ತುಮಕೂರು: ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೊ , ಹಲವು ಕಡೆಗಳಲ್ಲಿ ಭಿತ್ತಿಪತ್ರ

ಮಾಜಿ ಪ್ರಧಾನಿ ಎಚ್ . ಡಿ. ದೇವೇಗೌಡರನ್ನು ತುಮಕೂರಿನಿಂದ ಚುನಾವಣೆಗೆ ನಿಲ್ಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷದ ಹಲವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಇನ್ನೂ ಮಡಗಟ್ಟಿದೆ. ನಗರದ ಹಲವು ಕಡೆಗಳಲ್ಲಿ ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೋ ಎಂಬ ಭಿತ್ತಿಗಳನ್ನು ಅಂಟಿಸಲಾಗಿತ್ತು.

Published: 26th May 2019 12:00 PM  |   Last Updated: 26th May 2019 08:36 AM   |  A+A-


Posters

ಭಿತ್ತಿಪತ್ರ

Posted By : ABN ABN
Source : The New Indian Express
ತುಮಕೂರು: ಮಾಜಿ ಪ್ರಧಾನಿ ಎಚ್ . ಡಿ. ದೇವೇಗೌಡರನ್ನು ತುಮಕೂರಿನಿಂದ ಚುನಾವಣೆಗೆ ನಿಲ್ಲಿಸಿದ್ದಕ್ಕೆ ಕಾಂಗ್ರೆಸ್ ಪಕ್ಷದ ಹಲವು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಆಕ್ರೋಶ ಇನ್ನೂ ಮಡಗಟ್ಟಿದೆ. ನಗರದ ಹಲವು ಕಡೆಗಳಲ್ಲಿ ಪರಮೇಶ್ವರ ಹಠಾವೋ, ಕಾಂಗ್ರೆಸ್ ಬಚಾವೋ ಎಂಬ ಭಿತ್ತಿಗಳನ್ನು ಅಂಟಿಸಲಾಗಿತ್ತು.

ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರ ಭಾವಚಿತ್ರ ಭಿತ್ತಿಪತ್ರಗಳಲ್ಲಿ ಇದೆ. ಭಿತ್ತಿಪತ್ರದ ಕೆಳಗೆ ಇಂತಿ ನೊಂದ ಕಾರ್ಯಕರ್ತರು , ತುಮಕೂರು ಜಿಲ್ಲೆ ಎಂದಿದೆ.

ಬಿಜಿಎಸ್ ವೃತ್ತದ ಬಳಿಯ ಗ್ರಂಥಾಲಯದ ಗೋಡೆ, ಸ್ಕೈವಾಕ್ , ವಾಲ್ಮೀಕಿನಗರದಲ್ಲಿ ಭಿತ್ತಿಪತ್ರಗಳು ಹೆಚ್ಚು ಕಂಡುಬಂದಿವೆ. ತೆರವುಗೊಳಿಸುವಂತೆ  ಪರಮೇಶ್ವರ ಬೆಂಬಲಿಗರು ಮಾಡಿದ ಮನವಿ ನಂತರ ಅವುಗಳನ್ನು ತೆರವುಗೊಳಿಸಲಾಗಿದೆ.

ಕಾಂಗ್ರೆಸ್ ಬಂಡಾಯ ನಾಯಕರಾದ ಮಧುಗಿರಿಯ ಮಾಜಿ ಶಾಸಕ ಕೆಎನ್ ರಾಜಣ್ಣ ಹಾಗೂ ಮಾಜಿ ಸಂಸದ ಎಸ್ ಪಿ ಮುದ್ದಹನುಮೇಗೌಡ ಮತ್ತಿತರ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಬೇಕಿತ್ತು.ದೇವೇಗೌಡರ ಬದಲಿಗೆ ಮುದ್ದ ಹನುಮೇಗೌಡರಿಗೆ ಟಿಕೆಟ್ ನೀಡಬೇಕಾಗಿತ್ತು ಎಂಬುದು ಪಕ್ಷದ ಕಾರ್ಯಕರ್ತರ ಅಭಿಪ್ರಾಯವಾಗಿತ್ತು ಎಂದು ಮೂಲಗಳಿಂದ ತಿಳಿದುಬಂದಿದೆ.

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಎಸ್ . ಪಿ. ಮುದ್ದಹನುಮೇಗೌಡ ಅವರ ಸ್ಪರ್ಧಿಸಿದ್ದರೆ ನನ್ನ ಗೆಲುವು ಕಷ್ಟವಾಗುತ್ತಿತ್ತು . ಎಚ್. ಡಿ. ದೇವೇಗೌಡರು ಬಂದಿದ್ದು ವರವಾಯಿತು ಎಂದು ಬಿಜೆಪಿ ವಿಜೇತ ಅಭ್ಯರ್ಥಿ ಜಿ.ಎಸ್. ಬಸವರಾಜ್ ಹೇಳಿದ್ದಾರೆ.

ಚುನಾವಣೆಯಲ್ಲಿ ಪಕ್ಷದ ಸೋಲಿನ ನೈತಿಕ ಹೊಣೆಯನ್ನು ಜಿಲ್ಲೆಯ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಹೊತ್ತುಕೊಳ್ಳಬೇಕಾಗಿದೆ. ಕುಮಾರಸ್ವಾಮಿ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯುವಂತೆ ಮನವೊಲಿಸಲಾಗಿದೆ ಎಂದು ಪರಮೇಶ್ವರ್ ಹೇಳಿದ್ದಾರೆ.
Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp