ಸಿಪಿ ಯೋಗೇಶ್ವರ್ ಸೀರೆ ರಾಜಕೀಯ: ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆ ವಶ

ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

Published: 16th November 2019 08:23 AM  |   Last Updated: 16th November 2019 08:23 AM   |  A+A-


Cp Yogeshwar

ಸಿಪಿ ಯೋಗೇಶ್ವರ್

Posted By : Shilpa D
Source : Online Desk

ಮೈಸೂರು: ಉಪ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಹಂಚಲು ತಂದಿದ್ದ 30 ಸಾವಿರ ಸೀರೆಗಳನ್ನು ಮೈಸೂರಿನಲ್ಲಿ ವಶಕ್ಕೆ ಪಡೆಯಲಾಗಿದೆ.

ಮೈಸೂರಿನ ವಿಜಯನಗರದ ಮನೆಯೊಂದರಲ್ಲಿ ಸುಮಾರು 30 ಸಾವಿರ ಸೀರೆಗಳನ್ನು ತುಂಬಿಸಿಡಲಾಗಿತ್ತು, ಈ ಸೀರೆಗಳ ಕವರ್ ಮೇಲೆ ಯೋಗೇಶ್ವರ್ ಗೆ ಮತ ಹಾಕುವಂತೆ ಕರ ಪತ್ರ ಇಡಲಾಗಿತ್ತು. ಮಾಹಿತಿ ಆಧರಿಸಿ ದಾಳಿ ಮಾಡಿದ ಚುನಾವಣಾ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ.

ಸಿಪಿ ಯೋಗೇಶ್ವರ್ ಹುಣಸೂರು ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು, ಆದರೆ ಬದಲಾದ ರಾಜಕೀಯ ಸನ್ನಿವೇಶಗಳಿಂದ ಎಚ್ ವಿಶ್ವನಾಥ್ ಅವರಿಗೆ ಟಿಕೆಟ್ ನೀಡಲಾಗಿದೆ. ಅಭ್ಯರ್ಥಿ ಘೋಷಣೆಗೂ ಮುನ್ನವೇ ಸೀರೆ ಸಂಗ್ರಹಿಸಲ್ಟಟ್ಟಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಈ ಸಂಬಂಧ ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp