ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಆದ ಮೈತ್ರಿ ಅಕ್ರಮ ಸಂಬಂಧದಂತೆ- ಕೆ ಎಸ್ ಈಶ್ವರಪ್ಪ

ಮಹಾರಾಷ್ಟ್ರದಲ್ಲಿ ಬಿಜೆಪಿ ಹೊರಗಿಟ್ಟು ಸರ್ಕಾರ ರಚಿಸಲು ಶಿವಸೇನೆ, ಕಾಂಗ್ರೆಸ್ ಪಕ್ಷಗಳು  ಅಕ್ರಮ ಸಂಬಂಧದ ಮೂಲಕ ಮೈತ್ರಿ ಮಾಡಿಕೊಂಡಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ   ಕೆ ಎಸ್ ಈಶ್ವರಪ್ಪ ಟೀಕಿಸಿದ್ದಾರೆ.
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ

ಬಳ್ಳಾರಿ: ಮಹಾರಾಷ್ಟ್ರದಲ್ಲಿ ಬಿಜೆಪಿ ಹೊರಗಿಟ್ಟು ಸರ್ಕಾರ ರಚಿಸಲು ಶಿವಸೇನೆ, ಕಾಂಗ್ರೆಸ್ ಪಕ್ಷಗಳು  ಅಕ್ರಮ ಸಂಬಂಧದ ಮೂಲಕ ಮೈತ್ರಿ ಮಾಡಿಕೊಂಡಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ   ಕೆ ಎಸ್ ಈಶ್ವರಪ್ಪ ಟೀಕಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಸ್ವಾಗತಿಸಿದ ಅವರು, ಕಾಂಗ್ರೆಸ್ ವಿಚಾರಗಳಲ್ಲಿ ಭಿನ್ನಾಭಿಪ್ರಾಯವಿದೆ. ಮೈತ್ರಿಕೂಟಕ್ಕೆ ಶಿವಸೇನೆಯನ್ನು ಸೇರಿಸಲೇ ಬಾರದಿತ್ತು. ಕಾಂಗ್ರೆಸ್ ಹಿಂದುತ್ವದ ವಿರುದ್ಧವಿತ್ತು. ಮೂಲ ಕಾಂಗ್ರೆಸ್ ನಿಲುವನ್ನು ಸಾಯುಸುವ ಮೂಲಕ ಕಾಂಗ್ರಸ್ ನಾಯಕಿ ಸೋನಿಯಾ ಗಾಂಧಿ ಅವರು ಕಾಂಗ್ರೆಸ್ ತತ್ವ ಸಿದ್ಧಾಂತಕ್ಕೆ  ತಿಲಾಂಜಲಿ‌ ಇಟ್ಟಿದ್ದಾರೆ ಎಂದು ಟೀಕಿಸಿದರು. 

ಕಾಂಗ್ರೆಸ್ ದ್ವಿಮುಖ ನೀತಿ  ತೋರುತ್ತಿದೆ. ಹೀಗಾಗಿ ಮುಸ್ಲಿಂ ಸಮುದಾಯ ಇನ್ನು‌ ಮುಂದೆ ಕಾಂಗ್ರೆಸ್ ಗೆ ಬೆಂಬಲ ನೀಡುವುದಿಲ್ಲ ಎಂದು ಈಶ್ವರಪ್ಪ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com