ದಾರಿ ತಪ್ಪಿದ ಮಗ, ಅಪ್ಪ ದಾರಿ ತಪ್ಪಿದರೆ ಕ್ರಮ: ಸಂಸದ ಬಚ್ಚೇಗೌಡರಿಗೆ ಆರ್. ಅಶೋಕ್ ಎಚ್ಚರಿಕೆ 

ದಾರಿ ತಪ್ಪಿದ ಮಗನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಅಪ್ಪ ಇನ್ನೂ ದಾರಿ ತಪ್ಪಿಲ್ಲ, ತಪ್ಪಿದರೆ ಕ್ರಮ ಖಚಿತ ಎಂದು ಸಂಸದ ಬಚ್ಚೇಗೌಡಗೆ ಕಂದಾಯ ಸಚಿವ ಆರ್.ಅಶೋಕ್‌ ಎಚ್ಚರಿಕೆ ನೀಡಿದ್ದು, ಉಚ್ಚಾಟನೆಯಾಗಿರುವ ಶರತ್ ಬಚ್ಚೇಗೌಡರನ್ನು ಯಾವ ಕಾರಣಕ್ಕೂ ವಾಪಸ್ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

Published: 22nd November 2019 10:32 PM  |   Last Updated: 22nd November 2019 10:32 PM   |  A+A-


RAshokBacchegowda1

ಆರ್. ಅಶೋಕ್, ಬಚ್ಚೇಗೌಡ

Posted By : Nagaraja AB
Source : UNI

ಬೆಂಗಳೂರು:  ದಾರಿ ತಪ್ಪಿದ ಮಗನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಅಪ್ಪ ಇನ್ನೂ ದಾರಿ ತಪ್ಪಿಲ್ಲ, ತಪ್ಪಿದರೆ ಕ್ರಮ ಖಚಿತ ಎಂದು ಸಂಸದ ಬಚ್ಚೇಗೌಡಗೆ ಕಂದಾಯ ಸಚಿವ ಆರ್.ಅಶೋಕ್‌ ಎಚ್ಚರಿಕೆ ನೀಡಿದ್ದು, ಉಚ್ಚಾಟನೆಯಾಗಿರುವ ಶರತ್ ಬಚ್ಚೇಗೌಡರನ್ನು ಯಾವ ಕಾರಣಕ್ಕೂ ವಾಪಸ್ ಪಕ್ಷಕ್ಕೆ ಕರೆದುಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸದ ಬಚ್ಚೇಗೌಡ ಬೆಂಬಲಿಗರಿಗೆ ಕರೆ ಮಾಡಿ ಶರತ್ ಬಚ್ಚೇಗೌಡನಿಗೆ ಬೆಂಬಲಿಸುವಂತೆ ಸೂಚಿಸುತ್ತಿದ್ದಾರೆ.ಮಗನ ಪರ ಸಭೆ ಮಾಡುತ್ತಿದ್ದಾರೆ ಎನ್ನುವ ಮಾಹಿತಿ ಬಂದಿದೆ ಇದನ್ನು ಕೇಂದ್ರದ ಗಮನಕ್ಕೆ ತರಲಿದ್ದೇವೆ,ಯಾರೇ ಎಷ್ಟೇ ದೊಡ್ಡವರಾದರೂ ಮುಲಾಜಿಲ್ಲದೇ ಪಕ್ಷ ಕ್ರಮ ಕೈಗೊಳ್ಳಲಿದೆ ಎಂದರು. 

ಮಗ ದಾರಿ ತಪ್ಪಿದ್ದ ಕಠಿಣ ಸಂದೇಶ ನೀಡಿದ್ದೆವು ಅಪ್ಪ ಇನ್ನೂ ದಾರಿ ತಪ್ಪಿಲ್ಲ.ತಪ್ಪಿದರೆ ಕ್ರಮ ಖಚಿತ.ಎಂಟಿಬಿ ನಾಗರಾಜ್ ನಮ್ಮ ಗೆಲ್ಲುವ ಅಭ್ಯರ್ಥಿ ಈ ಭಾರಿ ಗೆದ್ದೇ ಗೆಲ್ಲಲಿದ್ದಾರೆ.ಶರತ್ ಬಚ್ಚೇಗೌಡರನ್ನು ಯಾವ ಕಾರಣಕ್ಕೂ ಪಕ್ಷಕ್ಕೆ ವಾಪಸ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ.ಸರ್ಕಾರ‌ ರಚನೆಗೆ ಕಾರಣರಾದ ಎಂಟಿಬಿ ನಾಗರಾಜ್ ವಿರುದ್ಧ ನಿಲ್ಲುವುದು ಅಪರಾಧ ಅದನ್ನು ಶರತ್ ಮಾಡಿದ್ದಾರೆ ಹಾಗಾಗಿ ಅವರನ್ನು ಪಕ್ಷಕ್ಕೆ ವಾಪಸ್ ಪಡೆಯುವ ಪ್ರಶ್ನೆಯೇ ಇಲ್ಲ ಎಂದರು

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp