ಮೋದಿ, ಅಮಿತ್ ಶಾ ಭಯದಿಂದ ಆನಂದ್ ಸಿಂಗ್ ರಾಜೀನಾಮೆ: ಕುಮಾರಸ್ವಾಮಿ

ಅನರ್ಹ ಶಾಸಕ ಆನಂದ್ ಸಿಂಗ್‌ ಮತ್ತೆ ಬಿಜೆಪಿಗೆ ಹೋಗುವುದಾಗಿದ್ದರೆ ಕಾಂಗ್ರೆಸ್‌ ಸೇರಿದ್ದಾರೂ ಏಕೆ? ಆತ ಕಾಂಗ್ರೆಸ್‌ನಿಂದ ಗೆದ್ದ ಮೊದಲ ದಿನವೇ ಪಕ್ಷಕ್ಕೆ ಟೋಪಿ ಹಾಕಲೆತ್ನಿಸಿದ್ದ ನಯವಂಚಕ ಎಂದು ಮಾಜಿ...
ಎಚ್ ಡಿ ಕುಮಾರಸ್ವಾಮಿ
ಎಚ್ ಡಿ ಕುಮಾರಸ್ವಾಮಿ

ವಿಜಯನಗರ: ಅನರ್ಹ ಶಾಸಕ ಆನಂದ್ ಸಿಂಗ್‌ ಮತ್ತೆ ಬಿಜೆಪಿಗೆ ಹೋಗುವುದಾಗಿದ್ದರೆ ಕಾಂಗ್ರೆಸ್‌ ಸೇರಿದ್ದಾರೂ ಏಕೆ? ಆತ ಕಾಂಗ್ರೆಸ್‌ನಿಂದ ಗೆದ್ದ ಮೊದಲ ದಿನವೇ ಪಕ್ಷಕ್ಕೆ ಟೋಪಿ ಹಾಕಲೆತ್ನಿಸಿದ್ದ ನಯವಂಚಕ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ಶಾಸಕಾಂಗ ನಾಯಕ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ವಿಜಯನಗರದಲ್ಲಿ ಸೋಮವಾರ ಪಕ್ಷದ ಅಭ್ಯರ್ಥಿ ಪರ ಪ್ರಚಾರ ನಡೆಸಿ ಬಳಿಕ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ 2008 ಹಾಗೂ 2013ರಲ್ಲಿ ಬಿಜೆಪಿಯಿಂದ ಗೆಲುವು ಸಾಧಿಸಿದ್ದ ಆನಂದ್‌ಸಿಂಗ್ 2018ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಮೈತ್ರಿ ಸರ್ಕಾರಕ್ಕೆ ದ್ರೋಹವೆಸಗಿ ಮತ್ತೆ ಬಿಜೆಪಿ ಸೇರಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಿಜಯನಗರವನ್ನು ಜಿಲ್ಲೆ ಮಾಡುವ ಬಗ್ಗೆ ಏಕೆ ಮಾತನಾಡಲಿಲ್ಲ. ಈಗ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರಿದ್ದೇನೆ ಎನ್ನುವ ಮಾತಿನಲ್ಲಿ ಯಾವ ಅರ್ಥವಿದೆ ಎಂದು ಕಿಡಿಕಾರಿದರು.

ಆನಂದ್ ಸಿಂಗ್‌ ಕಷ್ಟಪಟ್ಟು ಹಣ ಗಳಿಸಿಲ್ಲ. ಬಳ್ಳಾರಿ ಜಿಲ್ಲೆಯ ಮಣ್ಣಿಗೆ ಬೆಲೆಯಿದ್ದು, ಇಲ್ಲಿನ ಸಂಪತ್ತನ್ನು ಲೂಟಿಗೈದು ಚೈನಾಕ್ಕೆ ಮಾರಾಟ ಮಾಡಿ ಶ್ರೀಮಂತರಾಗಿದ್ದಾರೆ. ಇಲ್ಲಿನ ಜನರ ಮಣ್ಣನ್ನೇ ಅಗೆದು ಅವರ ಹಣವನ್ನೇ ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ತಮ್ಮಿಂದ ಸಹಾಯ ಪಡೆದು ನಯವಂಚನೆ ಮಾಡಿ ಬಳಿಕ ಬಿಜೆಪಿಗೆ ಹೋಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಆನಂದ್ ಸಿಂಗ್ ಬಳ್ಳಾರಿಯ ಮಣ್ಣು ಮಾರಿ ಸಿಕ್ಕಿಬಿದ್ದಿದ್ದರು, ಆಗ ಮೋದಿ, ಅಮಿತ್ ಶಾ ಒತ್ತಡ ಹೇರಿ ರಾಜೀನಾಮೆ ಕೊಡು ಇಲ್ಲಾ ಅಂದ್ರೆ ಬಿಡಲ್ಲ ಎಂದಿದ್ದಾರೆ. ಹೀಗಾಗಿ ಆನಂದ್ ಸಿಂಗ್ ರಾಜೀನಾಮೆ ನೀಡಿ ಮೈತ್ರಿ ಸರ್ಕಾರ ಬೀಳಿಸಿದರು. ಮೋದಿಯಿಂದ ದೇಶ ಹಾಳಾಗುತ್ತಿದೆ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಗಣಿಧೂಳಿನಿಂದ ಇಲ್ಲಿ ಅನೇಕ ಜನರು ಬೆಳೆದಿದ್ದಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲುಗಿಂತ ನಾನೇನು ಕಮ್ಮಿ ಎಂಬಂತೆ ಆನಂದ್ ಸಿಂಗ್ ದೊಡ್ಡ ಬಂಗಲೆ ಕಟ್ಟಿಸಿದ್ದಾರೆ. ಅವರಿಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ರೈತರ ಮತ ಬೇಕು ಆದರೆ ರೈತರ ಸಮಸ್ಯೆಗಳು ರಾಜಕಾರಣಿಗಳಿಗೆ ಬೇಡವಾಗಿದೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com