ಬಳ್ಳಾರಿಯಲ್ಲಿ ಆನಂದ್ ಸಿಂಗ್ ಹವಾ:  ಮೂಲೆಗುಂಪಾದ ಸಚಿವ ಶ್ರೀರಾಮುಲು!

ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನ ಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ಕಣಕ್ಕಿಳಿದಿದ್ದಾರೆ, ಆನಂದ್ ಸಿಂಗ್ 2018ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.
ಆನಂದ್ ಸಿಂಗ್ ಮತ್ತು ಶ್ರೀರಾಮುಲು
ಆನಂದ್ ಸಿಂಗ್ ಮತ್ತು ಶ್ರೀರಾಮುಲು

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ವಿಜಯನಗರ ವಿಧಾನ ಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಆನಂದ್ ಸಿಂಗ್ ಕಣಕ್ಕಿಳಿದಿದ್ದಾರೆ, ಆನಂದ್ ಸಿಂಗ್ 2018ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಸೇರ್ಪಡೆಯಾಗಿದ್ದರು.

ವಾಲ್ಮೀಕಿ ಸಮಾಜದ ಪ್ರಭಾವಿ ನಾಯಕ ಬಿ. ಶ್ರೀರಾಮುಲು ಸದ್ಯ ಬಳ್ಳಾರಿಯಲ್ಲಿ ಮೂಲೆಗುಂಪಾಗಿದ್ದಾರೆ. ಸದ್ಯ ಬಿಜೆಪಿ ಚುನಾವಣಾ ಲೆಕ್ಕಾಚಾರದಲ್ಲಿ ತೊಡಗಿದೆ, ಹೀಗಾಗಿ ಉಪ ಚುನಾವಣೆಯಿಂದಾಗಿ ಬಳ್ಳಾರಿ ಬಿಜೆಪಿ ಒಡೆದ ಮನೆಯಂತಾಗಿದೆ. 

ಸಾಮಾನ್ಯವಾಗಿ ಬಳ್ಳಾರಿ ಜಿಲ್ಲಾ ಚುನಾವಣೆ ವೇಳೆ ಶ್ರೀರಾಮುಲು ಪ್ರಮುಖ ಪಾತ್ರ ವಹಿಸುತ್ತಿದ್ದರು. ಆದರೆ 2019ರ ಚುನಾವಣೆ ವೇಳೆಗೆ ಹಲವು ಸಂಗತಿಗಳು ಬದಲಾಗಿವೆ, ಡಿಸಿಎಂ ಗೋವಿಂದ್ ಕಾರಜೋಳ ಅವರಿಗೆ ಬಳ್ಳಾರಿ ಉಪ ಚುನಾವಣೆಯ ಹೊಣೆಗಾರಿಕೆ ವಹಿಸಲಾಗಿದೆ,

2000 ನೇ ಇಸವಿಯಿಂದ ಬಳ್ಳಾರಿಯಲ್ಲಿ ಬಿಜೆಪಿ ಪ್ರಾಬಲ್ಯಕ್ಕೆ ಬರಲು ಶ್ರೀರಾಮುಲು ಅವರನ್ನು ಸಾಧನವಾಗಿಸಿಕೊಳ್ಳಲಾಯಿತು, ಆದರೆ ಈಗ ಶ್ರೀರಾಮುಲು ಅವರನ್ನು ನಿರ್ಲಕ್ಷ್ಯಿಸಲಾಗುತ್ತಿದೆ, ಪಕ್ಷದ ಹೈಕಮಾಂಡ್ ಇಲ್ಲಿರುವ ಮೆಜಾರಿಟಿ ಸಮುದಾಯದ ಮತಗಳ ಬಗ್ಗೆ ಅರಿತುಕೊಳ್ಳೂಬೇಕು ಎಂದು ಪಕ್ಷಧ ಕಾರ್ಯಕರ್ತರೊಬ್ಬರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಮುಂದೊಂದು ದಿನ ಇದು ಶ್ರೀರಾಮುಲು ಮತ್ತು ಆನಂದ್ ಸಿಂಗ್ ನಡುವೆ ಜಗಳಕ್ಕೆ ಕಾರಣವಾಗಬಹುದು ಎಂದು ಹೇಳಲಾಗುತ್ತಿದೆ, 2012 ರಲ್ಲಿ ಶ್ರೀರಾಮುಲು ಬಿಜೆಪಿ ತೊರೆದು ಬಿಎಸ್ ಆರ್ ಕಾಂಗ್ರೆಸ್ ಸೇರ್ಪಡೆಯಾದರು.

ಶುಕ್ರವಾರ ಮಾತನಾಡಿದ ಆನಂದ್ ಸಿಂಗ್ ಪಕ್ಷದ ಹೈಕಮಾಂಡ್ ಎಲ್ಲಾ ನಿರ್ಧಾರ ತೆಗೆದುಕೊಂಡಿದೆ ಎಂದು ಹೇಳಿದ್ದಾರೆ, ಆದರೆ  ಇದು ರೆಡ್ಡಿ ಸಹೋದರರ ತಂತ್ರಗಾರಿಕೆ ಎಂದು ಕೆಲವರು ಹೇಳಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಶ್ರೀರಾಮುಲು ಮೊಳಕಾಲ್ಮೂರಿನಿಂದ ಸ್ಪರ್ಧಿಸಬೇಕೆಂಬುದು  ರೆಡ್ಡಿ ಸಹೋದರರ ಬಯಕೆಯಾಗಿತ್ತು. ಶ್ರೀರಾಮುಲು ಚಿತ್ರದುರ್ಗಕ್ಕೆ ಹೋದರೇ ಜಿಲ್ಲೆಯನ್ನು ಹಿಡಿತದಲ್ಲಿಟ್ಟುಕೊಳ್ಳಬಹುದು ಹಾಗೂ ಮಂತ್ರಿಯಾಗಬಹುದು ಎಂಬ ಯೋಜನೆಯಾಗಿತ್ತು, ಆದರೆ ವಿಧಾನಸಭೆ ಚುನಾವಣೆಯಲ್ಲಿ ಕಡಿಮೆ ಸ್ಥಾನ ಬಂದ ಕಾರಣ ಯಾವುದು ಫಲಿಸಲಿಲ್ಲ ಎಂದು ಬಳ್ಳಾರಿ ಬಿಜೆಪಿ ಕಾರ್ಯಕರ್ತ ರಾಚಪ್ಪ ಎಂಬುವರು ಹೇಳಿದ್ದಾರೆ.

ಆದಾದ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರು,  ಶ್ರೀರಾಮುಲು ಅವರನ್ನು ಬಳ್ಳಾರಿ  ಜಿಲ್ಲಾ ಉಸ್ತುವಾರಿಯಾಗಿ ನೇಮಿಸಲಿಲ್ಲ,  ಜೊತೆಗೆ ಡಿಸಿಎಂ ಮಾಡಿ ಎಂಬ ಬೇಡಿಕೆಯನ್ನು ಪರಿಗಣಿಸಲಿಲ್ಲ, 

ಬಿಜೆಪಿಯಿಂದ ಜನಾರ್ದನ ರೆಡ್ಡಿ ಹೊರಗುಳಿದ ಮೇಲೆ ಶ್ರೀರಾಮುಲು ಬಿಎಸ್ ಆರ್ ಕಾಂಗ್ರೆಸ್ ಕಟ್ಟಲು ಯತ್ನಿಸಿ ವಿಫಲರಾದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com