ಶೀಘ್ರವೇ ಕಾಂಗ್ರೆಸ್ ಇಬ್ಬಾಗ ಇನ್ನಷ್ಟು ಕೈ ನಾಯಕರು ಬಿಜೆಪಿಗೆ: ಸಚಿವ ಸಿಟಿ ರವಿ

ಶೀಘ್ರವೇ ಕಾಂಗ್ರೆಸ್ ಪಕ್ಷ ಇಬ್ಬಾಗವಾಗಲಿದು ಇನ್ನಷ್ಟು ಕೈ ಪಕ್ಷದ ನಾಯಕರು ಬಿಜೆಪಿಗೆ ಆಗಮಿಸಲಿದ್ದಾರೆ ಎಂದು ಸಚಿವ ಸಿಟಿ ರವಿ ಸ್ಫೋಟಕ ಹೇಳೀಕೆಯೊಂದನ್ನು ನೀಡಿದ್ದಾರೆ.
ಸಿಟಿ ರವಿ
ಸಿಟಿ ರವಿ

ಚಿಕ್ಕಮಗಳೂರು: ಶೀಘ್ರವೇ ಕಾಂಗ್ರೆಸ್ ಪಕ್ಷ ಇಬ್ಬಾಗವಾಗಲಿದು ಇನ್ನಷ್ಟು ಕೈ ಪಕ್ಷದ ನಾಯಕರು ಬಿಜೆಪಿಗೆ ಆಗಮಿಸಲಿದ್ದಾರೆ ಎಂದು ಸಚಿವ ಸಿಟಿ ರವಿ ಸ್ಫೋಟಕ ಹೇಳೀಕೆಯೊಂದನ್ನು ನೀಡಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಸಚಿವ ರವಿ ಕೆಲ ಕಾಂಗ್ರೆಸ್ ಶಾಅಸಕರು ಬಿಜೆಪಿಗೆ ಬರಲು ಆಸಕ್ತಿ ತೋರಿಸಿದ್ದಾರೆ. ಡಿಸೆಂಬರ್ ಐದರಂದು ರಾಜ್ಯದಲಿ ಉಪಚುನಾವಣೆ ನಡೆಯಲಿದೆ. ಅದಕ್ಕೆ ಮುನ್ನ ಹಾಗೂ ನಂತರದಲ್ಲಿ ಕೆಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರಲಿದ್ದಾರೆ. ಅವರೆಲ್ಲಾ ನಮ್ಮ ಪಕ್ಷದ ಸಿದ್ದಾಂತವನ್ನು ಒಪಿಯೇ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಸಚಿವ ರವಿ ಹೇಳಿದ್ದಾರೆ.

"ಯಾವುದೂ ಕದ್ದು ಮುಚ್ಚಿ ನಡೆಯಲ್ಲ, ಎಷ್ಟು ಜನ ಬರ್ತಾರೆ ಎನ್ನೋದು ಮುಂದೆ ನಿಮಗೆ ತಿಳಿಯಲಿದೆ. ಮತ್ತೆ ಅವರು ಯಾರೂ ವ್ಯವಹಾರ ದೃಷ್ಟಿಯಿಂದ ಬರಲ್ಲ, ಎಲ್ಲರೂ ವೈಚಾರಿಕ ಹಿನ್ನೆಲೆಯಲ್ಲಿಯೇ ಬರ್ತಾರೆ. ಕಾಂಗ್ರೆಸ್ ಶಾಸಕರು, ನಾಯಕರು ಬಿಜೆಪಿಗೆ ಆಗಮಿಸುವುದರೊಡನೆ ಕಾಂಗ್ರೆಸ್ ಇಬ್ಬಾಗವಾಗಲಿದೆ" ಅವರು ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಉಪಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೆಚು ಸ್ಥಾನ ಗಳಿಸಿ ಬಿಜೆಪಿ ಸರ್ಕಾರ ಪತನವಾಗುತ್ತದೆ ಎಂದಿದ್ದ ಹೇಳಿಕೆ ಬಗೆಗೆ ಪ್ರತಿಕ್ರಯಿಸಿದ ಸಚಿವರು "ಅವರ ಭವಿಷ್ಯ ಎಷ್ಟು ಬಾರಿ ನಿಜವಾಗಿದೆ? ನೆಲಕ್ಕೆ ಬಿದ್ರೂ ಮೀಸೆ ಮಣ್ನಾಗಿಲ್ಲ ಅನ್ನೋ ಗಾದೆಮಾತು ಅವರಿಗೆ ಅನ್ವಯಿಸತ್ತೆ. ಈ ಹಿಂದೆ ಮೋದಿ ಪ್ರಧಾನಿ ಆಗಲ್ಲ ಅಂದಿದ್ರು, ನಾನೇ ಮುಖ್ಯಮಂತ್ರಿ ಎಂದು ಎದೆ ತಟ್ಟಿಕೊಂಡು ಹೇಳಿದ್ರು, ಅದ್ಯಾವುದಾದರೂ ಆಗಿದೆಯಾ?" ಅವರು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ..

ಡಿಸೆಂಬರ್ ಐದರಂದು ರಾಜ್ಯದ 15 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು ಇಂದಿನಿಂದಲೇ ನೀತಿ ಸಂಹಿತೆ ಜಾರಿಯಲ್ಲಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com