15 ಕ್ಷೇತ್ರಗಳ ನಾಮಪತ್ರ ಸಲ್ಲಿಕೆ ಮುಕ್ತಾಯ: ಮಿನಿ ಮಹಾಸಮರಕ್ಕೆ ಬಿರುಸಿನ ಪ್ರಚಾರ

ನಾಮಪತ್ರ ಸಲ್ಲಿಕೆಗೆ ಕೊನೆಯ ಸೋಮವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳ ಘಟನಾಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಹದಿನೈದು ಕ್ಷೇತ್ರಗಳ ಉಪ ಚುನಾವಣಾ ಕಣಕ್ಕೆ ಅಖಾಡ ಸಜ್ಜಾಗಿದ್ದು, ಡಿಸೆಂಬರ್ 5 ರಂದು ಉಪಕಣದ ಕದನಕ್ಕೆ ವೇದಿಕೆ ಸಿದ್ದವಾಗಿದೆ.
ಗೋಪಾಲಯ್ಯ ನಾಪಪತ್ರಸಲ್ಲಿಕೆ
ಗೋಪಾಲಯ್ಯ ನಾಪಪತ್ರಸಲ್ಲಿಕೆ

ಬೆಂಗಳೂರು: ನಾಮಪತ್ರ ಸಲ್ಲಿಕೆಗೆ ಕೊನೆಯ ಸೋಮವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈ ಮೂರು ಪಕ್ಷಗಳ ಘಟನಾಘಟಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಹದಿನೈದು ಕ್ಷೇತ್ರಗಳ ಉಪ ಚುನಾವಣಾ ಕಣಕ್ಕೆ ಅಖಾಡ ಸಜ್ಜಾಗಿದ್ದು, ಡಿಸೆಂಬರ್ 5 ರಂದು ಉಪಕಣದ ಕದನಕ್ಕೆ ವೇದಿಕೆ ಸಿದ್ದವಾಗಿದೆ.

ಚಿಕ್ಕಬಳ್ಳಾಪುರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಡಾ.ಕೆ.ಸುಧಾಕರ್, ಕಾಂಗ್ರೆಸ್ ಅಭ್ಯರ್ಥಿ ಆಂಜಿನಪ್ಪ ಇಂದು ನಾಮಪತ್ರ ಸಲ್ಲಿಸಿದರು.ವಿಚಿತ್ರ ಹಾಗೂ ವಿಶೇಷವೆಂದರೆ ಜೆಡಿಎಸ್ ಪಕ್ಷದಿಂದ ಕೆ.ಪಿ.ಬಚ್ಚೇಗೌಡ ಹಾಗೂ ರಾಧಾಕೃಷ್ಣ ಇಬ್ಬರು ನಾಮಪತ್ರ ಸಲ್ಲಿಸುವ ಮೂಲಕ ಗೊಂದಲ, ಕುತೂಹಲಕ್ಕೆ ಕಾರಣವಾಗಿದ್ದಾರೆ.

ಇತ್ತ ಯಶವಂತಪುರ ವಿಧಾನ ಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಎಸ್.ಟಿ.ಸೋಮಶೇಖರ್,ಕಾಂಗ್ರೆಸ್ ಅಭ್ಯರ್ಥಿ ಪಿ.ನಾಗರಾಜ್, ಹಾಗೂ ಜೆಡಿಎಸ್ ಅಭ್ಯರ್ಥಿ ಜವರಾಯಿ ಗೌಡರೂ ನಾಮಪತ್ರ ಸಲ್ಲಿಸಿದರು. 

ಅತ್ತ ಕೆ.ಆರ್.ಪುರಂ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭೈರತಿ ಬಸವರಾಜ್,ಕಾಂಗ್ರೆಸ್ ಅಭ್ಯರ್ಥಿ ನಾರಾಯಣ ಸ್ವಾಮಿ,ಜೆಡಿಎಸ್ ಅಭ್ಯರ್ಥಿ ಸಿ.ಕೃಷ್ಣಮೂರ್ತಿ ಅಪಾರ ಬೆಂಬಲಿಗರ ಮೆರವಣಿಗೆ ಜೊತೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದರು.

ಬಿಜೆಪಿ ಅಭ್ಯರ್ಥಿಯಾಗಿ ಇಂದು ಹಳ್ಳಿ ಹಕ್ಕಿ ಹೆಚ್.ವಿಶ್ವನಾಥ್ ಮಧ್ಯಾಹ್ನ 12 ಗಂಟೆಗೆ ನಾಮಪತ್ರ ಸಲ್ಲಿಸಿದರು. ಇದಾದ ಬಳಿಕ ನಗರಸಭೆ ಆವರಣದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜನೆಗೊಂಡಿರುವ ಬಿಜೆಪಿ ಸಭೆಯಲ್ಲಿ ಅವರು ಭಾಗಿಯಾಗಿದ್ದರು, ಕಾಂಗ್ರೆಸ್​ ನಿಂದ ಎಚ್​, ಪಿ ಮಂಜುನಾಥ್​ ನಾಮಪತ್ರ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com