ಕಾನೂನು ಬಡವರ ಪರವಾಗಿರಬೇಕು- ಮಧು ಬಂಗಾರಪ್ಪ

ಕಾನೂನು ನ್ಯಾಯಪರವಾಗಿರುವ ಜೊತೆಗೆ ಬಡವರ, ರೈತರ ಪರವಾಗಿಯೂ ಇರಬೇಕಾಗುತ್ತದೆ. ಹಾಗಿಲ್ಲದಿದ್ದಲ್ಲಿ ಕಾನೂನನ್ನು ತಿದ್ದುಪಡಿ ಮಾಡಲು ಶಾಸನ ಸಭೆಯಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಮಧು ಬಂಗಾರಪ್ಪ
ಮಧು ಬಂಗಾರಪ್ಪ

ಶಿವಮೊಗ್ಗ: ಕಾನೂನು ನ್ಯಾಯಪರವಾಗಿರುವ ಜೊತೆಗೆ ಬಡವರ, ರೈತರ ಪರವಾಗಿಯೂ ಇರಬೇಕಾಗುತ್ತದೆ. ಹಾಗಿಲ್ಲದಿದ್ದಲ್ಲಿ ಕಾನೂನನ್ನು ತಿದ್ದುಪಡಿ ಮಾಡಲು ಶಾಸನ ಸಭೆಯಲ್ಲಿ ಶಾಸಕರು ಧ್ವನಿ ಎತ್ತಬೇಕು ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.

ಸೊರಬದ ಕಾಸ್ವಾಡಿಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾವು ಶಾಸಕರಾಗಿದ್ದಾಗ ಸೊರಬ ತಾಲೂಕು ಅನಾವೃಷ್ಟಿಯಿಂದ ನಲುಗಿದ್ದು, ರೈತರಿಗೆ ಆರ್ಥಿಕವಾಗಿ ಶಕ್ತಿ ತುಂಬಲು ಹೆಚ್ಚಿನ ಅನುದಾನವನ್ನು ಸರ್ಕಾರ ನೀಡುವಂತೆಯೂ ಹಾಗೂ ವಿಮಾ ಕಂಪೆನಿಗಳು ನೀಡುವ ಪರಿಹಾರ ಸರಿಯಾಗಿಲ್ಲದರ ವಿರುದ್ಧ ನ್ಯಾಯಾಲಯದಲ್ಲಿ ವ್ಯಾಜ್ಯ ಹೂಡಿದ್ದರಿಂದ ಅತೀ ಹೆಚ್ಚಿನ ಅನುದಾನ ಹಾಗೂ ಬೆಳೆವಿಮೆ ಬರಲು ಸಾಧ್ಯವಾಯಿತು ಎಂದರು. 

ಹಕ್ಕುಪತ್ರಗಳನ್ನು ತಾಲೂಕಿನಲ್ಲಿ ಫಲಾನುಭವಿಗಳಿಗೆ ವಿತರಿಸುವಾಗ ಎಲ್ಲಿಯೋ ಸ್ವಲ್ಪ ಒಂದೆರೆಡು ಲೋಪವಾಗಿರಬಹುದು. ಆದರೆ ಅದನ್ನೇ ನೆಪವನ್ನಾಗಿಟ್ಟುಕೊಂಡು ಶೇ.90ರಷ್ಟು ಫಲಾನುಭವಿಗಳಿಗೆ ತೊಂದರೆ ಆಗುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಜನಪ್ರತಿನಿಧಿಗಳು ಅರಿಯಬೇಕಿದೆ ಎಂದು ಹೇಳಿದರು.

ಪಟ್ಟಣದ ಸರ್ವೇ ನಂ.113 ರಲ್ಲಿ ಹಕ್ಕುಪತ್ರ ನೀಡಿದವರಿಗೆ ಈವರೆಗೂ ಖಾತೆ ಮಾಡದೇ ಸತಾಯಿಸಲಾಗುತ್ತಿದೆ. ಫಲಾನುಭವಿಗಳು ಅದನ್ನು ಪ್ರಶ್ನಿಸಿ ನ್ಯಾಯ ಕೇಳಬೇಕು. ಹಕ್ಕುಪತ್ರ ಪಡೆದವರು ಅದರ ಆಧಾರದ ಮೇಲೆ ಸಾಲ ಮಾಡಿ ಮನೆ ಕಟ್ಟಿಕೊಂಡಿದ್ದಾರೆ.  ಇಂತಹ ಹಕ್ಕುಪತ್ರವನ್ನು ವಜಾ ಮಾಡಲು ಸರ್ಕಾರ ಮುಂದಾದರೆ ಅವರ ಸಾಲವನ್ನು ಕಟ್ಟುವವರು ಯಾರು ? ಎಂದು ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com