ಕುಮಾರಸ್ವಾಮಿ ಊಸರವಳ್ಳಿ ರೀತಿ,ಯಾವಾಗ ಬಣ್ಣ ಬದಲಿಸ್ತಾರೆ ಎಂಬುದು ಗೊತ್ತಾಗಲ್ಲ : ಬಿ.ಸಿ.ಪಾಟೀಲ್ 

ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿದರು, ಹಿರೆಕೆರೂರು ಕ್ಷೇತ್ರದ ಅಭಿವೃದ್ಧಿಗೆ ಒಂದಿಷ್ಟೂ ಸಹಕಾರ ನೀಡಲಿಲ್ಲ. ಆದ್ದರಿಂದಲೇ ನಾವು ಕಾಂಗ್ರೆಸ್​ನಿಂದ ಹೊರಬಂದು ನಮ್ಮ ದಾರಿ ನೋಡಿಕೊಳ್ಳಲು ನಿರ್ಧರಿಸಿದ್ದಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.
ಕುಮಾರಸ್ವಾಮಿ
ಕುಮಾರಸ್ವಾಮಿ

ಹಾವೇರಿ: ಕಾಂಗ್ರೆಸ್ ಪಕ್ಷದಲ್ಲಿ ಲಿಂಗಾಯತರನ್ನು ಸಂಪೂರ್ಣವಾಗಿ ಕಡೆಗಣಿಸಿದರು, ಹಿರೆಕೆರೂರು ಕ್ಷೇತ್ರದ ಅಭಿವೃದ್ಧಿಗೆ ಒಂದಿಷ್ಟೂ ಸಹಕಾರ ನೀಡಲಿಲ್ಲ. ಆದ್ದರಿಂದಲೇ ನಾವು ಕಾಂಗ್ರೆಸ್​ನಿಂದ ಹೊರಬಂದು ನಮ್ಮ ದಾರಿ ನೋಡಿಕೊಳ್ಳಲು ನಿರ್ಧರಿಸಿದ್ದಾಗಿ ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ.

ಹಿರೆಕೆರೂರಿನಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು,ಸುಪ್ರೀಂ ಕೋರ್ಟ್​ಎಂದ ಮೇಲೆ ವಾದ, ಪ್ರತಿ ವಾದ, ವಿಚಾರಣೆ, ಮುಂದೂಡಿಕೆ ಎಲ್ಲವೂ ಸಾಮಾನ್ಯವಾಗಿರುತ್ತದೆ. ಈ ಪ್ರಕರಣದಲ್ಲಿ ನಾವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪ್ರತಿವಾದಿಯನ್ನಾಗಿ ಮಾಡಿಲ್ಲ,ಸ್ಪೀಕರ್​ ಅವರನ್ನು ಮಾತ್ರ ಪ್ರತಿವಾದಿ ಯಾಗಿ ಮಾಡಿದ್ದೇವೆ.

ಹಾಗಾಗಿ, ಪಾರ್ಟಿ ಅಲ್ಲದವರ ಬಗ್ಗೆ ಯಾರು ಏನೋ ಹೇಳಿದರೂ ನ್ಯಾಯಪೀಠ ಅದರ ಬಗ್ಗೆ ತಲೆಕೆಡಿ ಸಿಕೊಳ್ಳುವ ಅವಶ್ಯಕತೆ ಇಲ್ಲ ಎನ್ನುವ ಮೂಲಕ ಯಡಿಯೂರಪ್ಪ ಅವರ ವಿಡಿಯೋ ಸಾಕ್ಷ್ಯದಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com