ಗೋಕಾಕ್ ನಲ್ಲಿ ತ್ರಿಕೋನ ಸ್ಪರ್ಧೆ: ರಮೇಶ್ ಸೋಲಿಸುವುದೇ ಕಾಂಗ್ರೆಸ್ ಜೆಡಿಎಸ್ ಅಜೆಂಡಾ!

ಡಿಸೆಂಬರ್ 5 ರಂದು ನಡೆಯುತ್ತಿರುವ ಉಪ ಚುನಾವಣೆಗಾಗಿ ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರು ಬಿರುಸಿನ ಪ್ರಚಾರದಲ್ಲಿ ಮುಳುಗಿದ್ದಾರೆ. ರಮೇಶ್, ಭಿಂಶಿ ಮತ್ತು ಬಾಲಚಂದ್ರ ಜಾರಕಿ ಹೊಳಿ ರಾಜಕೀಯ ಬದ್ಧ ವೈರಿಗಳಾದ ಸತೀಶ್ ಮತ್ತು ಲಖನ್ ಜಾರಕಿಹೊಳಿ ವಿರುದ್ದ ಪ್ರಚಾರಕ್ಕಿಳಿದಿದ್ದಾರೆ.
ರಮೇಶ್ ಮತ್ತು ಲಖನ್ ಜಾರಕಿಹೊಳಿ
ರಮೇಶ್ ಮತ್ತು ಲಖನ್ ಜಾರಕಿಹೊಳಿ

ಬೆಳಗಾವಿ: ಡಿಸೆಂಬರ್ 5 ರಂದು ನಡೆಯುತ್ತಿರುವ ಉಪ ಚುನಾವಣೆಗಾಗಿ ಗೋಕಾಕ್ ನಲ್ಲಿ ಜಾರಕಿಹೊಳಿ ಸಹೋದರರು ಬಿರುಸಿನ ಪ್ರಚಾರದಲ್ಲಿ ಮುಳುಗಿದ್ದಾರೆ. ರಮೇಶ್, ಭಿಂಶಿ ಮತ್ತು ಬಾಲಚಂದ್ರ ಜಾರಕಿ ಹೊಳಿ ರಾಜಕೀಯ ಬದ್ಧ ವೈರಿಗಳಾದ ಸತೀಶ್ ಮತ್ತು ಲಖನ್ ಜಾರಕಿಹೊಳಿ ವಿರುದ್ದ ಪ್ರಚಾರಕ್ಕಿಳಿದಿದ್ದಾರೆ.

ಗೋಕಾಕ್ ನಲ್ಲಿ ಕಳೆದ ಮೂರು ದಶಕಗಳಿಂದ ರಾಜಕೀಯ ಪಾರುಪತ್ಯ ಸ್ಥಾಪಿಸಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಅವರ ಕಿರಿಯ ಸಹೋದರ ತೊಡೆ ತಟ್ಟಿ ನಿಂತಿದ್ದಾರೆ. ರಮೇಶ್ ಜೊತೆಗಿನ ಎಲ್ಲಾ ಬಂಧಗಳನ್ನು ಕಡಿದುಕೊಂಡು,  ತಮ್ಮ ಅಣ್ಣನ ವಿರುಪದ್ಧವೇ ಕಣಕ್ಕಿಳಿದಿದ್ದಾರೆ. ಲಖನ್ ಗೆ ಸತೀಶ್ ಜಾರಕಿಹೊಳಿ ಬೆಂಬಲ ನೀಡುತ್ತಿದ್ದಾರೆ.

ಇನ್ನೂ ಜೆಡಿಎಸ್ ಅಭ್ಯರ್ಥಿ ಅಶೋಕ್ ಪೂಜಾರಿಗೆ ಎಚ್ ಡಿ ಕುಮಾರಸ್ವಾಮಿ ಬೆಂಬಲ ನೀಡುತ್ತಿದ್ದಾರೆ, ರಮೇಶ್ ಸೋಲಿಸಲು ಎಚ್ ಡಿಕೆ ಪಣ ತೊಟ್ಟಿದ್ದಾರೆ, ಇದೊಂದು ತ್ರಿಕೋನ ಸ್ಪರ್ಧೆಯಾಗಿದ್ದು, ರಮೇಶ್ ಸೋಲಿಸುವುದೇ ಕಾಂಗ್ರೆಸ್-ಜೆಡಿಎಸ್ ಅಜೆಂಡಾವಾಗಿದೆ.

ತಮ್ಮ ರಾಜಕೀಯ ವೈರಿ ಸಹೋದರ ಭಿಂಶಿ ಜೊತೆಗಿನ ದ್ವೇಷ ಮರೆತು ಒಂದಾಗಿರುವ ರಮೇಶ್ ಜಾರಕಿಹೊಳಿ ವಿರೋಧಿಗಳಿಗೆ ಠಕ್ಕರ್ ಕೊಡಲು ಮುಂದಾಗಿದ್ದಾರೆ, ಕಳೆದ ವರ್ಷ ನಡೆದ ರಮೇಶ್ ಮಗನ ಮದುವೆಗೆ ಭಿಂಶಿ ಹಾಜರಾಗಲಿಲ್ಲವೆಂಬ ಕಾರಣಕ್ಕೆ ಮುನಿಸಿಕೊಂಡಿದ್ದರು.

2008 ರಲ್ಲಿ ಭಿಂಶಿ ಗೋಕಾಕ್ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮೇಶ್ ವಿರುದ್ಧ ಸೋತಿದ್ದರು. ಇಬ್ಬರು ಮತ್ತೆ ಒಂದಾಗಿರುವುದು ಹಲವರಲ್ಲಿ ಆಘಾತ ತಂದಿದೆ, ತಾವು ಸಕ್ರಿಯ ರಾಜಕೀಯದಲ್ಲಿದ್ದು, ರಮೇಶ್ ಗೆ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ.


ಮತ್ತೊಂದೆಡೆ  ಸತೀಶ್ ಮತ್ತು ಲಖನ್ ಒಂದಾಗಿ ರಮೇಶ್ ಸೋಲಿಸಬೇಕೆಂದು ಸವಾಲು ಹಾಕಿದ್ದಾರೆ. ತಮ್ಮ ಸಹೋದರನ ವಿರುದ್ಧ ಗೆಲ್ಲುವ ಆತ್ಮ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ರಮೇಶ್ ಬೆಂಬಲಕ್ಕೆ ನಿಂತಿದ್ದಾರೆ, ಇಡೀ ಬಿಜೆಪಿಗೆ ಗೋಕಾಕ್ ಕ್ಷೇತ್ರ ಹಾಟ್ ಸ್ಪಾಟ್ ನಂತಾಗಿದೆ, ಸಿಎಂ ಯಡಿಯೂರಪ್ಪ ಸೇರಿದಂತೆ ಹಲವು ಬಿಜೆಪಿ ಘಟಾನುಘಟಿಗಳು ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com