ಅತೃಪ್ತ ಬಿಜೆಪಿ ಮುಖಂಡನಿಗೆ ಜೆಡಿಎಸ್ ಗಾಳ,ಗೋಕಾಕ್ ನಿಂದ ಅಶೋಕ್ ಪೂಜಾರಿ ಕಣಕ್ಕೆ 

ಬೆಳಗಾವಿ ಭಾಗದಲ್ಲಿ ಜಾತ್ಯತೀತ ಜನತಾ ದಳಕ್ಕೆ ಬುನಾದಿ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಅಸಮಾಧಾನಿತ ನಾಯಕರನ್ನು ಜೆಡಿಎಸ್ ಗಾಳ ಹಾಕಿದೆ. 

Published: 17th November 2019 11:15 PM  |   Last Updated: 17th November 2019 11:18 PM   |  A+A-


AshokPujari_lakhan_Ramesh_jarkiholi1

ಅಶೋಕ್ ಪೂಜಾರಿ, ಲಖನೌ, ರಮೇಶ್ ಜಾರಕಿಹೊಳಿ

Posted By : Nagaraja AB
Source : UNI

ಬೆಳಗಾವಿ: ಡಿಸೆಂಬರ್ 5 ರಂದು ನಡೆಯಲಿರುವ ಉಪ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ನಾಳೆ ಕಡೆಯ ದಿನವಾಗಿದ್ದು, ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. 

ಬೆಳಗಾವಿ ಭಾಗದಲ್ಲಿ ಜಾತ್ಯತೀತ ಜನತಾ ದಳಕ್ಕೆ ಬುನಾದಿ ಕಲ್ಪಿಸುವ ನಿಟ್ಟಿನಲ್ಲಿ ಬಿಜೆಪಿ ಅಸಮಾಧಾನಿತ ನಾಯಕರನ್ನು ಜೆಡಿಎಸ್ ಗಾಳ ಹಾಕಿದೆ. 

ಬಿಜೆಪಿ, ಕಾಂಗ್ರೆಸ್ ನಿಂದ ಟಿಕೆಟ್ ಆಕಾಂಕ್ಷಿತರಾಗಿ ಟಿಕೆಟ್ ಗಿಟ್ಟಿಸಿಕೊಳ್ಳಲಾಗದೆ ಪಕ್ಷೇತರನಾಗಿ ಅಖಾಡಕ್ಕಿಳಿಯಲು ಮುಂದಾ ಗಿದ್ದ ಅಶೋಕ್ ಪೂಜಾರಿಗೆ ಜೆಡಿಎಸ್ ಟಿಕೆಟ್ ನೀಡಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳಿಗೆ ಸೋಲುಣಿಸಲು ವೇದಿಕೆ ಕಲ್ಪಿಸಿದೆ.

ರಮೇಶ್ ಜಾರಕಿಹೊಳಿ ಸ್ಪರ್ಧಿಸಿರುವ ಗೋಕಾಕ್ ಕ್ಷೇತ್ರದಲ್ಲಿ ಬಿಜೆಪಿಯ ಅಸಮಾಧಾನಿತ ಮುಖಂಡ ಅಶೋಕ್ ಪೂಜಾರಿ ಯನ್ನು ಸೆಳೆದು ಗೋಕಾಕ್ ನಿಂದ ಕಣಕ್ಕಿಳಿಸುವ ಮೂಲಕ ಮೈತ್ರಿ ಸರ್ಕಾರ ಪತನ ಗೊಳಿಸಿದ ರಮೇಶ್ ಜಾರಕಿಹೊಳಿಗೆ ಬುದ್ದಿಕಲಿಸಲು ಎಚ್ ಡಿ ಕುಮಾರಸ್ವಾಮಿ ಕೊನೆಯ ದಾಳ ಉರುಳಿಸಿದ್ದಾರೆ. ಹೀಗಾಗಿ ಗೋಕಾಕ್ ಕ್ಷೇತ್ರದಲ್ಲಿ ತ್ರಿಕೋನ ಹಣಾಹಣಿ ಕಂಡುಬರಲಿದೆ. 

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp