ಮೈತ್ರಿ ಸರ್ಕಾರದಲ್ಲಿ ತಪ್ಪು ಮಾಡಿದ್ದರೆ ರಾಜಕೀಯ ನಿವೃತ್ತಿ: ಎಚ್. ಡಿ. ಕುಮಾರಸ್ವಾಮಿ

ಮೈತ್ರಿ‌ ಸರ್ಕಾರದಲ್ಲಿ ಏನಾದರೂ‌ ತಪ್ಪು ಮಾಡಿದ್ದರೆ ರಾಜಕೀಯ ಜೀವನದಿಂದ‌ಲೇ  ನಿವೃತ್ತಿ ಪಡೆಯುವುದಾಗಿ ಜೆಡಿಎಸ್ ಶಾಸಕಾಂಗ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

Published: 26th November 2019 05:29 PM  |   Last Updated: 26th November 2019 05:29 PM   |  A+A-


HDKumaraswamy1

ಎಚ್ ಡಿ ಕುಮಾರಸ್ವಾಮಿ

Posted By : Nagaraja AB
Source : UNI

ಚಿಕ್ಕಬಳ್ಳಾಪುರ: ರಾಜಕಾರಣದಲ್ಲಿ ನಾನು ಇದುವರೆಗೂ ತಪ್ಪು  ಮಾಡಿಲ್ಲ. ಮೈತ್ರಿ‌ ಸರ್ಕಾರದಲ್ಲಿ ಏನಾದರೂ‌ ತಪ್ಪು ಮಾಡಿದ್ದರೆ ರಾಜಕೀಯ ಜೀವನದಿಂದ‌ಲೇ  ನಿವೃತ್ತಿ ಪಡೆಯುವುದಾಗಿ ಜೆಡಿಎಸ್ ಶಾಸಕಾಂಗ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಗಳವಾರ ಚಿಕ್ಕಬಳ್ಳಾಪುರ ವಿಧಾನ ಸಭಾ ಉಪ ಚುನಾವಣೆಯ ಪ್ರಚಾರಕ್ಕೆ ನಗರಕ್ಕೆ  ಆಗಮಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನಗರದ ಜ್ಯೂನಿಯರ್ ಕಾಲೇಜಿನಿಂದ ಬೃಹತ್ ರೋಡ್ ಶೋ ನಡೆಸಿ ಅಭ್ಯರ್ಥಿ ರಾಧಾಕೃಷ್ಣ ಪರ ಪ್ರಚಾರ  ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೂ ಬರಲಿ , ಯಡಿಯೂರಪ್ಪ ಅವರೂ ಬರಲಿ, ಒಂದೇ ವೇದಿಕೆಯಲ್ಲಿ ಚರ್ಚಿಸೋಣ. ಮೈತ್ರಿ ಸರ್ಕಾರದಲ್ಲಿ  ಹದಿನಾಲ್ಕು ತಿಂಗಳ ಅವಧಿಯಲ್ಲಿ ನಾನು ಸಣ್ಣ ತಪ್ಪು ಮಾಡಿದ್ದರೆ, ಚಿಕ್ಕಬಳ್ಳಾಪುರದ ಜನಕ್ಕೆ  ಏನಾದರೂ ದ್ರೋಹ ಮಾಡಿದ್ದರೆ ಅದನ್ನು ಸಾಬೀತು ಪಡಿಸಲಿ. ಕೆ.ಸುಧಾಕರ್ ನನ್ನೆದುರು‌ ನಿಂತು  ಮಾತನಾಡಲಿ. ನಾನು ತಪ್ಪು ಮಾಡಿದ್ದರೆ ರಾಜಕೀಯದಿಂದಲೇ ನಿವೃತ್ತಿ ಪಡೆಯುವೆ. ಮತ್ತೆ  ನಾನೆಂದೂ ನಿಮಗೆ ಮುಖ ತೋರಿಸುವುದಿಲ್ಲ ಎಂದು ಸವಾಲು ಹಾಕಿದರು.

Stay up to date on all the latest ರಾಜಕೀಯ news
Poll
RBI

ಕಾರ್ಪೊರೇಟ್‌ ಕಂಪನಿಗಳಿಗೆ ಬ್ಯಾಂಕ್‌ ಆರಂಭಿಸಲು ಅನುಮತಿಸುವಂತೆ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ನೀಡಿರುವ ಸಲಹೆಯನ್ನು ಸ್ವಾಗತಿಸುತ್ತೀರಾ?


Result
ಹೌದು
ಇಲ್ಲ
ಗೊತ್ತಿಲ್ಲ
flipboard facebook twitter whatsapp