ಎಲ್ಲಾ 17 ಸ್ಥಾನಗಳಲ್ಲಿ ಗೆಲುವು ನಮ್ಮದೇ: ಸುಪ್ರೀಂ ತೀರ್ಪಿನ ಬಳಿಕ ಯಡಿಯೂರಪ್ಪ ಪ್ರತಿಕ್ರಿಯೆ

ಕಕರ್ನಾಟಕ ಅನರ್ಹ ಶಾಸಕರ ಬಗೆಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು ಈ ಸಂಬಂಧ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ.  
ಯಡಿಯೂರಪ್ಪ
ಯಡಿಯೂರಪ್ಪ

ಬೆಂಗಳೂರು:  ಕಕರ್ನಾಟಕ ಅನರ್ಹ ಶಾಸಕರ ಬಗೆಗೆ ಸುಪ್ರೀಂ ಕೋರ್ಟ್ ತೀರ್ಪು ಬಂದಿದ್ದು ಈ ಸಂಬಂಧ ಮುಖ್ಯಮಂತ್ರಿ  ಬಿಎಸ್ ಯಡಿಯೂರಪ್ಪ ಮೊದಲ ಪ್ರತಿಕ್ರಿಯೆ ಕೊಟ್ಟಿದ್ದಾರೆ. 

ಅನರ್ಹ ಶಾಸಕರಿಗೆ ಚುನಾವಣೆಗೆ ಸ್ಪರ್ಧಿಸಲು ಸುಪ್ರೀಂ ಅವಕಾಶ ಕಲ್ಪಿಸಿದೆ. "ಸುಪ್ರೀಂಕೋರ್ಟ್‌ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ, ಎಲ್ಲಾ 17 ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ತೀರ್ಪನ್ನು ನೀಡಿದೆ. ನಾಳೆಯಿಂದಲೇ ನಾವು ಆ ಎಲ್ಲಾ ಕ್ಷೇತ್ರಗಳ ಪ್ರವಾಸಕ್ಕೆ ತೆರಳುವವರಿದ್ದೇವೆ. ಹಾಗೆಯೇ ನಾವು ಎಲ್ಲಾ 17 ಸ್ಥಾನಗಳನ್ನು ಶೇ. 101ರಷ್ಟು ಗೆದ್ದೇ ತೀರುತ್ತೇವೆ" ಯಡಿಯೂರಪ್ಪ ಹೇಳಿದ್ದಾರೆ.

ಎಲ್ಲಾ 17 ಶಾಸಕರು ಬಿಜೆಪಿಗೆ ಸೇರುತ್ತಾರೆಯೇ ಎಂದು ಕೇಳಲಾಗಿ "ಸಂಜೆಯವರೆಗೆ ಕಾಯಿರಿ. ನಾನು ಅನರ್ಹ ಶಾಸಕರೊಡನೆ ಹಾಗೂ ರಾಷ್ಟ್ರದ ನಾಯಕರೊಡನೆ ಚರ್ಚಿಸುತ್ತೇನೆ. ಸಂಜೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ" ಎಂದು ಹೇಳಿದರು.

ಇನ್ನು ಶರತ್ ಬಚ್ಚೇಗೌಡ ಬಗೆಗೆ ಕೇಳಿದಾಗ "ನಮ್ಮ ಜತೆಗಿರುವವರ ಬಗೆಗೆ ನಾನೇನಾದರೂ ಹೇಳಬಲ್ಲೆ, ಉಳಿದವರ ಚಿಂತೆ ನಮಗೆ ಬೇಡ" ಎಂದು ಸಿಎಂ ತಣ್ಣನೆ ಪ್ರತಿಕ್ರಿಯೆ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com