ಗೋಕಾಕ್- ಅಥಣಿ ಉಪ ಚುನಾವಣೆ: ದಾಯಾದಿಗಳು- ಪಕ್ಷಾಂತರಿಗಳ ನಡುವಿನ ಯುದ್ಧ!

 ಗೋಕಾಕ್ ಮತ್ತು ಅಥಣಿ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆ ವಿಷವಾಗಿದೆ, ಏಕೆಂದರೇ ಎರಡು ಕ್ಷೇತ್ರಗಳಲ್ಲಿ ಪಕ್ಷಾಂತರಿಗಳು ಸ್ಪರ್ಧಿಸಿದ್ದಾರೆ, ಹೀಗಾಗಿ ಎರಡು ಕ್ಷೇತ್ರಗಳು ರಣಕಣವಾಗಿ ಪರಿಣಮಿಸಿವೆ.
ಲಖನ್ ಜಾರಕಿಹೊಳಿ
ಲಖನ್ ಜಾರಕಿಹೊಳಿ

ಬೆಳಗಾವಿ:  ಗೋಕಾಕ್ ಮತ್ತು ಅಥಣಿ ವಿಧಾನಸಭೆ ಉಪ ಚುನಾವಣೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಪ್ರತಿಷ್ಠೆ ವಿಷವಾಗಿದೆ, ಏಕೆಂದರೇ ಎರಡು ಕ್ಷೇತ್ರಗಳಲ್ಲಿ ಪಕ್ಷಾಂತರಿಗಳು ಸ್ಪರ್ಧಿಸಿದ್ದಾರೆ, ಹೀಗಾಗಿ ಎರಡು ಕ್ಷೇತ್ರಗಳು ರಣಕಣವಾಗಿ ಪರಿಣಮಿಸಿವೆ.

ಅನರ್ಹ ಶಾಸಕರಾದ ರಮೇಶ್ ಜಾರಕಿಹೊಳಿ ಮತ್ತು ಮಹೇಶ್ ಕುಮಟಳ್ಳಿ ಕಾಂಗ್ರೆಸ್ -ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಉರುಳಿಸಿ, ನಂತರ ಬಂಡಾಯ ಶಾಸಕರ ತಂಡದಲ್ಲಿ ಮುಂಚೂಣಿಯಲ್ಲಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ಹಲವು ಪ್ರಮುಥ ನಾಯಕರು ಅವರ ಮನವೊಲಿಸಲು ಪ್ರಯತ್ನಿಸಿ ಹೈರಾಣಾಗಿದ್ದರು.

ಗೋಕಾಕ್ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್ ತಳ ಮಟ್ಟದ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದಕೊಂಡು ಪ್ರಚಾರ ಕಾರ್ಯದಲ್ಲಿ ತೊಡಗಲು ಮುಂದಾಗಿದೆ ಎಂದು ತಿಳಿದು ಬಂದಿದೆ. ಗೋಕಾಕ್ ಗ್ರಾಮೀಣ ಭಾಗ ಕಳೆದ ಎರಡು ದಶಕಗಳಿಂದ ರಮೇಶ್ ಜಾರಕಿಹೊಳಿ ಅವರ ಭದ್ರಕೋಟೆಯಾಗಿತ್ತು, 

ಇನ್ನು ಬಿಜೆಪಿ ಸೇರಿರುವ ರಮೇಶ್ ಜಾರಕಿಹೊಳಿ ವಿರುದ್ದ ಅವರ ಸಹೋದರ ಲಖನ್ ಜಾರಕಿಹೊಳಿ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸುತ್ತಿದೆ,.ಈ ನಡುವೆ ಹೊರಗಿನಿಂದ ಬಂದವರಿಗೆ ಮಣೆ ಹಾಕುತ್ತಿರುವುದಕ್ಕೆ ಈಗಾಗಲೇ ಬಿಜೆಪಿಯಲ್ಲಿ ಅಸಮಾಧಾನ ಕೊತ ಕೊತ ಕುದಿಯುತ್ತಿದ್ದು, ಬಹಳ ಜಾಗರೂಕವಾಗಿ ಪ್ರಚಾರ ನಡೆಸಬೇಕಾಗುತ್ತದೆ. 

