ದೋಸ್ತಿ ಸಂಪುಟ ವಿಸ್ತರಣೆ: ಸರಣಿ ಸಭೆ ನಂತರವೂ ಕಾಣದ ಪರಿಹಾರ

ರಾಜ್ಯ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಳೆದ ಮೂರು ದಿನಗಳಿಂಡ ಮೇಲಿಂದ ಮೇಲೆ ಸಭೆ ನಡೆಸುತ್ತಿದೆ. ಆದರೆ ಮುಂದೇನು ಮಾಡಬೇಕೆನ್ನುವ ಬಗೆಗೆ ಇನ್ನೂ ಸ್ಪಷ್ತ ನಿರ್ಧಾರಕ್ಕೆ ಬರಲು ಎರಡೂ ಪಕ್ಷಗಳ ನಾಯಕರು ವಿಫಲರಾಗಿದ್ದಾರೆ
ದೋಸ್ತಿ ಸಂಪುಟ ವಿಸ್ತರಣೆ:  ಸರಣಿ ಸಭೆ ನಂತರವೂ ಕಾಣದ ಪರಿಹಾರ
ದೋಸ್ತಿ ಸಂಪುಟ ವಿಸ್ತರಣೆ: ಸರಣಿ ಸಭೆ ನಂತರವೂ ಕಾಣದ ಪರಿಹಾರ
ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್ ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಸಭೆ ನಡೆಸುತ್ತಿದೆ. ಆದರೆ ಮುಂದೇನು ಮಾಡಬೇಕೆನ್ನುವ ಬಗೆಗೆ ಇನ್ನೂ ಸ್ಪಷ್ತ ನಿರ್ಧಾರಕ್ಕೆ ಬರಲು ಎರಡೂ ಪಕ್ಷಗಳ ನಾಯಕರು ವಿಫಲರಾಗಿದ್ದಾರೆ. ಎರಡೂ ಪಕ್ಷಗಳ ಅಧ್ಯಕ್ಷರಾದ ರಾಹುಲ್ ಗಾಂಧಿ ಹಾಗೂ ದೇವೇಗೌಡ ಈ ವಿಚಾರವಾಗಿ ಮೌನ ತಾಳಿರುವುದು ಇಂತಹಾ ಪರಿಸ್ಥಿತಿಗೆ ತುಸು ಸಹಾಯ ಮಾಡಿದೆ ಎನ್ನಬೇಕು.
ಮಂಗಳವಾರ ಸಂಜೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಾ. ಪರಮೇಶ್ವರ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರುಗಳನ್ನು ಭೇಟಿಯಾಗಿದ್ದರು. ಬುಧವಾರ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಸಮ್ಮಿಶ್ರ ಸರ್ಕಾರದ ಅಂಗಪಕ್ಷಗಳ ಮುಖಂಡರ ಸಭೆ ಆಯೋಜಿಸಿದ್ದರು. ಗುರುವಾರ ಮುಂಜಾನೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದು ಪರಮೇಶ್ವರ ನಾಯಕತ್ವದಲ್ಲಿ ಮತ್ತೊಂದು ಸುತ್ತಿನ ಸಭೆಯೂ ನಡೆದಿಎ. ಗುರುವಾರ ಸಂಜೆ ಮತ್ತೆ ವೇಣುಗೋಪಾಲ್ ಇನ್ನೊಂದು ಸುತ್ತಿನ  ಸಭೆ ನಡೆಸಿದ್ದಾರೆ. ಇದೀಗ ಇಂದು (ಶುಕ್ರವಾರ) ಕುಮಾರಸ್ವಾಮಿ ವೇಣುಗೋಪಾಲ್ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರ ಇನ್ನೊಂದು ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.ಈ ಎಲ್ಲಾ ಸಭೆಗಳಲ್ಲಿ ಮುಖ್ಯವಾಗಿ ರಾಜ್ಯ ಸಚಿವ ಸಂಪುಟ ವಿಸ್ತರಣೆ ಸಂಬಂಧ ಚರ್ಚೆಗಳು ಸಾಗುತ್ತವೆ/ 
"ಜೆಡಿಎಸ್ ಪಕ್ಷವು ತಮ್ಮ ಅಂಗಪಕ್ಷವಾದ ಕಾಂಗ್ರೆಸ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುವುದಾಗಿ ಹೇಳಿದೆ.ನಾವು ಎರಡು ಕ್ಯಾಬಿನೆಟ್ ಸ್ಥಾನ ಬಿಟ್ಟುಕೊಡಲೂ ಸಿದ್ದವಿದ್ದೇವೆ" ಕುಮಾರಸ್ವಾಮಿಯವರ ಆಪ್ತವಲಯದ ಓರ್ವರು ಹೇಳಿದ್ದಾರೆ.
