ಚುನಾವಣೆಯ ದ್ವೇಷ, ವೈಷಮ್ಯಗಳನ್ನು ಬಿಟ್ಟು ಒಂದೇ ಕುಟುಂಬದಂತೆ ಬದುಕೋಣ- ಸುಮಲತಾ ಅಂಬರೀಷ್

ಚುನಾವಣೆ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಿ ಅಭಿವೃದ್ದಿಯತ್ತ ಚಿಂತಿಸೋಣ ಎಂದು ಸುಮಲತಾ ಅಂಬರೀಷ್ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.
ಸುಮಲತಾ ಅಂಬರೀಷ್
ಸುಮಲತಾ ಅಂಬರೀಷ್

ಮಂಡ್ಯ: ಲೋಕಸಭಾ ಚುನಾವಣಾ ಪ್ರಚಾರದ  ಅಖಾಡದಲ್ಲಿ ಎಂತಹ ಪರಿಸ್ಥಿತಿಯಲ್ಲೂ ವೈಯಕ್ತಿಕ ನಿಂದನೆಗಿಳಿಯದೆ,ಆದರ್ಶ ಮತ್ತು ಅಭಿವೃದ್ಧಿಯ ತಳಹದಿಯ ಮೇಲೆಯೆ ಚುನಾವಣೆ ಗೆಲ್ಲಬಹುದು ಎಂಬುದನ್ನು ತೋರಿಸಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ , ಗೆದ್ದ ನಂತರವೂ ಹಮ್ಮು- ಬಿಮ್ಮು ಇಲ್ಲದೆ  ಅದೇ ಹಾದಿಯಲ್ಲಿ ಸಾಗುವಂತಹ ಸಂದೇಶವೊಂದನ್ನು ನೀಡಿದ್ದಾರೆ.

ಚುನಾವಣೆ ಮುಗಿದಿದೆ ಚುನಾವಣೆಯ ಸಂದರ್ಭದಲ್ಲಿ ಗೆಲುವಿನ ಪ್ರತಿಷ್ಠೆಗಲು ಪರಸ್ಪರ ವೈಷಮ್ಯ ಸಹಜವಾಗಿ ಉಂಟಾಗುತ್ತದೆ ಆದರೆ, ನಾವೆಲ್ಲರೂ ಒಂದೇ ಊರಿನಲ್ಲಿ ಬದುಕುತ್ತಿರುವವರು ಪರಸ್ಪರ ಹೊಂದಾಣಿಕೆಯ ಜೀವ ನಡೆಸುತ್ತಿರುವವರು ಚುನಾವಣೆಯ ದ್ವೇಷ, ವೈಷಮ್ಯಗಳನ್ನು ಬಿಟ್ಟು ಒಂದೇ ಕುಟುಂಬದಂತೆ ಬದುಕೋಣ ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ - ಜೆಡಿಎಸ್ ಬಿಜೆಪಿ ಇವೆಲ್ಲವೂ ಚುನಾವಣೆಗೆ ಮಾತ್ರ ಸೀಮಿತವಾಗಿರಬೇಕು ಚುನಾವಣೆ ನಂತರ ನಮ್ಮ ಊರು ನಮ್ಮ ಸಮಸ್ಯೆಗಳ ವಿಚಾರದಲ್ಲಿ ಸಾಮೂಹಿಕವಾಗಿ ಚರ್ಚಿಸಿ ಅಭಿವೃದ್ದಿಯತ್ತ ಚಿಂತಿಸೋಣ ಎಂದು ಸುಮಲತಾ ಅಂಬರೀಷ್ ಮಂಡ್ಯ ಜನತೆಯಲ್ಲಿ ಮನವಿ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com