ಕಾವೇರಿ ವಿಷಯದಲ್ಲಿ ರಾಜಕೀಯ ಬೇಡ, ಎಲ್ಲರು ಒಗ್ಗಟ್ಟಾಗಿ ಹೋರಾಡೋಣ: ಸುಮಲತಾ

ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ,ಎಲ್ಲವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಕಾವೇರಿ ವಿಚಾರದಲ್ಲಿ ಒಂದಾಗಬೇಕು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ....

Published: 29th May 2019 12:00 PM  |   Last Updated: 29th May 2019 02:54 AM   |  A+A-


Sumalatha Ambareesh

ಸುಮಲತಾ ಅಂಬರೀಷ್

Posted By : SD SD
Source : Online Desk
ಬೆಂಗಳೂರು: ಕಾವೇರಿ ವಿಚಾರದಲ್ಲಿ ರಾಜಕೀಯ ಬೇಡ,ಎಲ್ಲವನ್ನು ಮರೆತು ಎಲ್ಲರೂ ಒಗ್ಗಟ್ಟಾಗಿ ಕಾವೇರಿ ವಿಚಾರದಲ್ಲಿ ಒಂದಾಗಬೇಕು ಎಂದು ಸುಮಲತಾ ಅಂಬರೀಶ್ ಹೇಳಿದ್ದಾರೆ.

ರೆಬೆಲ್ ಸ್ಟಾರ್ ಅಂಬರೀಷ್ ಅವರ ಜನ್ಮ ದಿನಾಚರಣೆ ಹಿನ್ನೆಲೆಯಲ್ಲಿ ಅಂಬರೀಷ್ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿ ವಿಚಾರವಾಗಿ ಪರಿಣಿತ ತಜ್ಞರನ್ನು ಭೇಟಿ ಮಾಡಿದ್ದೇನೆ. ನಾನು ಇನ್ನು ಪ್ರಮಾಣ ವಚನವನ್ನು ಸ್ವೀಕರಿಸಿಲ್ಲ, ಆಗಲೇ ಸಾಕಷ್ಟು ಆರೋಪ ಮಾಡ್ತಿದ್ದಾರೆ.  ಸೋತ ಹತಾಶೆಯಲ್ಲಿ ಕೆಲವರು ಏನೆನೋ ಮಾತಾನಾಡುತ್ತೀದ್ದಾರೆ ಎಂದು ಹೇಳಿದ್ದಾರೆ.

ಮಂಡ್ಯ ಜನತೆ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಅಂಬರೀಶ್ ಅವರೇ ನನಗೆ ಸ್ಪೂರ್ತಿ,  ಐದು ನಿಮಿಷದ ಪಬ್ಲಿಸಿಟಿ ಯಿಂದ ಯಾವುದೇ ಪ್ರಯೋಜನವಿಲ್ಲ, ಜನರು ದೊಡ್ಡ ಸಂಖ್ಯೆಯಲ್ಲಿ ನನ್ನ ಗೆಲ್ಲಿಸಿದ್ದಾರೆ. ಒಗ್ಗಟ್ಟಾಗಿ ಮಾಡಿದರೆ ಎಂಥಾ ಕೆಲಸವನ್ನಾದರು ಬೇಗ ಮಾಡಬಹುದು. ಒಬ್ಬರನ್ನು ಒಬ್ಬರು ಬ್ಲೇಮ್ ಮಾಡಿದರೆ ಯಾವುದೇ ಪ್ರಯೋಜನವಿಲ್ಲ ಎಂದು ಸಲಹೆ ವೀ

ಬಿಜೆಪಿ ಗೆ ಹೋಗುತ್ತೀರಾ ಎಂದಿದಕ್ಕೆ ಜನಾದೇಶ ಏನು ಹೇಳುತ್ತೋ ಅದನ್ನೆ ನಾನು ಮಾಡೋದು. ಇಲ್ಲಿವರೆಗೆ ಯಾರೂ ಸಂಪರ್ಕ ಮಾಡಿಲ್ಲ, ನಾನು ಮೊದಲಿನಿಂದಲೂ ಜನಾದೇಶವನ್ನು ಪಾಲಿಸುತ್ತಿದ್ದೇನೆ . ಮುಂದೇಯೂ ಹಾಗೆಯೇ ಮಾಡುತ್ತೇನೆ ಎಂದು ಸುಮಲತಾ ಅಂಬರೀಶ್ ತಿಳಿಸಿದರು.
Stay up to date on all the latest ರಾಜಕೀಯ news
Poll
Farmers_Protest1

ಹೊಸ ಕೃಷಿ ಕಾನೂನುಗಳ ಬಗ್ಗೆ ರೈತರನ್ನು ದಾರಿ ತಪ್ಪಿಸಲಾಗುತ್ತಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp