ಅಡಿಯೋ ಅಸ್ತ್ರ, ಮುಖ್ಯಮಂತ್ರಿ ವಿರುದ್ಧ ದೂರು ದಾಖಲಾಗಲಿ- ಹೆಚ್. ಡಿ. ದೇವೇಗೌಡ
ಉತ್ತರಾಂಚಲ ರಾಜ್ಯದಲ್ಲಿ ಕುದುರ ವ್ಯಾಪಾರ ಆರೋಪದಡಿ ಅಲ್ಲಿನ ಮುಖ್ಯಮಂತ್ರಿ ವಿರುದ್ಧವೇ ದೂರು ದಾಖಲಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಕೂಡಾ ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದೂರು ದಾಖಲಾಗುವುದು ಸೂಕ್ತ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ.
Published: 03rd November 2019 03:50 PM | Last Updated: 03rd November 2019 03:50 PM | A+A A-

ಸಂಗ್ರಹ ಚಿತ್ರ
ಹಾಸನ: ಉತ್ತರಾಂಚಲ ರಾಜ್ಯದಲ್ಲಿ ಕುದುರ ವ್ಯಾಪಾರ ಆರೋಪದಡಿ ಅಲ್ಲಿನ ಮುಖ್ಯಮಂತ್ರಿ ವಿರುದ್ಧವೇ ದೂರು ದಾಖಲಿಸಲಾಗಿದೆ. ಅದರಂತೆ ಕರ್ನಾಟಕದಲ್ಲಿಯೂ ಕೂಡಾ ಆಪರೇಷನ್ ಕಮಲ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ದೂರು ದಾಖಲಾಗುವುದು ಸೂಕ್ತ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಹೇಳಿದ್ದಾರೆ.
ಜಿಲ್ಲೆಯ ಆಲೂರಿನ ದೇವಾಲಯವೊಂದರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಆಪರೇಷನ್ ಕಮಲ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾದ ಘಟನೆ. ಬಿಜೆಪಿ ಸರ್ಕಾರ ರಚನೆಯಾಗಿರುವುದೇ ಅನೇಕ ಕೆಟ್ಟ ನಡವಳಿಕೆ ಹಾಗೂ ಅನೈತಿಕತೆಯಿಂದ ಎಂದು ಆರೋಪಿಸಿದರು.
ಆಪರೇಷನ್ ಕಮಲದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ನಾಯಕರ ಜೊತೆಗೆ ಮಾತನಾಡಿರುವ ಬಗೆಗಿನ ಧ್ವನಿ ಮುದ್ರಿಕೆ ಬಹಿರಂಗವಾಗಿದೆ. ಈ ವಿಚಾರ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೂ ಗೊತ್ತಿದೆ ಎಂದರು.