ರಾಜ್ಯಾದ್ಯಂತ ಪಂಡಿತ್ ಜವಾಹರ್ ಲಾಲ್ ನೆಹರು ಜನ್ಮ ದಿನ ಆಚರಿಸಲು ಕೆಪಿಸಿಸಿ ನಿರ್ಧಾರ

ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ಹೆಸರನ್ನು ಅಳಿಸಿಹಾಕಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಗ್ರಗಣ್ಯ ನಾಯಕನ ಅಸ್ತಿತ್ವ ಕಾಪಾಡಲು ಸಕಲ ಪ್ರಯತ್ನದಲ್ಲಿ ನಿರತವಾಗಿದೆ

Published: 07th November 2019 05:11 PM  |   Last Updated: 07th November 2019 05:13 PM   |  A+A-


Congress_Leaders1

ಕಾಂಗ್ರೆಸ್ ನಾಯಕರು

Posted By : Nagaraja AB
Source : UNI

ಬೆಂಗಳೂರು: ದೇಶದ ಪ್ರಪ್ರಥಮ ಪ್ರಧಾನಿ ಪಂಡಿತ್ ಜವಾಹರ್ ಲಾಲ್ ಹೆಸರನ್ನು ಅಳಿಸಿಹಾಕಲು ಬಿಜೆಪಿ ಶತಾಯಗತಾಯ ಪ್ರಯತ್ನ ಮಾಡುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ತನ್ನ ಅಗ್ರಗಣ್ಯ ನಾಯಕನ ಅಸ್ತಿತ್ವ ಕಾಪಾಡಲು ಸಕಲ ಪ್ರಯತ್ನದಲ್ಲಿ ನಿರತವಾಗಿದೆ. ಈ ನಿಟ್ಟಿನಲ್ಲಿ ಈ ಬಾರಿ ನೆಹರು ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ವೈಭವದಿಂದ ಆಚರಿಸಲು ಕೆಪಿಸಿಸಿ ನಿರ್ಧರಿಸಿದೆ.

ಬರಲಿರುವ ನ. 14 ನೆಹರು ಅವರ 130ನೇ ಜನ್ಮದಿನ. ಮಕ್ಕಳ ದಿನವಾಗಿ ಆಚರಿಸುವ ನೆಹರು ಜನ್ಮ ದಿನ ಕಾರ್ಯಕ್ರಮವನ್ನು ರಾಜ್ಯಾದ್ಯಂತ ಆಚರಿಸಲು ತೀರ್ಮಾನಿಸಿದೆ. 

ಸ್ವಾತಂತ್ರ್ಯೋತ್ತರ ಭಾರತ ನಿರ್ಮಾತೃ ನೆಹರು ಅವರ ವ್ಯಕ್ತಿತ್ವವನ್ನು ಬಿಜೆಪಿ ಅವಹೇಳನಕಾರಿಯಾಗಿ ಬಿಂಬಿಸುತ್ತಿದೆ.ಹೀಗಾಗಿ ಜನರಿಗೆ ನೆಹರು ಬಗ್ಗೆ ತಿಳಿಸಲು ಅದ್ದೂರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp