ಮೇ 23ರ ನಂತರ ಯಾವುದೇ ರಾಜಕೀಯ ಸ್ಫೋಟ ಇಲ್ಲ, ರಾಹುಲ್ ಗಾಂಧಿ ಪ್ರಧಾನಿಯಾಗುತ್ತಾರೆ: ಸಿದ್ದರಾಮಯ್ಯ

ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಯಾವುದೇ ...
ಮಾಜಿ ಸಿಎಂ ಸಿದ್ದರಾಮಯ್ಯ
ಮಾಜಿ ಸಿಎಂ ಸಿದ್ದರಾಮಯ್ಯ
ಕಲಬುರಗಿ: ಮೇ 23ರ ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ, ಸರ್ಕಾರ ಸ್ಥಿರವಾಗಿರುತ್ತದೆ ಎಂದು ಸಮನ್ವಯ ಸಮಿತಿ(ಸಿಎಲ್ ಪಿ) ಅಧ್ಯಕ್ಷರಾಗಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆ ಸಿದ್ದರಾಮಯ್ಯ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಅದರ ಆಯ್ದ ಭಾಗ ಇಲ್ಲಿದೆ.
ಲೋಕಸಭೆ ಚುನಾವಣೆ ಫಲಿತಾಂಶದ ನಂತರ ರಾಜ್ಯ ರಾಜಕೀಯ ಸ್ಫೋಟವಾಗಿ ಮೈತ್ರಿ ಸರ್ಕಾರ ಬಿದ್ದು ಹೋಗುತ್ತದೆ. ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂದು ಅದರ ನಾಯಕರು ಹೇಳುತ್ತಾರೆ. ಹಲವು ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲಿದ್ದಾರೆ ಎಂದು ಸ್ವತಃ ಬಿ ಎಸ್ ಯಡಿಯೂರಪ್ಪನವರೇ ಹೇಳಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ?
-ಮೇ 23ರ ನಂತರ ಮೈತ್ರಿ ಸರ್ಕಾರದ ಮೇಲೆ ಆಕಾಶ ಬೀಳುವುದಿಲ್ಲ. ಮೈತ್ರಿ ಸರ್ಕಾರ ತನ್ನ ಪೂರ್ಣಾವಧಿಯನ್ನು ಪೂರೈಸಲಿದೆ. ಬಿಜೆಪಿ ಧ್ವನಿ ನಂತರ ಕ್ಷೀಣಿಸಲಿದ್ದು ಅಧಿಕಾರಕ್ಕೆ ಬರುವ ಅದರ ಕನಸು ನುಚ್ಚುನೂರಾಗಲಿದೆ.
ನಿಮ್ಮ ಹಲವು ಶಾಸಕರು ಅಸಮಾಧಾನ ಹೊಂದಿ ಬಿಜೆಪಿಯತ್ತ ಹೋಗಲು ಪ್ರಯತ್ನಿಸುತ್ತಿರುವಾಗ ಬಿಜೆಪಿ ಹೇಗೆ ಕನಸು ಕಾಣುವುದನ್ನು ನಿಲ್ಲಿಸುತ್ತದೆ?
ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಸಹಿತ ಯಾರೂ ಕೂಡ ಕಾಂಗ್ರೆಸ್ ತೊರೆಯುವುದಿಲ್ಲ.
ನಿಮ್ಮ ಕೆಲವು ಬೆಂಬಲಿಗರು ಪದೇ ಪದೇ ಹೇಳುವ ಪ್ರಕಾರ ಮೇ 23ರ ನಂತರ ನೀವು ಮುಖ್ಯಮಂತ್ರಿಯಾಗುವ ಸಾಧ್ಯತೆಯಿದೆಯೇ?
ಮತ್ತೆ ನನ್ನ ಉತ್ತರ ಅದುವೇ. ಮೈತ್ರಿ ಸರ್ಕಾರ ಮುಂದುವರಿಯುತ್ತದೆ. ನಾನು ಸಿಎಲ್ ಪಿ ಮುಖ್ಯಸ್ಥನಾಗಿದ್ದು ನಾನು ಅವರ ನಾಯಕ ಎಂದು ನನ್ನ ಬೆಂಬಲಿಗರ ಹೇಳಿಕೆಯಲ್ಲಿ ವ್ಯತ್ಯಾಸವಾಗುವುದಿಲ್ಲ. ನಾನು ಮುಖ್ಯಮಂತ್ರಿಯಾಗಬೇಕೆಂಬ ನನ್ನ ಬೆಂಬಲಿಗರ ಹೇಳಿಕೆ ಅದು ಅವರ ಬಯಕೆಯಾಗಿದೆ.
ಮಧ್ಯಂತರ ಚುನಾವಣೆಯ ಸಾಧ್ಯತೆಯಿದೆಯೇ?
ಆ ಪ್ರಶ್ನೆಯೇ ಉದ್ಭವಿಸುವುದಿಲ್ಲ.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಎಷ್ಟು ಸ್ಥಾನಗಳಲ್ಲಿ ಗೆಲ್ಲಬಹುದು?
ನಾನು ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 24 ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದೇನೆ. ನನ್ನ ಲೆಕ್ಕಾಚಾರದ ಪ್ರಕಾರ, ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟ 18ರಿಂದ 20 ಸೀಟುಗಳನ್ನು ಗೆಲ್ಲಲಿದೆ. ನನ್ನ ಊಹೆ ನಿಜವಾಗುತ್ತದೆ. ಚಿಂಚೋಳಿ ಮತ್ತು ಕುಂದಗೋಳ ಉಪ ಚುನಾವಣೆಗಳನ್ನು ಸಹ ನಾವು ಗೆಲ್ಲುತ್ತೇವೆ.
ಕೇಂದ್ರದಲ್ಲಿ ಲೋಕಸಭೆ ಚುನಾವಣೆ ಫಲಿತಾಂಶ ಹೇಗೆ?

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com