ಯಡಿಯೂರಪ್ಪ ಸಂಪುಟದಲ್ಲಿ ರಮೇಶ್ ಜಾರಕಿಹೊಳಿ ಅವರು ಭವಿಷ್ಯದ ಡಿಸಿಎಂ ಎಂದೇ ಪ್ರಚಾರವಾಗಿರುವ ಹಿನ್ನೆಲೆಯಲ್ಲಿ ಒತ್ತಡಕ್ಕೆ ಬಿದ್ದಿರುವ ನಾಯಕರು ಬಲವಂತವಾಗಿ ರಮೇಶ್ ಪರವಾಗಿ ಪ್ರಚಾರಕ್ಕೆ ನಿಲ್ಲಬೇಕಾಗಿದೆ.

ಗೋಕಾಕ್ ಸ್ಥಳೀಯ ಸಂಸ್ಥೆಗಳ ಮುಖಂಡರ ರಾಜಿನಾಮೆ ನೀಡಿಸುವಲ್ಲಿ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದರೂ, ಹಲವರು ಕಾಂಗ್ರೆಸ್ ಗೆ ನಿಷ್ಠರಾಗಿದ್ದಾರೆ ಎಂದು ಲಖನ್ ಜಾರಕಿಹೊಳಿ ತಿಳಿಸಿದ್ದಾರೆ. ಜೊತೆಗೆ ತಾವು ಚುನಾವಣೆಯಲ್ಲಿ 50 ಸಾವಿರ ಮತಗಳ ಅಂತರದಿಂದ ಗೆಲ್ಲುವ ವಿಶ್ವಾನ ವ್ಯಕ್ತ ಪಡಿಸಿದ್ದಾರೆ.

ಅಥಣಿಯಲ್ಲಿ ಕಾಂಗ್ರೆಸ್ ಸಾಮರ್ಥ್ಯವನ್ನು ಕಡೆಗಣಿಸಬಾರದು ಎಂದು ಈಗಾಗಲೇ ಹಲವರು ಹೇಳಿದ್ದಾರೆ. ನಾಲ್ಕು ಬಾರಿ ಬಿಜೆಪಿಯಿಂದ ಆಯ್ಕೆಯಾಗಿದ್ದ ರಾಜು ಕಾಗೆ ಅವರನ್ನು ಅಥಣಿಯಿಂದ ಕಣಕ್ಕಿಳಿಸಲು ಕಾಂಗ್ರೆಸ್ ನಿರ್ಧರಿಸಿದೆ. ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಹಲವು ಬಾರಿ ಕುಮಟಳ್ಳಿ ಅವರು ಸ್ಥಳೀಯ ನಾಯಕರ ವಿರೋಧಕ್ಕೆ ಗುರಿಯಾಗಿದ್ದರು. ಗೋಕಾಕ್ ಮತ್ತು ಅಥಣಿಯಲ್ಲಿ ತಮ್ಮದೆ ವಿಜಯ ಎಂದು ಬಿಜೆಪಿ ಹಿರಿಯ ನಾಯಕ ಸುರೇಶ್ ಅಂಗಡಿ ಹೇಳಿದ್ದಾರೆ.

ಕಾಗವಾಡ ವಿಧಾನ ಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಾಜು ಕಾಗೆ ಮಾತನಾಡಿ, ತಾವು ಈಗಾಗಲೇ ಪಕ್ಷದ ನಾಯಕರ ಜೊತೆ ಚರ್ಚಿಸಿದ್ದು, ತಮ್ಮ ಪರವಾಗಿ ಪ್ರಚಾರ ಮಾಡಲು ದೆಹಲಿಯಿಂದ ಸ್ಟಾರ್ ಪ್ರಚಾರಕರು ಆಗಮಿಸಲಿದ್ದಾರೆ, ತಾವು ಹಮ್ಮಿಕೊಂಡಿರುವ ರ್ಯಾಲಿಯಲ್ಲಿ ಹಲವು ಪ್ರಮುಖ ಬಿಜೆಪಿ ನಾಯಕರು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com