ಯಡಿಯೂರಪ್ಪ- ಕುಮಾರಸ್ವಾಮಿ ಮುಖಾಮುಖಿ, ಸಿಎಂ ಕೈ ಕುಲುಕಿದ ಮಾಜಿ ಸಿಎಂ

ಬಿಜೆಪಿ ಸರ್ಕಾರ ರಕ್ಷಿಸಲು ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ನಗರದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕುಮಾರಸ್ವಾಮಿ - ಯಡಿಯೂರಪ್ಪ
ಕುಮಾರಸ್ವಾಮಿ - ಯಡಿಯೂರಪ್ಪ

ಬೆಂಗಳೂರು: ಬಿಜೆಪಿ ಸರ್ಕಾರ ರಕ್ಷಿಸಲು ಬೆಂಬಲ ನೀಡುವುದಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಹಿರಂಗವಾಗಿ ಹೇಳಿಕೆ ನೀಡಿದ ಬೆನ್ನಲ್ಲೇ ನಗರದಲ್ಲಿಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಭೇಟಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಇಂದು ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಉದ್ಯಮಿ ವಸುಂಧರ ಮತ್ತು ರಾಜ ಭಾಗಮಾನೆ ಅವರ ಪುತ್ರನ ಮದುವೆ ಕಾರ್ಯಕ್ರಮವಿತ್ತು. ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜು ಆಹ್ವಾನದ ಮೇರೆಗೆ ಈ ಇಬ್ಬರೂ ನಾಯಕರು ವಿವಾಹ ಮಹೋತ್ಸವಕ್ಕೆ ತೆರಳಿದ್ದರು.

ಕಾಕತಾಳೀಯವೇನೋ ಎಂಬಂತೆ ಈ ಸಂದರ್ಭದಲ್ಲಿ ಯಡಿಯೂರಪ್ಪ , ಹೆಚ್.ಡಿ.ಕುಮಾರಸ್ವಾಮಿ ಪರಸ್ಪರ ಎದುರುರಾದರು. ಮುಗುಳುನಗುತ್ತಾ ಕೈ ಕುಲುಕಿ ಕುಶಲೋಪಚರಿ ವಿಚಾರಿಸಿದರು. ಅಕ್ಕ ಪಕ್ಕ ಆಸೀನರಾಗಿ ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಪಿಸು ಮಾತಿನಲ್ಲೇ ಚರ್ಚಿಸಿದರು.

ಯಡಿಯೂರಪ್ಪ ಜೊತೆ ಕೆಲ ಕಾಲ ಚರ್ಚಿಸಿದ ನಂತರ ಕುಮಾರಸ್ವಾಮಿ ಬೇರೆ ಕಡೆ ತೆರಳಿದರು. ಇಬ್ಬರು ನಾಯಕರ ಸೌಜನ್ಯದ ಮಾತುಕತೆಯ ವೇಳೆ ಮಾಜಿ ಮುಖ್ಯಮಂತ್ರಿ ಎಸ್‍ಎಂ ಕೃಷ್ಣ, ಕೇಂದ್ರ ಸಚಿವ ಡಿವಿ ಸದಾನಂದಗೌಡ, ಎಂ.ಬಿ.ಪಾಟೀಲ್ ಕೂಡ ಸ್ಥಳದಲ್ಲಿ ಇದ್ದರು.

ಕೆಲ ದಿನಗಳಿಂದ ಸಿದ್ದರಾಮಯ್ಯ ವಿರುದ್ಧ ನೇರವಾಗಿಯೇ ವಾಗ್ದಾಳಿ ನಡೆಸುತ್ತಿರುವ ಎಚ್‍ಡಿ ಕುಮಾರಸ್ವಾಮಿ ಈಗ ಬಿಜೆಪಿ ವಿರುದ್ಧ ಮೃದು ಧೋರಣೆ ತಳೆದಿದ್ದಾರೆ ಎನ್ನುವ ಮಾತು ಚರ್ಚೆಯಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರವನ್ನು ಬೀಳಿಸಲು ಹೋಗುವುದಿಲ್ಲ ಎಂಬ ಎಚ್‍ಡಿಕೆ ಹೇಳಿಕೆಯ ಬೆನ್ನಲ್ಲೇ ಇಬ್ಬರು ನಾಯಕರ ಮಾತುಕತೆ ಈಗ ಚರ್ಚೆಗೆ ಗ್ರಾಸವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com