ಎಂಟಿಬಿ ನಾಗರಾಜ್ ಹೊಸಕೋಟೆ ಕ್ಷೇತ್ರ ಖರೀದಿಗೆ ಯತ್ನಿಸುತ್ತಿದ್ದಾರೆ: ಶರತ್ ಬಚ್ಚೇಗೌಡ

ಬಿಜೆಪಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ  ಶರತ್ ಬಚ್ಚೇಗೌಡ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾರೆ.
ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್
ಶರತ್ ಬಚ್ಚೇಗೌಡ ಮತ್ತು ಎಂಟಿಬಿ ನಾಗರಾಜ್

ಹೊಸಕೋಟೆ: ಬಿಜೆಪಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಹೊಸಕೋಟೆ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿರುವ  ಶರತ್ ಬಚ್ಚೇಗೌಡ ಕ್ಷೇತ್ರದ ಸ್ವಾಭಿಮಾನದ ಪ್ರಶ್ನೆ ಎತ್ತಿದ್ದಾರೆ.

ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ರಣರಂಗದಲ್ಲಿ ಶರತ್ ಬಚ್ಚೇಗೌಡ ಏಕಾಂಗಿ ಹೋರಾಟ ನಡೆಸಿದ್ದಾರೆ,  ತಾವು ಗೆದ್ದೇ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ, ತಮ್ಮ ತಂದೆ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಸೇರಿದಂತೆ ಯಾರ ಸಹಾಯವೂ ಇಲ್ಲದೇ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.

ಬಿಜೆಪಿ ಬಿಟ್ಟು ಪ್ರಚಾರ ನಡೆಸುತ್ತಿದ್ದೀರಿ, ಹೇಗಿದೆ ಪ್ರತಿಕ್ರಿಯೆ?
ಕಳೆದ 45 ದಿನಗಳಿಂದ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದೇನೆ,  ನವೆಂಬರ್ 14 ರಂದು ನಾನು ನಾಮಪತ್ರ ಸಲ್ಲಿಸಿದ್ದೇನೆ, ನಾನು ಪ್ರಚಾರಕ್ಕೆ ಹೋದಲೆಲ್ಲಾ ಉತ್ತರ ಪ್ರತಿಕ್ರಿಯೆ ಸಿಗುತ್ತಿದೆ. ಹೊಸಕೋಟೆ ಒಂದು ವಿಭಿನ್ನ ತಾಲೂಕು, ಇಲ್ಲಿ ಪಕ್ಷಕ್ಕಿಂತ ಜನ ವ್ಯಕ್ತಿಗೆ ಮನ್ನಣೆ ನೀಡುತ್ತಾರೆ, ಬಚ್ಚೇಗೌಡ ಬಿಜೆಪಿಗೆ ಸೇರಿದಾಗ, 3 ಸಾವಿರದಿಂದ 5 ಸಾವಿರ ಮತಗಳಿದ್ದವು. 2008 ರ ವಿಧಾನಸಭೆ ಚುನಾವಣೆ ವೇಳೆಗೆ 98ಸಾವಿರ ಮತಗಳಿಕೆಯಾಗಿದೆ.

ನಿಮಗೆ ಪಕ್ಷದ ಚಿಹ್ನೆಯಿಲ್ಲ, ಇದು ನಿಮಗೆ ಹಿನ್ನಡೆಯಾಗುತ್ತದೆಯಾ?

ಲೋಕಸಭಾ ಚುನಾವಣೆಯಲ್ಲಿ 98,000 ಮತಗಳನ್ನು ಪಡೆಯಲು ನಮಗೆ (ಬಿಜೆಪಿ) ಅನುವು ಮಾಡಿಕೊಟ್ಟಿದ್ದಾರೆ, ನನ್ನದು ಕುಕ್ಕರ್ ಸಿಂಬಲ್ ಎಂಬುದು  ಶೇ, 80 ಮಂದಿಗೆ ಗೊತ್ತಿದೆ.

ಹೊಸಕೋಟೆಯಲ್ಲಿ ತ್ರಿಕೋನ ಸ್ಪರ್ಧೆ?
ಹೌದು, ಖಂಡಿತವಾಗಿಯೂ ಹೊಸಕೋಟೆಯಲ್ಲಿ  ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ, ಎಂಟಿಬಿ ನಾಗರಾಜ್ ಮತ್ತು ಪದ್ಮಾವತಿ ಸುರೇಶ್ ಗಮನಾರ್ಹ ಅಭ್ಯರ್ಥಿಗಳು, ಎಂಟಿಬಿ ನಾಗರಾಜ್ ಕ್ಷೇತ್ರವನ್ನು ಖರೀದಿಸಲು ಮುಂದಾಗಿದ್ದಾರೆ.

ನಿಮ್ಮ ತಂದೆ ಸಂಸದ ಬಚ್ಚೇಗೌಡರಿಂದ ನಿಮಗೆ ಯಾವ ರೀತಿ ಬೆಂಬಲ ಸಿಗುತ್ತಿದೆ.?

ಒಬ್ಬ ತಂದೆಯಾಗಿ ಅವರು ಎಲ್ಲಾ ರೀತಿಯಲ್ಲೂ ಬೆಂಬಲ  ನೀಡುತ್ತಿದ್ದಾರೆ, ರಾಜಕಾರಣಿಯಾಗಿ ಅಲ್ಲ. ಎಂಟಿಬಿ ನಾಗರಾಜ್  ಪಕ್ಷ ತೊರೆದು ಬಿಜೆಪಿ ಸೇರುವ ಮೊದಲು ಕ್ಷೇತ್ರದ ಯಾವುದೇ ಒಬ್ಬ ನಾಗರಿಕರನ್ನು ಭೇಟಿಯಾಗಿ ಚರ್ಚಿಸಿಲ್ಲ.  ಪಕ್ಷ ತೊರೆದರು ಅದೇ ವೇಳೆ ಬಿಜೆಪಿ ಸೇರ್ಪಡೆಯಾದರು, ಈ ಚುನಾವಣೆ ನಮ್ಮನ್ನು ನಾವು ರಕ್ಷಿಸಿಕೊಳ್ಳುವುದಾಗಿ ಹೇಳಿದ್ದಾರೆ, ಇಬ್ಬರು ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅವರಿಬ್ಬರು ಸ್ಥಳಿಯರಲ್ಲ, ಹೊರಗಿನವರು, ಹಿಗಾಗಿ ಜನ ನನಗೆ ಮತ ಹಾಕಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com