ಎಂಟಿಬಿ ಅಭ್ಯರ್ಥಿಯಾಗಲು ಶರತ್ ಬಚ್ಚೇಗೌಡ ಒಪ್ಪಿಕೊಂಡಿದ್ದಕ್ಕೆ ನಾನೇ ಸಾಕ್ಷ್ಯಿ: ಕಟ್ಟಾ ಸುಬ್ರಮಣ್ಯ ನಾಯ್ಡು

ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡುವ ಬಗ್ಗೆ ಮುಖ್ಯಮಂತ್ರಿ ಮುಂದೆ ಒಪ್ಪಿಗೆ ವ್ಯಕ್ತಪಡಿಸಿದ್ದಕ್ಕೆ ನಾನೇ ಸಾಕ್ಷ್ಯಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

Published: 18th November 2019 08:21 AM  |   Last Updated: 18th November 2019 08:21 AM   |  A+A-


katta Subramanya Naidu

ಕಟ್ಟಾ ಸುಬ್ರಹ್ಮಣ್ಯ ನಾಯ್ಡು

Posted By : Manjula VN
Source : UNI

ಬೆಂಗಳೂರು: ಹೊಸಕೋಟೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಎಂಟಿಬಿ ನಾಗರಾಜ್ ಗೆ ಟಿಕೆಟ್ ನೀಡುವ ಬಗ್ಗೆ ಮುಖ್ಯಮಂತ್ರಿ ಮುಂದೆ ಒಪ್ಪಿಗೆ ವ್ಯಕ್ತಪಡಿಸಿದ್ದಕ್ಕೆ ನಾನೇ ಸಾಕ್ಷ್ಯಿ ಎಂದು ಮಾಜಿ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಧವಳಗಿರಿ ನಿವಾಸದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮುಂದೆಯೇ ಎಂಟಿಬಿ ನಾಗರಾಜ್ ಅವರಿಗೆ ಟಿಕೆಟ್ ನೀಡುವುದಕ್ಕೆ ಶರತ್ ಬಚ್ಚೇಗೌಡ ಒಪ್ಪಿಕೊಂಡಿದ್ದರು.ಆ ವೇಳೆ ನಾನೂ ಸಹ ಯಡಿಯೂರಪ್ಪ ಅವರ ಮನೆಯಲ್ಲಿದ್ದು ಈ ಘಟನೆಗೆ ನಾನೇ ಸಾಕ್ಷಿಯಾಗಿದ್ದೇನೆಂದು ಹೇಳಿದ್ದಾರೆ. 

ಎಂಟಿಬಿ ಹೊಸಕೋಟೆಲಿ ಬಿಜೆಪಿ ಅಭ್ಯರ್ಥಿಯಾಗಲು ಒಪ್ಪಿ ಕೊಂಡಿದ್ದರು. ನನ್ನ ಮುಂದೆ ಯೇ ಶರತ್ ಹಾಗೂ ಯಡಿಯೂರಪ್ಪ ಚರ್ಚೆ ಮಾಡಿದ್ದಾರೆ. ಎಂಟಿಬಿ ನಾಗರಾಜ್ ಬಗ್ಗೆ ಶರತ್ ಒಪ್ಪಿಕೊಂಡಿಲ್ಲಾ ಎಂದು ನನ್ನ ಮುಂದೆ ಹೇಳಲಿ ನೋಡೋಣ.ಶರತ್ ಬಚ್ಚೇಗೌಡರಿಗೆ ಇನ್ನೂ ವಯಸ್ಸಿದೆ.ನಾಮಪತ್ರ ವಾಪಾಸ್ ತೆಗೆದುಕೊಂಡು ಎಂಟಿಬಿ ನಾಗರಾಜ್ ಪರ ಪ್ರಚಾರ ಮಾಡಲಿ ಎಂದು ಅವರು ಮನವಿ ಮಾಡಿದರು.

Stay up to date on all the latest ರಾಜಕೀಯ news
Poll
Babri Masjid

ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ನ್ಯಾಯ ಒದಗಿಸಲಾಗಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp