ಬಿಜೆಪಿ,ಆರ್ ಎಸ್ ಎಸ್ ' ಗೋಡ್ಸೆ ಲವರ್ಸ್' - ರಾಹುಲ್ ಗಾಂಧಿ

ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸಿದ ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಇತರ ಇಬ್ಬರು ಬಿಜೆಪಿ ಮುಖಂಡರ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ, ಆರ್ ಎಸ್ ಎಸ್ ಗೋಡ್ಸೆಯ ಲವರ್ಸ್ ಗಳು ಎಂದು ಕರೆದಿದ್ದಾರೆ.

Published: 17th May 2019 12:00 PM  |   Last Updated: 17th May 2019 08:35 AM   |  A+A-


Rahul Gandhi

ರಾಹುಲ್ ಗಾಂಧಿ

Posted By : ABN ABN
Source : ANI
ನವದೆಹಲಿ: ರಾಷ್ಟ್ರಪಿತ ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆಯನ್ನು ಬೆಂಬಲಿಸಿದ ಪ್ರಗ್ಯಾ ಸಿಂಗ್ ಠಾಕೂರ್ ಹಾಗೂ ಇತರ ಇಬ್ಬರು ಬಿಜೆಪಿ ಮುಖಂಡರ ಹೇಳಿಕೆಗಳ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಬಿಜೆಪಿ, ಆರ್ ಎಸ್ ಎಸ್ ಗೋಡ್ಸೆಯ ಲವರ್ಸ್  ಗಳು ಎಂದು ಕರೆದಿದ್ದಾರೆ.

ಬಿಜೆಪಿ, ಆರ್ ಎಸ್ ಎಸ್ ದೇವರ ಲವರ್ಸ್ ಅಲ್ಲ, ಅವರು ಗೋಡ್ಸೆ ಲವರ್ಸ್ ಎಂಬುದು ಅಂತಿಮವಾಗಿ ಗೊತ್ತಾಗಿದೆ ಎಂದು ರಾಹುಲ್ ಗಾಂಧಿ  ಟ್ವೀಟ್ ಮಾಡಿದ್ದಾರೆ.


ನಾಥುರಾಂ ಗೋಡ್ಸೆ ಪರವಾಗಿ ಕರ್ನಾಟಕದ ಬಿಜೆಪಿ ಮುಖಂಡರಾದ ಅನಂತ್ ಕುಮಾರ್  ಹೆಗ್ಡೆ ಹಾಗೂ ನಳಿನ್ ಕುಮಾರ್ ಕಟೀಲು ಹೇಳಿಕೆ ನೀಡಿದ್ದ ನಂತರ ರಾಹುಲ್ ಗಾಂಧಿ ಈ ರೀತಿಯ ಟ್ವೀಟ್ ಮಾಡಿದ್ದಾರೆ.

ಸಂಸದ ನಳಿನ್ ಕುಮಾರ್ ಕಟೀಲ್ ತಾವು "ಗೋಡ್ಸೆ ಕೊಂದವರ ಸಂಖ್ಯೆ 1, ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72, ರಾಜೀವ್ ಗಾಂಧಿ ಕೊಂದವರ ಸಂಖ್ಯೆ 17,000 ಈಗ ನೀವೇ ಹೇಳಿ ಇವರಲ್ಲಿ ಅತೀ ಕ್ರೂರ ಕೊಲೆಗಾರ ಯಾರು?" ಎಂಬ ವಿವಾದಾತ್ಮಕ ಟ್ವೀಟ್ ಮಾಡಿ ನೆಟ್ಟಿಗರ ಆಕ್ರೋಶಕ್ಕೆ ಈಡಾಗಿದ್ದರು.

ನಳಿನ್ ಕುಮಾರ್ ಅವರ ಟ್ವೀಟ್ ಗೆ ಭಾರೀ ಆಕ್ರೋಶ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಅವರು ವಿವಾದಾತ್ಮಕ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಅ;ಲ್ಲದೆ "ನನ್ನಿಂದ ನೋವಾಗಿದ್ದರೆ ಕ್ಷಮಿಸಿ, ಇಲ್ಲಿಗೆ ಈ ಚರ್ಚೆ ಮುಗಿಸೋಣ" ಎಂದು ಟ್ವೀಟ್ ಮಾಡಿದ್ದಾರೆ.

ಗೋಡ್ಸೆ ಪರ ಹೇಳಿಕೆಗಳ ಪರ ಬಿಜೆಪಿ ಹೈಕಮಾಂಡ್ ಕೂಡಾ ಗರಂಗೊಂಡಿದ್ದು, ಮೂವರು ಮುಖಂಡರು 10 ದಿನಗಳೊಳಗೆ ವಿವರಣೆ ನೀಡುವಂತೆ ಪಕ್ಷದ ಶಿಸ್ತು ಸಮಿತಿ ಸೂಚಿಸಿದೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp