಾನ ಬಂದಿದೆ. ಇದಕ್ಕೆ ಕೇವಲ ನಮ್ಮ ಕುಟುಂಬ ವರ್ಗ ಮಾತ್ರ ಕಾರಣವಲ್ಲ. ಶಿಕ್ಷಣ ಇಲಾಖೆ ಹಾಗೂ ಮಕ್ಕಳ ಪ್ರಯತ್ನ ದೊಡ್ಡದು. ನಾನು ಆಯೋಜಿಸಿದ ಕಾರ್ಯಕ್ರಮಗಳಿಂದ ಹಾಸನ ಈ ಮಟ್ಟಕ್ಕೆ ಬರಲು ಸಹಕಾರಿಯಾಯಿತು ಎಂದು ಭವಾನಿ ಸಮರ್ಥಿಸಿಕೊಂಡಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com