ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನನ್ನ ಟ್ವಿಟರ್ ಖಾತೆ ಹ್ಯಾಕ್ ಆಗಿದೆ; ಗೋಡ್ಸೆ ಪರ ಹೇಳಿಕೆ ಬೆನ್ನಲ್ಲೇ ಸಚಿವ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ

ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಕೇಂದ್ರ ಸಚಿನ ಅನಂತ್ ಕುಮಾರ್ ಹೆಗ್ಡೆ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಕೆಲ ಪೋಸ್ಟ್ ಗಳು ನನ್ನ ಗಮನಕ್ಕೆ ಬಾರದೇ ಪೋಸ್ಟ್ ಆಗಿವೆ ಎಂದು ಹೇಳಿದ್ದಾರೆ.
ನವದೆಹಲಿ: ನಾಥೂರಾಮ್ ಗೋಡ್ಸೆ ಪರ ಹೇಳಿಕೆ ನೀಡಿ ಸುದ್ದಿಗೆ ಗ್ರಾಸವಾಗಿದ್ದ ಕೇಂದ್ರ ಸಚಿನ ಅನಂತ್ ಕುಮಾರ್ ಹೆಗ್ಡೆ ತಮ್ಮ ಟ್ವಿಟರ್ ಖಾತೆ ಹ್ಯಾಕ್ ಆಗಿದ್ದು, ಕೆಲ ಪೋಸ್ಟ್ ಗಳು ನನ್ನ ಗಮನಕ್ಕೆ ಬಾರದೇ ಪೋಸ್ಟ್ ಆಗಿವೆ ಎಂದು ಹೇಳಿದ್ದಾರೆ.
ಗಾಂಧೀಜಿ ಹಂತಕ ನಾಥುರಾಮ್​ ಗೋಡ್ಸೆ ಪರ ಸಾದ್ವಿ ಪ್ರಗ್ಯಾಸಿಂಗ್ ಹೇಳಿಕೆ ನೀಡಿದ ಬೆನ್ನಲ್ಲೇ ಅದಕ್ಕೆ ಬೆಂಬಲ ನೀಡಿ ಟ್ವೀಟ್ ಮಾಡಿದ್ದ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ, ಇದೀಗ ತಮ್ಮ ಪೋಸ್ಟ್ ಗಳಿಗೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಅವರು, 'ನನ್ನ ಟ್ವಿಟರ್​ ಖಾತೆ ಹ್ಯಾಕ್​​ ಆಗಿತ್ತು. ಹೀಗಾಗಿ ಕೆಲವು ಟ್ವೀಟ್ ​​ಗಳು ಪೋಸ್ಟ್​ ಆಗಿವೆ ಎಂದು ಅವರು ಹೇಳಿದ್ದಾರೆ. 
ಕಳೆದ ಒಂದು ವಾರದಲ್ಲಿ ನನ್ನ ಟ್ವಿಟರ್​​ ಖಾತೆ ಎರಡು ಬಾರಿ ಹ್ಯಾಕ್ ಆಗಿತ್ತು. ನನ್ನ ಟೈಮ್​ಲೈನ್ ಮೇಲೆ ಕೆಲವು ಟ್ವೀಟ್​​ಗಳನ್ನ ಹಾಕಲಾಗಿತ್ತು. ಅವುಗಳನ್ನ ಸದ್ಯ ಡಿಲೀಟ್​ ಮಾಡಲಾಗಿದೆ. ನನ್ನ ಹೆಸರಿನಲ್ಲಿ ಆಗಿದ್ದ ಪೋಸ್ಟ್​ಗಳಿಗೆ ವಿಷಾದಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
ಅಂತೆಯೇ ಮಹಾತ್ಮ ಗಾಂಧೀಜಿ ಹತ್ಯೆಯನ್ನು ಸಮರ್ಥಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದಿರುವ ಅವರು, ಗಾಂಧೀಜಿ ಹತ್ಯೆಗೆ ಯಾವುದೇ ಸಮರ್ಥನೆ ಅಥವಾ ಅನುಕಂಪ ಇಲ್ಲ. ದೇಶಕ್ಕೆ ಗಾಂಧೀಜಿ  ನೀಡಿದ ಕೊಡುಗೆ ಬಗ್ಗೆ ನಮಗೆಲ್ಲಾ ಅಪಾರ ಗೌರವವಿದೆ ಎಂದು ಟ್ವೀಟ್​ ಮಾಡಿದ್ದಾರೆ.
ಗಾಂಧೀಜಿಯನ್ನು ಹತ್ಯೆ ಮಾಡಿದ ನಾಥುರಾಮ್​ ಗೋಡ್ಸೆ ಒಬ್ಬ ರಾಷ್ಟ್ರಭಕ್ತ ಎಂದು ಭೂಪಾಲ್ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಗ್ಯಾಸಿಂಗ್  ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ನಿನ್ನೆ ಅನಂತ್​ಕುಮಾರ್​ ಹೆಗ್ಡೆ ಅವರ ಖಾತೆಯಿಂದ ಟ್ವೀಟ್​ ಪೋಸ್ಟ್​ ಆಗಿತ್ತು.  7 ದಶಕಗಳ ನಂತರ ಇಂದಿನ ಪೀಳಿಗೆಯು, ಬದಲಾದ ಸನ್ನಿವೇಶದಲ್ಲಿ ಈ ಬಗ್ಗೆ ಚರ್ಚೆ ನಡೆಸುತ್ತಿರುವುದು ಖುಷಿ ತಂದಿದೆ. ಈ ಚರ್ಚೆಯಿಂದ ನಾಥುರಾಂ ಗೋಡ್ಸೆಗೆ ಖುಷಿಯಾಗಿರಬಹುದು ಎಂದು ಟ್ವೀಟ್​ ಮಾಡಲಾಗಿತ್ತು. ಇದು ಭಾರಿ ಸುದ್ದಿಗೆ ಗ್ರಾಸವಾಗಿತ್ತು.

Related Stories

No stories found.

Advertisement

X
Kannada Prabha
www.kannadaprabha.com