ನಾನು ಪಕ್ಷದ ಶಿಸ್ತಿನ ಸಿಪಾಯಿ, ಹೈಕಮಾಂಡ್ ನನ್ನ ಕೈಬಿಡುವುದಿಲ್ಲ: ಸವದಿ

ಪಕ್ಷ ಹೇಗೆ ಹೇಳುತ್ತದೆಯೋ ಹಾಗೆ ಅದನ್ನು ನಾನು ಮಾಡುತ್ತೇನೆ. ಪಕ್ಷದ ಪರವಾಗಿ ಉಪಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ಲಕ್ಷ್ಮಣ ಸವದಿ
ಲಕ್ಷ್ಮಣ ಸವದಿ

ಬೆಂಗಳೂರು: ಪಕ್ಷ ಹೇಗೆ ಹೇಳುತ್ತದೆಯೋ ಹಾಗೆ ಅದನ್ನು ನಾನು ಮಾಡುತ್ತೇನೆ. ಪಕ್ಷದ ಪರವಾಗಿ ಉಪಚುನಾವಣೆಯಲ್ಲಿ ಕೆಲಸ ಮಾಡುತ್ತೇನೆ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.

ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಮ್ಮಕಾರ್ಯಕರ್ತರು 25,000 ಜನರನ್ನು ಸೇರಿಸಿ ಪಾದಯಾತ್ರೆ ಮಾಡಬೇಕೆಂದು ಉದ್ದೇಶಿಸಿದ್ದರು. ಕಾರ್ಯಕರ್ತರಿಗೆ ಅಸಮಾಧಾನ ಸಹಜವಾಗಿದೆ. ಆದರೆ, ನಾನು ಪಕ್ಷದ ಶಿಸ್ತಿನ ಸಿಪಾಯಿ. ಅವರಿಗೆ ಪಾದಯಾತ್ರೆ ಮಾಡುವುದು ಬೇಡ ಎಂದು ತಡೆದಿದ್ದೇನೆ ಎಂದು ಅವರು ತಿಳಿಸಿದರು.

ಅಲ್ಲದೆ, ಅಥಣಿ ಮತ್ತು ಕಾಗವಾಡದಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡುತ್ತೇನೆ. ನಾನು ಶಾಸಕನೇ ಅಲ್ಲದವನನ್ನು ಪಕ್ಷದ ಹೈ ಕಮಾಂಡ್ ಗುರುತಿಸಿ ಮಂತ್ರಿ ಮಾಡಿದ್ದಾರೆ. ಮಂತ್ರಿ ಮಾಡುವಾಗಲೇ ಅವರು ಆಲೋಚನೆ ಮಾಡಿಯೇ ನಿರ್ಧಾರ ಮಾಡಿರುತ್ತಾರೆ. ನನ್ನನ್ನು ಸಚಿವ ಸಂಪುಟದಲ್ಲಿ ಮುಂದುವರಿಸಬೇಕು ಎಂದಾದರೆ ಯಾವುದಾದರೂ ರೂಪದಲ್ಲಿ ಮುಂದುವರಿಸುತ್ತಾರೆ. ಇಲ್ಲವಾದರೆ ಇಲ್ಲ. ಅವರು ಯಾವ ನಿರ್ಧಾರ ತೆಗೆದುಕೊಂಡರೂ ಒಪ್ಪವುದು ಅನಿವಾರ್ಯವಾಗಿದೆ. ಒಂದು ಕ್ಷೇತ್ರ ಬಿಟ್ಟು ಕೊಟ್ಟ ಮೇಲೆ ಇನ್ನೊಂದು ಪರ್ಯಾಯ ಕ್ಷೇತ್ರ ಅನಿವಾರ್ಯವಾಗಿದೆ ಎಂದು ಅವರು ಹೇಳಿದರು.

ವಿಧಾನಸಭಾ ಚನಾವಣೆಯಲ್ಲಿ ಅಥಣಿ ಕ್ಷೇತ್ರದಲ್ಲಿ ಸೋತ ಲಕ್ಷ್ಮಣ ಸವದಿ, ಮಹೇಶ್​ ಕುಮಟಹಳ್ಳಿ ರಾಜೀನಾಮೆಯಿಂದ ತೆರವಾದ ಕ್ಷೇತ್ರದಲ್ಲಿ ಸ್ಪರ್ಧಿಸಲು ಉಮೇದು ತೋರಿದ್ದರು. ಆದರೆ, ಈಗ ಪಕ್ಷ ಟಿಕೆಟ್​ ಅನ್ನು ಬಿಜೆಪಿಗೆ ಸೇರ್ಪಡನೆಗೊಂಡ ಅನರ್ಹ ಶಾಸಕ ಮಹೇಶ್​ ಕುಮಟಳ್ಳಿಗೆ ನೀಡಿದ್ದು, ಡಿಸಿಎಂ ಸವದಿ ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com