ದೇವೇಂದ್ರ ಫಡ್ನವಿಸ್ ಸ್ಥಿರ ಸರ್ಕಾರ ನೀಡುತ್ತಾರೆ: ಸಿಎಂ ಯಡಿಯೂರಪ್ಪ

ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳಿಗೆ ಭವಿಷ್ಯವಿಲ್ಲ ಎನ್ನುವುದು ಮನವರಿಕೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಎನ್.ಸಿ.ಪಿ ಕೈಜೋಡಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.
ಬಿಎಸ್ ಯಡಿಯೂರಪ್ಪ
ಬಿಎಸ್ ಯಡಿಯೂರಪ್ಪ

ಬೆಳಗಾವಿ: ದೇಶದಲ್ಲಿ ಬಿಜೆಪಿ ಹೊರತುಪಡಿಸಿ ಉಳಿದ ಪಕ್ಷಗಳಿಗೆ ಭವಿಷ್ಯವಿಲ್ಲ ಎನ್ನುವುದು ಮನವರಿಕೆಯಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಜತೆ ಎನ್.ಸಿ.ಪಿ ಕೈಜೋಡಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶನಿವಾರ ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಿಎಂ, ಬೇರೆ ಯಾವುದೇ ಪಕ್ಷಕ್ಕೂ ಭವಿಷ್ಯ ಇಲ್ಲ ಎಂಬುದು ಉಳಿದ ಪಕ್ಷಗಳಿಗೆ ಮನವರಿಕೆಯಾಗಿದೆ. ಇದರಿಂದ ಎಲ್ಲಾ ಕಡೆಗಳಲ್ಲಿ ಬಿಜೆಪಿಗೆ ಪ್ರಾದೇಶಿಕ ಪಕ್ಷಗಳು ಬೆಂಬಲ ನೀಡುತ್ತಿವೆ. ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ಆಸಕ್ತಿ ತೋರಿವೆ ಎಂದರು.

ಮಹಾರಾಷ್ಟ್ರದಲ್ಲಿ ದೇವೆಂದ್ರ ಪಡ್ನವಿಸ್ ಪೂರ್ಣ ಅವಧಿವರೆಗೆ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ. ಸ್ಥಿರ, ಸರ್ಕಾರ, ಸ್ಥಿರ ಆಡಳಿತ ನೀಡುತ್ತಾರ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಸಹಕಾರದಿಂದ ಅಥಣಿ, ಕಾಗವಾಡ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲವು ಸಾಧಿಸುವ ವಿಶ್ವಾಸವಿದೆ. ಲಕ್ಷ್ಮಣ ಸವದಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಮೂರುವರೆ ವರ್ಷ ಅವಧಿವರೆಗೆ ಸವದಿ ಅಧಿಕಾರದಲ್ಲಿ ಇರಲಿದ್ದು, ಸ್ವತಃ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರೇ ಈ ಭರವಸೆ ನೀಡಿದ್ದಾರೆ ಎಂದರು.

ಚುನಾವಣೆ ಸಂಬಂಧ ಅಥಣಿಯಲ್ಲಿ ಯಾವುದೇ ಅಸಮಾಧನ ಇಲ್ಲ. ಪ್ರಾರಂಭದಲ್ಲಿ ಸ್ವಲ್ಪ ಅಸಮಾಧಾನ ಇತ್ತು. ಅದೆಲ್ಲ ಈಗ ಇಲ್ಲ ಬಗರಹರಿದಿದೆ. ಅಥಣಿ, ಕಾಗವಾಡ ಚುನಾವಣೆಯಲ್ಲಿ ಸವದಿ ಗೌರವದ ಪ್ರಶ್ನೆ ಅಡಗಿದೆ. ಹೀಗಾಗಿ ಎರಡೂ ಕಡೆ ಸವದಿ ಅಭ್ಯರ್ಥಿಗಳನ್ನು ಗೆಲ್ಲಿಸುತ್ತಾರೆ ಎಂದರು.

ಈಗ ನಡೆಯುತ್ತಿರುವ 15ಕ್ಕೆ 15 ಕ್ಷೇತ್ರಗಳಲ್ಲಿ ಪಕ್ಷದ ಗೆದ್ದು ಕಾಂಗ್ರೆಸ್ ಗೆ ಉತ್ತರ ಕೊಡ್ತೇವೆ. ಈ ಚುನಾವಣೆಯಿಂದ ಮೂರುವರೆ ವರ್ಷ ಒಳ್ಳೇ ಆಡಳಿತ ಕೊಡಲು ಅನುಕೂಲವಾಗುತ್ತದೆ. ಜನ ಇವತ್ತು ಬಿಜೆಪಿ, ನರೇಂದ್ರ ಮೋದಿ ಜತೆ ಇದ್ದು, ಕಾಂಗ್ರೆಸ್-ಜೆಡಿಎಸ್ ನಾಯಕರು ಇದನ್ನು ಮರೆಯಬಾರದು ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com