"ಸಿದ್ದರಾಮಯ್ಯ ಮಾತ್ರ ಕ್ಯಾಬಿನೆಟ್ ವಿಸ್ತರಣೆಯನ್ನು ಬಯಸುತ್ತಾರೆ, ಇದರಿಂದಾಗಿ ಈಗ ಸಚಿವರಾಗಿರುವ ಯಾರಿಒಬ್ಬರನ್ನೂ ಕೈಬಿಟ್ಟರೆ ಸರ್ಕಾರಕ್ಕೆ ತೊಂದರೆಯಾಗುವುದಿಲ್ಲ ಎನ್ನಲಾಗಿದೆ. ಆದರೆ  ಪರಮೇಶ್ವರ, ಡಿಕೆ ಶಿವಕುಮಾರ್ ಮೊದಲಾದವರು ಯಾವುದೇ ನಿಷ್ಟಾವಂತ ನಾಯಕರನ್ನು ಸಂಪುಟದಿಂಡ ಹೊರಗಿಡುವುದರಿಂದ ಮತ್ತೆ ಸರ್ಕಾರಕ್ಕೆ ಅಡ್ಡಿಯುಂಟಾಗುವ ಲಕ್ಷಣಗಳಿದೆ ಎಂದು ಅಭಿಪ್ರಾಯ ತಾಳುತ್ತಿದ್ದಾರೆ. " ಓರ್ವ ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಇನ್ನು ಕಾಂಗ್ರೆಸ್ ಆಂತರಿಕ ಮೂಲಗಳು ಹೇಳುವಂತೆ ರಾಹುಲ್ ಗಾಂಧಿ ತಮ್ಮ ಪ್ಕ್ಷದ ಸಾಮಾನ್ಯ ಕಾರ್ಯದರ್ಶಿಗಳೊಡನೆ ಸಂವಹನ ನಡೆಸಲು ನಿರಾಕರಿಸಿದ್ದಾರೆ. ಇದರಿಂದಾಗಿ ವೇಣುಗೋಪಾಲ್  ಅವರಿಗೆ ತಾವೇ ನಿರ್ಧಾರ ತೆಗೆದುಕೊಳ್ಳುವುದು ಕಠಿಣವಾಗಿ ಪರಿಣಮಿಸಿದೆ."ನಾವು ಇದುವರೀಗೆ ಯಾವ ನಿರ್ಧಾರಕ್ಕೆ ಬಂದಿಲ್ಲ, ಆ ಸಂಬಂಧ ಚರ್ಚಿಸಲಿಲ್ಲ" ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
"ನಾವು ಮಂತ್ರಿಗಳು, ಶಾಸಕರೊಡನೆ ಮಾತುಕತೆ ನಡೆಸುತ್ತೇವೆ, ಹಾಗೆಯೇ ಪಕ್ಷ ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಾವು ಬದ್ದವಾಗಿದ್ದೇವೆ. " ಜಿ. ಪರಮೇಶ್ವರ ಅವರೊಂದಿಗಿನ ಸಭೆಯ ಬಳಿಕ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com