ನಳಿನ್ ಕುಮಾರ್ ಕಟೀಲ್
ನಳಿನ್ ಕುಮಾರ್ ಕಟೀಲ್

ಯಡಿಯೂರಪ್ಪ ಸರ್ಕಾರ ವಜಾ ಮಾಡಲು ಕಾಂಗ್ರೆಸ್ ಆಗ್ರಹಿಸಿರುವುದು ಹಾಸ್ಯಾಸ್ಪದ: ನಳಿನ್ ಕುಮಾರ್ ಕಟೀಲ್

ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು  ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಿ, ರಾಜಭವನಕ್ಕೆ ಹೋಗಿ ಬಿ.ಎಸ್. ಯಡಿಯೂರಪ್ಪರವರ  ಸರ್ಕಾರ ವಜಾ ಮಾಡಲು ಆಗ್ರಹಿಸಿ...

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ  ದಿನೇಶ್ ಗುಂಡೂರಾವ್ ಮತ್ತು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು  ಕಾಂಗ್ರೆಸ್ ಸಭೆಯಲ್ಲಿ ತೀರ್ಮಾನಿಸಿ, ರಾಜಭವನಕ್ಕೆ ಹೋಗಿ ಬಿ.ಎಸ್. ಯಡಿಯೂರಪ್ಪರವರ  ಸರ್ಕಾರ ವಜಾ ಮಾಡಲು ಆಗ್ರಹಿಸಿ ವರದಿ ಸಲ್ಲಿಸಿರುವುದು ಹಾಸ್ಯಸ್ಪದ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಾಂಗ್ರೆಸ್‌ಗೆ ಈ ಆಧಾರರಹಿತ ರೀತಿಯ ವಿಡಿಯೋಗಳನ್ನು ಸುಳ್ಳು ಇಟ್ಟುಕೊಂಡು ಮತ್ತು ಆಧಾರ, ರಾಜಕಾರಣ ಅರ್ಥಹೀನವಾಗಿದೆ. ಕಳ್ಳ ಆಡಿಯೋ ಮಾಡುವುದು ಹವ್ಯಾಸವಾಗಿದೆ. ಅನರ್ಹ ಶಾಸಕರ ಪ್ರಕರಣ ಸರ್ವೋಚ್ಛ ನ್ಯಾಯಾಲಯದಲ್ಲಿ ಇರುವಾಗ  ಸುಳ್ಳು ಸಾಕ್ಷಿಗಳನ್ನು ಸೃಷ್ಟಿಸಿ ನ್ಯಾಯಾಲಯವನ್ನು ತಪ್ಪು ದಾರಿಗೆ ಎಳೆಯುವುದು ರಾಜಕೀಯ ಷಡ್ಯಂತ್ರ  ಮಾತ್ರವಲ್ಲದೆ ನ್ಯಾಯಾಲಯಕ್ಕೂ ಚ್ಯುತಿ ತರುವ ಅತ್ಯಂತ ಕೆಟ್ಟ ವಿಷಯವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ನಾಡಿನ  ಜನರಲ್ಲಿ  ಈ  ರೀತಿ ಇಲ್ಲಸಲ್ಲದ ಗೊಂದಲ  ಮಾಡುವುದನ್ನು  ಇಲ್ಲಿಗೆ  ಬಿಟ್ಟು,  ರಾಜಕೀಯ ಪಕ್ಷವಾಗಿ  ಜನರ  ಕಷ್ಟಗಳಿಗೆ  ಸ್ಪಂದನೆ  ಮಾಡುವ  ಕರ್ತವ್ಯ  ಮಾಡಿದರೆ ಒಳ್ಳೆಯದು.  ಸುಳ್ಳು  ಹೇಳಿಕೆಗಳನ್ನು  ನೀಡುವುದು  ಕಾಂಗ್ರೆಸ್  ನಾಯಕರುಗಳ  ದಿನನಿತ್ಯದ ಚಾಳಿಯಾಗಿದ್ದು  ಇದು ತೋರಿಸುತ್ತದೆ. ಅವರ ಭೌದ್ಧಿಕ ದಿವಾಳಿತನವನ್ನು ಎತ್ತಿ ಈ  ಹಿಂದೆ  ಇದೇ  ಕಾಂಗ್ರೆಸ್  ನಾಯಕರುಗಳು  ಯಡಿಯೂರಪ್ಪ  ಮತ್ತು   ಅನಂತ್  ಕುಮಾರ್‌ರವರು  ಮಾತನಾಡಿದ  ಧ್ವನಿ ಸುರುಳಿ  ಬಿಡುಗಡೆ  ಮಾಡಿ ಅನಗತ್ಯ  ರಾದ್ಧಾಂತ  ಮಾಡಿದ್ದು ಈಗ  ಇತಿಹಾಸ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com