ಗೋಕಾಕ್ ರಾಜಕಾರಣ ಯಾರಿಗೂ ಗೊತ್ತಿಲ್ಲ- ಲಖನ್ ಜಾರಕಿಹೊಳಿ

ಗೋಕಾಕ್ ರಾಜಕಾರಣ ಯಾರಿಗೂ ಗೊತ್ತಿಲ್ಲ. ಇಲ್ಲಿನ ಒಳ ಸುಳಿಗಳು ನಮಗಷ್ಟೇ ಗೊತ್ತು  ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ.
ರಮೇಶ್, ಲಖನ್ ಜಾರಕಿಹೊಳಿ
ರಮೇಶ್, ಲಖನ್ ಜಾರಕಿಹೊಳಿ

ಬೆಳಗಾವಿ: ಗೋಕಾಕ್ ರಾಜಕಾರಣ ಯಾರಿಗೂ ಗೊತ್ತಿಲ್ಲ. ಇಲ್ಲಿನ ಒಳ ಸುಳಿಗಳು ನಮಗಷ್ಟೇ ಗೊತ್ತು  ಎಂದು ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೋಕಾಕ ರಾಜಕಾರಣ ಯಾರಿಗೂ ಗೊತ್ತಾಗುವುದಿಲ್ಲ. ಇಲ್ಲಿನ ರಾಜಕೀಯ ಕೇವಲ ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ಗೊತ್ತಿದೆ ಎಂದರು. 

ಸೋಮವಾರ 10 ಗಂಟೆಗೆ  ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದ ಅವರು, ನಾನು ರಮೇಶ್ ಜಾರಕಿಹೊಳಿ ಅವರಂತೆ ಲಕ್ಷ ಲಕ್ಷ ಜನರನ್ನು ಸೇರಿಸುವುದಿಲ್ಲ. ನಿಮಗೆ ನಮ್ಮ ಶಕ್ತಿ ಗೊತ್ತಿದೆ. ಗೋಕಾಕದಲ್ಲಿ ನಾನು ರಾಜಕೀಯ ಮಾಡುವ ಶಕ್ತಿ ಹೊಂದಿದ್ದು, ಜಾರಕಿಹೊಳಿ ಕುಟುಂಬಕ್ಕೆ ಮಾತ್ರ ರಾಜಕೀಯ ಗಣಿತ ಗೊತ್ತಿದೆ ಎಂದು ನಿಗೂಢವಾಗಿ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com