ಬಿಬಿಎಂಪಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ಗೆ ತಲಾ ಒಂದೊಂದು ಸ್ಥಾನದಲ್ಲಿ ಜಯ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ವಾರ್ಡ್ ಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದೊಂದು ವಾರ್ಡ್ ನಲ್ಲಿ ಜಯ ಲಭಿಸಿದೆ.
ಬಿಬಿಎಂಪಿ ಬೈಎಲೆಕ್ಷನ್ :ಬಿಜೆಪಿ,ಕಾಂಗ್ರೆಸ್ ಗೆ ತಲಾ ಒಂದೊಂದು ಸ್ಥಾನದಲ್ಲಿ ಜಯ
ಬಿಬಿಎಂಪಿ ಬೈಎಲೆಕ್ಷನ್ :ಬಿಜೆಪಿ,ಕಾಂಗ್ರೆಸ್ ಗೆ ತಲಾ ಒಂದೊಂದು ಸ್ಥಾನದಲ್ಲಿ ಜಯ
ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎರಡು ವಾರ್ಡ್ ಗಳಿಗೆ ನಡೆದಿದ್ದ ಉಪಚುನಾವಣೆಯಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ತಲಾ ಒಂದೊಂದು ವಾರ್ಡ್ ನಲ್ಲಿ ಜಯ ಲಭಿಸಿದೆ.
ಕಾವೇರಿಪುರ  ಹಾಗೂ ಸಗಾಯಪುರಂ ವಾರ್ಡ್ ಗಳಿಗೆ ಉಪಚುನಾವಣೆ ನಡೆದಿದ್ದು ಕಾವೇರಿಪುರದಲ್ಲಿ ಬಿಜೆಪಿ ಗೆದ್ದರೆ ಸಗಾಯಪುರಂ ವಾರ್ಡ್ "ಕೈ" ವಶವಾಗಿದೆ.
ಕಾವೇರಿಪುರ ವಾರ್ಡ್‌ನಲ್ಲಿ ಬಿಜೆಪಿ ಅಭ್ಯರ್ಥಿ ಪಲ್ಲವಿ ಚನ್ನಪ್ಪ 9507 ಮತಗಳಿಸಿ ಎದುರಾಳಿ ಮೈತ್ರಿ ಅಭ್ಯರ್ಥಿಯಾದ ಸುಶೀಲ ಸುರೇಶ್  ಅವರನ್ನು 78 ಮತಗಳ ಅಂತರದಿಂದ ಮಣಿಸಿದ್ದಾರೆ. ಸುಶೀಲಾ ಅವರಿಗೆ 9429 ಮತಗಳು ಲಭಿಸಿದೆ.
ಇನ್ನು ಸಗಾಯಪುರಂ ವಾರ್ಡ್ ನಲ್ಲಿ ಕಾಂಗ್ರೆಸ್ ನ ಪಳನಿ ಅಮ್ಮಾಳ್ ಪಕ್ಷೇತರ ಅಭ್ಯರ್ಥಿ ಮಾರಿಮುತ್ತು ಅವರನ್ನು 3339 ಮತಗಳಿಂದ ಸೋಲಿಸಿದ್ದಾರೆ. ಚುನಾವಣೆಯಲ್ಲಿ ಪಳನಿ ಅಮ್ಮಾಳ್ ಗೆ 7182 ಮತಗಳು ಲಭಿಸಿದ್ದರೆ ಮಾರಿಮುತ್ತು ಅವರಿಗೆ 4143 ಮತ ಗಳಿಸಿದ್ದರು. ಇನ್ನು ಬಿಜೆಪಿಯ ಜೈರಿಮ್ ಅವರು ಕೇವಲ 431 ಮತಗಳನ್ನು ಪಡೆದು ನಾಲ್ಕನೇ ಸ್ಥಾನಿಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com