ಉಪ ಚುನಾವಣೆ: ನಗರದ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ವಿಶ್ವಾಸ

15 ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರ ತೊಡಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿದೆ. ಅಲ್ಲದೆ, ಸರ್ಕಾರ ಅಳಿವು, ಉಳಿವನ್ನೂ ಈ ಚುನಾವಣೆ ನಿರ್ಧರಿಸಲಿದ್ದು, ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಗೆಲ್ಲಲೇ ಬೇಕಾದ ಪರಿಸ್ಥಿತಿ ಬಿಜೆಪಿಗೆ ಎದುರಾಗಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: 15 ಕ್ಷೇತ್ರಗಳ ಉಪಚುನಾವಣೆ ಕಣ ರಂಗೇರ ತೊಡಗಿದ್ದು, ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಈ ಚುನಾವಣೆ ಪ್ರತಿಷ್ಟೆಯ ಕಣವಾಗಿದೆ. ಅಲ್ಲದೆ, ಸರ್ಕಾರ ಅಳಿವು, ಉಳಿವನ್ನೂ ಈ ಚುನಾವಣೆ ನಿರ್ಧರಿಸಲಿದ್ದು, ಚುನಾವಣೆಯಲ್ಲಿ ಅಧಿಕಾರ ಉಳಿಸಿಕೊಳ್ಳಲು ಗೆಲ್ಲಲೇ ಬೇಕಾದ ಪರಿಸ್ಥಿತಿ ಬಿಜೆಪಿಗೆ ಎದುರಾಗಿದೆ. 

15 ವಿಧಾನಸಭಾಕ್ಷೇತ್ರಗಳ ಪೈಕಿ ಬೆಂಗಳೂರಿನ ನಾಲ್ಕು ವಿಧಾನಸಭಾಕ್ಷೇತ್ರಗಳಿಗೂ ಉಪಚುನಾವಣೆ ನಡೆಯಲಿದ್ದು, ಈ ನಾಲ್ಕೂ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ. 

ನಗರದ ನಾಲ್ಕು ವಿಧಾನಸಭಾ ಕ್ಷೇತ್ರಗಳಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಅನರ್ಹ ಶಾಸಕರಿಗೆ ಬಿಜೆಪಿ ಟಿಕೆಟ್ ನೀಡಿದೆ. ಕೆ.ಆರ್.ಪುರಂ, ಮಹಾಲಕ್ಷ್ಮಿ ಲೇಔಟ್, ಶಿವಾಜಿನಗರ ಮತ್ತು ಯಶವಂತಪುರ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದೆ. 

ಶಿವಾಜಿನಗರವನ್ನು ಹೊರತುಪಡಿಸಿದರೆ, ಇನ್ನುಳಿದ ಮೂರು ಕ್ಷೇತ್ರಗಳಲ್ಲೂ 2008ರ ಬಳಿಕ ಬೈರತಿ ಬಸವರಾಜ್, ಗೋಪಾಲಯ್ಯ ಹಾಗೂ ಎಸ್'ಟಿ ಸೋಮಶೇಖರ್ ಅವರು ಎರಡು ಬಾರಿ ಗೆಲುವು ಸಾಧಿಸಿದ್ದಾರೆ. 

ಇನ್ನು ಶಿವಾಜಿನಗರ ಬೆಂಗಳೂರಿನ ಅತ್ಯಂತ ಹಳೆಯ ವಿಧಾನಸಭಾ ಕ್ಷೇತ್ರವಾಗಿದ್ದು, ಈವರೆಗೂ 12 ಚುನಾವಣೆಗಳು ಈ ಕ್ಷೇತ್ರದಲ್ಲಿ ನಡೆದಿವೆ. ಇದರಲ್ಲಿ ಎರಡು ಬಾರಿ ಬಿಜೆಪಿ ಗೆಲವು ಸಾಧಿಸಿದೆ. 2008ರ ಬಳಿಕ ರೋಷನ್ ಬೇಗ್ ಅವರು ಕಾಂಗ್ರೆಸ್ ಟಿಕೆಟ್ ಪಡೆದು ಮೂರು ಬಾರಿ ಗೆಲುವು ಸಾಧಿಸಿದ್ದರು. 

2013ರ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 28 ಕ್ಷೇತ್ರಗಳ ಪೈಕಿ 14 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಬಿಜೆಪಿ 12 ಹಾಗೂ ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಪಕ್ಷ ಹೆಚ್ಚು ಸೀಟುಗಳಲ್ಲಿ ಗೆಲುವು ಸಾಧಿಸುತ್ತದೆ ಎಂಬುದು ಮೊದಲಿನಿಂದಲೂ ಬಂದಿರುವ ನಂಬಿಕೆಯಾಗಿದೆ. 2008ರಲ್ಲಿ ಇದು ಸಾಬೀತಾಗಿತ್ತು. ಬಿಜೆಪಿ ಅಧಿಕಾರದಲ್ಲಿದ್ದಾಗ ನಗರದಲ್ಲಿ 17 ಶಾಸಕರನ್ನು ಹೊಂದಿತ್ತು. 2013ರಲ್ಲಿ ಇದರ ಸಂಖ್ಯೆ 12 ಇಳಿದಿತ್ತು. ಬಳಿಕ 2018ರಲ್ಲಿ 11ಕ್ಕೆ ಇಳಿಕೆಯಾಗಿತ್ತು. 

