ರಮೇಶ್ ಸಚಿವನಾಗಿದ್ದು 'ಲಕ್ಷ್ಮಿ ಕಟಾಕ್ಷ' ದಿಂದ: ಸತೀಶ್ ಜಾರಕಿಹೊಳಿ 

ಲಕ್ಷ್ಮಿ ಹೆಬ್ಬಾಳ್ಕರ್ ತುಂಬಾ ಪವರ್​ಫುಲ್ ಕಾಂಗ್ರೆಸ್ ನಾಯಕಿ. ಮೈತ್ರಿ ಸರ್ಕಾರವಿದ್ದಾಗ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ಆಕೆಯೇ. ಅವರ ಕೈಕಾಲು ಬಿದ್ದು, ಅತ್ತು ಕರೆದು ಈತ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಸತೀಶ್ ಮತ್ತು ರಮೇಶ್ ಜಾರಕಿಹೊಳಿ
ಸತೀಶ್ ಮತ್ತು ರಮೇಶ್ ಜಾರಕಿಹೊಳಿ

ಬೆಳಗಾವಿ: ಲಕ್ಷ್ಮಿ ಹೆಬ್ಬಾಳ್ಕರ್ ತುಂಬಾ ಪವರ್​ಫುಲ್ ಕಾಂಗ್ರೆಸ್ ನಾಯಕಿ. ಮೈತ್ರಿ ಸರ್ಕಾರವಿದ್ದಾಗ ರಮೇಶ್ ಜಾರಕಿಹೊಳಿಯನ್ನು ಮಂತ್ರಿ ಮಾಡಿದ್ದು ಆಕೆಯೇ. ಅವರ ಕೈಕಾಲು ಬಿದ್ದು, ಅತ್ತು ಕರೆದು ಈತ ಮಂತ್ರಿಯಾಗಿದ್ದ ರಮೇಶ್ ಜಾರಕಿಹೊಳಿ ಸಹೋದರ ಸತೀಶ್ ಜಾರಕಿಹೊಳಿ ಆರೋಪಿಸಿದ್ದಾರೆ.

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸತೀಶ್. ರಮೇಶನನ್ನು ಮಂತ್ರಿ ಮಾಡಿದ್ದಕ್ಕೆ ನಾನು ಲಕ್ಷ್ಮಿ  ಹೆಬ್ಬಾಳ್ಕರ್ ಜೊತೆ ಜಗಳ ಆಡಿದ್ದೆ. ಹುಚ್ಚನನ್ನು ಮಂತ್ರಿ ಮಾಡಿದರು ಎಂಬುದು ನನ್ನ ಕೋಪವಾಗಿತ್ತು ಅಷ್ಟೇ. ಅದನ್ನು ಹೊರತು ಪಡಿಸಿದರೇ  ಲಕ್ಷ್ಮಿ, ಡಿಕೆಶಿ ಮತ್ತು ನನ್ನ ನಡುವೆ ಯಾವುದೇ ಜಗಳ ಇರಲಿಲ್ಲ. ಹಿಂದೆ ನಾನು ಲಕ್ಷ್ಮಿ ಮನೆಗೆ ಚಹಾಕ್ಕೆ ಹೋಗಿದ್ದು ನಿಜ. ಈಗ ಲಕ್ಷ್ಮಿ ಹೆಬ್ಬಾಳ್ಕರ್ ಗೋಕಾಕ್ ಕ್ಷೇತ್ರದ ಉಸ್ತುವಾರಿ ಆಗಿದ್ದಾರೆ. ಹೀಗಾಗಿ ಮುಂದೆ ನಾನು ಅವರ ಮನೆಗೆ ಚಹಾ, ಊಟಕ್ಕೆ ಹೋಗುತ್ತೇನೆ ಎಂದು ಸತೀಶ್ ತಿಳಿಸಿದ್ದಾರೆ..

ರಮೇಶ, ಲಕ್ಷ್ಮಿ ಮತ್ತು ಡಿಕೆಶಿ ಒಂದೇ ಗ್ರೂಪ್​ನಲ್ಲಿದ್ದವರು. ಆನಂತರ ಏನೋ ಸಮಸ್ಯೆಯಾಗಿ ಹೊರಬಂದಿದ್ದಾನೆ. ರಮೇಶ ಎರಡು ವರ್ಷದ ಹಿಂದೆ ಡಿಕೆ ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೊರಟಿದ್ದ. ಷೇರುಮಾರುಕಟ್ಟೆ ರೀತಿಯಲ್ಲಿ ರಮೇಶನಿಗೆ ನಾಯಕರು ಏರುಪೇರಾಗುತ್ತಾರೆ. ಮೊದಲು ದಿವಂಗತ ಕೆ.ಎಚ್. ಪಾಟೀಲ್, ಎಸ್.ಎಂ. ಕೃಷ್ಣ, ನಂತರ ಸಿದ್ದರಾಮಯ್ಯ ನಮ್ಮ ಲೀಡರ್ ಎಂದು ರಮೇಶ್ ಹೇಳಿದ್ದ.  ಈಗ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ದವೇ ತಿರುಗಿಬಿದ್ದಿದ್ದಾನೆ  ಎಂದು ಆರೋಪಿಸಿದ್ದಾರೆ.,

ಇಂದು ಲಖನ್ ಜಾರಕಿಹೊಳಿ ಮೆರವಣೆಗೆ ಮೂಲಕ ತೆರಳಿ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎಂದು ಸತೀಶ್ ತಿಳಿಸಿದ್ದಾರೆ..ರಮೇಶ್ ಜಾರಕಿಹೊಳಿ ಕೂಡ 25 ವರ್ಷ ಕೈಚೀಲ ಹಿಡಿದಿದ್ದಾನೆ. ಯಾವುದೇ ಪಕ್ಷದಲ್ಲಿ ಸ್ವಾಮಿ ನಿಷ್ಠೆ ಬೇಕು. ರಾಜಕೀಯದಲ್ಲಿ ಬೆಳೆಯೋಕೆ ಗಾಡ್ ಫಾದರ್ ಬೇಕೇ ಬೇಕು. ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿಎಸ್​ನಲ್ಲಿ ಈ ಸಂಸ್ಕೃತಿ ಇದೆ. ಕೈ ಚೀಲ ಹಿಡಿಯೋದು ಅಂದ್ರೆ ಚಮಚಾಗಿರಿ ಮಾಡೋದು ಅಂತ ಅಲ್ಲ. ರಮೇಶ ಕೂಡ ಶಂಕರಾನಂದರ ಕೈಚೀಲ ಹಿಡಿದು ಓಡಾಡಿರಲಿಲ್ಲವೇ? ಎಂದು ಸತೀಶ್ ಜಾರಕಿಹೊಳಿ ಪ್ರಶ್ನಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com