ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಮನೆಗೆ ಎಸ್.ಎಂ.ಕೃಷ್ಣ ಭೇಟಿ

ಡಿ. ಕೆ. ಶಿವಕುಮಾರ್‌ಗೆ ಎಸ್. ಎಂ. ಕೃಷ್ಣ ರಾಜಕೀಯ ಗುರು, ಕುಟುಂಬಕ್ಕೂ ಆಪ್ತರು. ಬುಧವಾರ ರಾತ್ರಿ ಎಸ್. ಎಂ. ಕೃಷ್ಣ ಪತ್ನಿ ಪ್ರೇಮಾ ಅವರ ಜೊತೆ ಸದಾಶಿವ ನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದರು.
ಡಿಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ
ಡಿಕೆ ಶಿವಕುಮಾರ್ ಮತ್ತು ಎಸ್ ಎಂ ಕೃಷ್ಣ

ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚಿಸಿದ್ದಾರೆ.

ಡಿ. ಕೆ. ಶಿವಕುಮಾರ್‌ಗೆ ಎಸ್. ಎಂ. ಕೃಷ್ಣ ರಾಜಕೀಯ ಗುರು, ಕುಟುಂಬಕ್ಕೂ ಆಪ್ತರು. ಬುಧವಾರ ರಾತ್ರಿ ಎಸ್. ಎಂ. ಕೃಷ್ಣ ಪತ್ನಿ ಪ್ರೇಮಾ ಅವರ ಜೊತೆ ಸದಾಶಿವ ನಗರದಲ್ಲಿರುವ ಡಿ. ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ಮಾಡಿ ಮಾತುಕತೆ ನಡೆಸಿದರು

ಶಿವಕುಮಾರ್ ತಾಯಿ, ಪತ್ನಿಗೆ ಮತ್ತೆ ಇ.ಡಿ ಸಮನ್ಸ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಡಿ. ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿದ್ದರು. ದೆಹಲಿಯ ತಿಹಾರ್ ಜೈಲಿನಿಂದ ಅವರು ಬಿಡುಗಡೆಗೊಂಡ ಬಳಿಕ ಮೊದಲ ಬಾರಿಗೆ ಎಸ್. ಎಂ. ಕೃಷ್ಣ ಭೇಟಿ ಮಾಡಿದ್ದಾರೆ.

ಸುಪ್ರೀಂಕೋರ್ಟ್‌ಗೆ ಕೇವಿಯಟ್ ಸಲ್ಲಿಸಿದ ಡಿ. ಕೆ. ಶಿವಕುಮಾರ್ ಡಿ. ಕೆ. ಶಿವಕುಮಾರ್ ಮತ್ತು ಸಂಸದ ಡಿ. ಕೆ. ಸುರೇಶ್ ಎದ್ದು ನಿಂತು ಎಸ್. ಎಂ. ಕೃಷ್ಣ ಜೊತೆ ಮಾತುಕತೆ ನಡೆಸುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಎಸ್. ಎಂ. ಕೃಷ್ಣ ಕಾಂಗ್ರೆಸ್ ಪಕ್ಷ ತೊರೆದಿದ್ದು ಅವರು ಬಿಜೆಪಿಯಲ್ಲಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com