ಆಪರೇಷನ್ ಕಮಲಕ್ಕೆ ಎಂಟಿಬಿ ಹಣ ನೀಡಿದ್ದರಿಂದ ಬಿಎಸ್'ವೈಗೆ ಅವರ ಮೇಲೆ ವಿಶೇಷ ಪ್ರೀತಿ: ಸಿದ್ದರಾಮಯ್ಯ

ಆಪರೇಷನ್ ಕಮಲಕ್ಕೆ ಎಂಟಿಬಿ ನಾಗರಾಜ್ ಹಣ ನೀಡುವುದರಿಂದ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ವಿಶೇಷ ಪ್ರೀತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. 

Published: 22nd November 2019 09:21 AM  |   Last Updated: 22nd November 2019 09:23 AM   |  A+A-


Siddaramaiah

ಸಿದ್ದರಾಮಯ್ಯ

Posted By : manjula
Source : The New Indian Express

ಮೈಸೂರು: ಆಪರೇಷನ್ ಕಮಲಕ್ಕೆ ಎಂಟಿಬಿ ನಾಗರಾಜ್ ಹಣ ನೀಡುವುದರಿಂದ ಯಡಿಯೂರಪ್ಪ ಅವರಿಗೆ ಎಂಟಿಬಿ ಮೇಲೆ ವಿಶೇಷ ಪ್ರೀತಿ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವ್ಯಂಗ್ಯವಾಡಿದ್ದಾರೆ. 

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆದಿಯಾಗಿ ಹಲವು ಕಾಂಗ್ರೆಸ್ ನಾಯಕರು ನನ್ನ ಬಳಿ ಹಣ ಪಡೆದಿದ್ದು, ಈವರೆಗೂ ವಾಪಸ್ ಮಾಡಿಲ್ಲ ಎಂದಿದ್ದ ಹೊಸಕೋಟೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ವಿರದ್ಧ ಸಿದ್ದರಾಮಯ್ಯ ಅವರು ನಿನ್ನೆ ಅಸಮಾಧಾನ ವ್ಯಕ್ತಪಡಿಸಿದ್ದು. ನಾನು ನಾಗರಾಜ್ ಬಳಿ ಸಾಲವನ್ನೇ ತೆಗೆದುಕೊಂಡಿಲ್ಲ. ಎಲ್ಲಿ ವಾಪಸ್ ಕೊಡಲಿ ಎಂದು ಕಿಡಿಕಾರಿದರು. 

ನಾಗರಾಜ್ ಅವರು ಆಪರೇಷನ್ ಕಮನದಲ್ಲಿ ಯಡಿಯೂರಪ್ಪ ಅವರಿಗೆ ಸಾಲ ಕೊಟ್ಟಿದ್ದಾರೆ. ಹೀಗಾಗಿಯೇ ಎಂಟಿಪಿ ಪರ ಯಡಿಯೂರಪ್ಪ ಅವರು ಹೆಚ್ಚು ಒಲವಿನಿಂದ ಪ್ರಚಾರ ಮಾಡುತ್ತಿದ್ದಾರೆ. 

ರಾಜ್ಯ ಸರ್ಕಾರವು ಪಾರದರ್ಶಕ ಉಪ ಚುನಾವಣೆ ನಡೆಸುತ್ತಿಲ್ಲ, ಕುಕ್ಕರ್, ಸೀರೆ ಎಲ್ಲಾ ಸಿಕ್ಕ ಮೇಲೆ ಇನ್ನೆಲ್ಲಿ ಪಾರದರ್ಶಕತೆ? ಇವರು ಮಾರಾಟವಾದಾಗ ದುಡ್ಡು ಬಂದಿತು. ಈಗ ಚುನಾವಣೆಗೂ ಕೊಡುತ್ತಿದ್ದಾರೆ. ಅಡ್ಡಾದಿಡ್ಡಿ ದುಡ್ಡು ಖರ್ಚು ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ. 
 
ನಮ್ಮ ನಿರೀಕ್ಷೆ ಮಾರಿ ಜನರು ಸ್ಪಂದಿಸಿದ್ದಾರೆ. ಜನರೇ ಹೇಳುತ್ತಿದ್ದಾರೆ ಅನರ್ಹರು ಹಣಕ್ಕಾಗಿ ಹೋದವರೆಂದು. ನನ್ನ ಭಾಷಣಕ್ಕೂ ಮುನ್ನ ಜನರೇ ಹೇಳುತ್ತಿದ್ದರು. ನನ್ನ ಪ್ರಕಾರ 15 ಜನರೂ ಸೋಲುತ್ತಾರೆ. ಎಷ್ಟೇ ನಯವಿನಯದಿಂದ ಮಾತನಾಡಿದರೂ ಜನ ಸೋಲಿಸುವುದಂತೂ ಖಚಿತ ಎಂದು ತಿಳಿಸಿದ್ದಾರೆ. 
 
ಇದೇ ವೇಳೆ ಚುನಾವಣೆಗೆ ಮಾಜಿ ಸಚಿವ ಜಿಟಿ.ದೇವೇಗೌಡ ಅವರ ಬೆಂಬಲವನ್ನು ಕೇಳುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಮಾತುಕತೆ ನಡೆಸಲಾಗುತ್ತದೆ. ಉಪಚುನಾವಣಾ ಪ್ರಚಾರದಿಂದ ದೇವೇಗೌಡ ದೂರ ಉಳಿದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಅವರು ಬೆಂಬಲ ನೀಡುತ್ತಾರೆಂದು ವರದಿಗಳು ಬಂದಿವೆ ಎಂದಿದ್ದಾರೆ. 

Stay up to date on all the latest ರಾಜಕೀಯ news
Poll
Narendra Singh Tomar

ಕೃಷಿ ಕಾನೂನು ಸಂಬಂಧ ರೈತರು ಮತ್ತು ಕೇಂದ್ರದ ನಡುವಣ ಬಿಕ್ಕಟ್ಟಿಗೆ ಹೊರಗಿನ ಶಕ್ತಿಗಳು ಕಾರಣ ಎಂದು ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್‌ ಹೇಳಿದ್ದಾರೆ.


Result
ಹೌದು
ಇಲ್ಲ
flipboard facebook twitter whatsapp