ಇನ್ನು ಮಹಾಲಕ್ಷ್ಮಿ ಲೇಔಟ್ ನಲ್ಲಿ ನರೇಂದ್ರ ಬಾಬು ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿ 2013ರಲ್ಲಿ ಗೆಲುವು ಸಾಧಿಸಿದ್ದರು. ಬಿಜೆಪಿ ಟಿಕೆಟ್ ನೀಡಿದ ಬಳಿಕ ಉಪ ಮೇಯರ್ ಎಸ್.ಹರೀಶ್ ಹಾಗೂ ನರೇಂದ್ರ ಬಾಬು ನಡುವೆ ಘರ್ಷಣೆ ಏರ್ಪಟ್ಟಿತ್ತು. ಇದರಿಂದ ಗೋಪಾಲಯ್ಯ ಅವರು ಗೆಲುವು ಸಾಧಿಸಲು ದಾರಿ ಮಾಡಿಕೊಟ್ಟಂತಾಗಿತ್ತು. ಈ ಮೂಲಕ ಗೋಪಾಲಯ್ಯ ಅವರು ಜನಪ್ರಿಯಗಳಿಸಿದರು. 

2018ರಲ್ಲಿ ಬಿಜೆಪಿ ನರೇಂದ್ರ ಬಾಬು ಅವರಿಗೆ ಟಿಕೆಟ್ ನೀಡಿ ವಿಧಾನಸಭಾ ಚುನಾವಣೆಗೆ ನಲ್ಲಿಸಿತ್ತು. ಕಾಂಗ್ರೆಸ್ ಪಕ್ಷದ ಮಾಜಿ ಶಾಸಕರಾದ ಹಿನ್ನಲೆಯಲ್ಲಿ ಕೆಲ ಸ್ಥಳೀಯ ನಾಯಕರು ಇದಕ್ಕೆ ಬೇಸರ ವ್ಯಕ್ತಪಡಿಸಿದರು, ಅಲ್ಲದೆ, ನರೇಂದ್ರ ಬಾಬು ಅವರಿಗೆ ಬೆಂಬಲ ನೀಡಲಿಲ್ಲ. ನರೇಂದ್ರ ಬಾಬು ಅವರನ್ನು ಹೊರಗಿನಿಂದ ಬಂದವರೆಂದು ಹೇಳಿದರು. ಇದರಿಂದ ಮತ್ತೆ ಗೋಪಾಲಯ್ಯ ಅವರು ಗೆಲವು ಸಾಧಿಸುವಂತಾಯಿತು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೋಪಾಲಯ್ಯ ಅವರು 88, 2018 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 

ಕೆಆರ್ ಪುರಂನಲ್ಲಿ 2008ರಲ್ಲಿ ನಂದೀಶ್ ರೆಡ್ಡಿಯವರು ಬಿಜೆಪಿ ಅಭ್ಯರ್ಥಿಯಾಗಿ ಗೆಲುವು ಸಾಧಿಸಿದ್ದರು. 2010ರಲ್ಲಿ ಬೈರತಿ ಬಸವರಾಜ್ ಅವರು ಕಾಂಗ್ರೆಸ್ ಕೌನ್ಸಿಲರ್ ಆಗಿದ್ದರು. ಬಳಿಕ ಸಿದ್ದರಾಮಯ್ಯ ಅವರ ಆಪ್ತರಾದರು. 2013ರಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ನಂದೀಶ್ ರೆಡ್ಡಿಯವರನ್ನು ಸೋರಿಸಿ 2018ರಲ್ಲಿ ಶಾಸಕರಾದರು. 

ಯಶವಂತಪುರದಲ್ಲಿ 2008ರಲ್ಲಿ ಮೊದಲ ಬಾರಿಗೆ ಬಿಜೆಪಿ ಗೆಲುವು ಸಾಧಿಸಿತ್ತು. ಶೋಭಾ ಕರಂದ್ಲಾಜೆಯವರು ಶಾಸಕಿಯಾಗಿ ಆಯ್ಕೆಯಾಗಿದ್ದರು. ಎಸ್.ಟಿ ಸೋಮಶೇಖರ್ ಅವರು ಕೆಲವೇ ಅಂತರದಿಂದ ಸೋಲು ಕಂಡಿದ್ದರು. 2013-2018ರಲ್ಲಿ ಮತ್ತೆ ಸೋಮಶೇಖರ್ ಅವರು ಗೆಲುವು ತಮ್ಮದಾಗಿಸಿಕೊಂಡಿದ್ದರು. ಈ ಕ್ಷೇತ್ರದಲ್ಲಿ ಜೆಡಿಎಸ್ ಎರಡನೇ ಸ್ಥಾನ ಪಡೆದುಕೊಂಡಿದ್ದರೆ, ಬಿಜೆಪಿ ಮೂರನೇ ಸ್ಥಾನ ಪಡೆದುಕೊಂಡಿತ್ತು. 2018ರ ಚುನಾವಣೆಯಲ್ಲಿ ಸೋಮಶೇಖರ್ ಅವರು 1,15,273 ಮತಗಳನ್ನು ಪಡೆದುಕೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com