ಚಾಮರಾಜನಗರದಲ್ಲಿ ಧ್ರುವನಾರಾಯಣ ಸೋಲು: ಸಚಿವ ಪುಟ್ಟರಂಗಶೆಟ್ಟಿಗೆ ಸಿದ್ದರಾಮಯ್ಯ ಕ್ಲಾಸ್!

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಧ್ರುವನಾರಾಯಣ್ ಸೋಲಿಗೆ ಸಿದ್ದರಾಮಯ್ಯ ಆಪ್ತನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಮೈಸೂರಲ್ಲಿ ಸಿದ್ದರಾಮಯ್ಯ ...

Published: 28th May 2019 12:00 PM  |   Last Updated: 28th May 2019 02:57 AM   |  A+A-


Siddaramiah

ಸಿದ್ದರಾಮಯ್ಯ

Posted By : SD SD
Source : Online Desk
ಮೈಸೂರು:ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಧ್ರುವನಾರಾಯಣ್ ಸೋಲಿಗೆ ಸಿದ್ದರಾಮಯ್ಯ ಆಪ್ತನಿಗೆ ತರಾಟೆ ತೆಗೆದುಕೊಂಡಿದ್ದಾರೆ. ಮೈಸೂರಲ್ಲಿ ಸಿದ್ದರಾಮಯ್ಯ ಅವರನ್ನು ನೋಡಲು ಬಂದ ಆಪ್ತ ಪುಟ್ಟರಂಗಶೆಟ್ಟಿ ಕಂಡು ಸಿದ್ದರಾಮಯ್ಯ ಸಿಡಿಮಿಡಿಗೊಂಡಿದ್ದಾರೆ ಎಂದು ಹೇಳಲಾಗಿದೆ.

ಏನಯ್ಯ ನಿಮ್ಮ ಭಾಗದಲ್ಲಿ ಲೀಡ್ ಕಡಿಮೆ ಬಂದಿದೆಯಂತಲ್ಲ. ಹೀಗೆ ಮಾಡಿದ್ರೆ ಹೇಗೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡಿದ್ದಾರೆ. ಸಿದ್ದು ಸಿಡಿಮಿಡಿಗೊಳ್ಳುತ್ತಿದ್ದಂತೆ ಸಚಿವ ಪುಟ್ಟರಂಗಶೆಟ್ಟಿ ಸ್ಥಳದಿಂದ ಕಾಲ್ಕಿತ್ತರು ಎಂದು ಹೇಳಲಾಗಿದೆ.

ಇನ್ನು ಸಚಿವ ಸಂಪುಟ ಪುನರ್​ ರಚನೆಯಲ್ಲ, ವಿಸ್ತರಣೆ ರೀತಿ ಆಗುತ್ತದೆ. ಖಾಲಿ ಇರುವ ಮಂತ್ರಿ ಸ್ಥಾನಗಳನ್ನು ಈಗ ಭರ್ತಿ ಮಾಡಲಾಗುತ್ತದೆ ಎಂದು  ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಖಾಲಿ ಇರುವ 3 ಸ್ಥಾನಗಳನ್ನು ತುಂಬುವ ಕೆಲಸ ಆಗುತ್ತಿದೆ. ಹಿರಿಯರಿಗೆ ಕೊಕ್​ ಕೊಟ್ಟು ಹೊಸಬರ ಸೇರ್ಪಡೆ ಗೊತ್ತಿಲ್ಲ ಎಂದು ಹೇಳಿದ್ದಾರೆ.
Stay up to date on all the latest ರಾಜಕೀಯ news
Poll
school

ರಾಷ್ಟ್ರೀಯ ಶಿಕ್ಷಣ ನೀತಿ-2020: 5 ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ ಮಾತೃಭಾಷೆಯಲ್ಲಿ ಕಲಿಸುವ ಪ್ರಸ್ತಾಪವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp