''ನಿಮ್ಮ ಸೇವೆ ಮಾಡಲು ಭಿಕ್ಷೆ ಬೇಡುತ್ತಿದ್ದೇನೆ ,ಮತ್ತೊಂದು ಅವಕಾಶ ಕೊಡಿ''

ಸಿದ್ದರಾಮಯ್ಯ ಅವರು ನನ್ನ ಅಣ್ತಮ್ಮ. ಅವರೊಬ್ಬ ಜನನಾಯಕ. ನಮಗೂ ಸ್ವಾಭಿಮಾನ ಇದೆ. ನಮಗೂ ಮಾನ ಮರ್ಯಾದೆ ಇದೆ. ಮುನೇಶ್ವರನ ಮೇಲೆ ಆಣೆ.ನಾನು ರಾಜಕೀಯದಲ್ಲಿ ಶುದ್ದವಾಗಿದ್ದೇನೆ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ತಮ್ಮ ಮನದಾಳದಲ್ಲಿ ಬಚ್ಚಿಟ್ಟಿದ್ದ ಸತ್ಯವನ್ನು ಹೊರಹಾಕಿದ್ದಾರೆ.

Published: 26th November 2019 10:08 AM  |   Last Updated: 26th November 2019 10:08 AM   |  A+A-


H.Vishwanath

ಎಚ್.ವಿಶ್ವನಾಥ್

Posted By : Shilpa D
Source : UNI

ಮೈಸೂರು: ಸಿದ್ದರಾಮಯ್ಯ ಅವರು ನನ್ನ ಅಣ್ತಮ್ಮ.ಅವರೊಬ್ಬ ಜನನಾಯಕ. ನಮಗೂ ಸ್ವಾಭಿಮಾನ ಇದೆ. ನಮಗೂ ಮಾನ ಮರ್ಯಾದೆ ಇದೆ. ಮುನೇಶ್ವರನ ಮೇಲೆ ಆಣೆ.ನಾನು ರಾಜಕೀಯದಲ್ಲಿ ಶುದ್ದವಾಗಿದ್ದೇನೆ ಎಂದು ಹುಣಸೂರು ಬಿಜೆಪಿ ಅಭ್ಯರ್ಥಿ ಎಚ್ ವಿಶ್ವನಾಥ್ ತಮ್ಮ ಮನದಾಳದಲ್ಲಿ ಬಚ್ಚಿಟ್ಟಿದ್ದ ಸತ್ಯವನ್ನು ಹೊರಹಾಕಿದ್ದಾರೆ.

ಹುಣಸೂರು ಪಟ್ಟಣದ ಮೈದಾನದಲ್ಲಿ ಆಯೋಜಿಸಿದ್ದ ಬಿಜೆಪಿ ಚುನಾವಣಾ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಉಪಮುಖ್ಯ ಮಂತ್ರಿಯಾಗಿದ್ದಾಗ ಅವರನ್ನ ಜೆಡಿಎಸ್ ಪಕ್ಷ ದಿಂದ ಹೊರಕ್ಕೆ ಹಾಕಿದ್ದರು. 

ಆಗ ಶಾಸಕ ಸ್ಥಾನಕ್ಕೆ ರಾಜೀನಾಮೆ‌ ನೀಡಿ ಮತ್ತೆ ಚುನಾವಣೆ ಎದುರಿಸಿದ ರು. ಆಗ ಅವರು ನೀಡಿದ್ದು ಸ್ವಾಭಿಮಾನಕ್ಕಾಗಿ ರಾಜೀನಾಮೆ ನೀಡಿದೆ ಎಂಬ ಕಾರಣವನ್ನು. ಈಗಲೂ ನಾನು ಸ್ವಾಭಿಮಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಹೇಳುವ ಮೂಲಕ ಸಿದ್ದರಾಮಯ್ಯನನ್ನು ಸಮರ್ಥಿಸಿಕೊಳ್ಳುವ ಜೊತೆಗೆ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಕಾರಣವನ್ನು ಉಲ್ಲೇಖಿ ಸಿದರು.

ಎಚ್.ವಿಶ್ವನಾಥ್ 25 ಕೋಟಿ ತೆಗೆದುಕೊಂಡು ಬಿಜೆಪಿ ಸೇರಿದರು ಎಂದು ಮಾಜಿ ಸಚಿವರೊಬ್ಬರು ಹೇಳಿದರು. ಅದಕ್ಕೆ ಚಾಮುಂಡೇಶ್ವರಿ ದೇವಾಲಯಕ್ಕೆ ಬಾ ಆಣೆ ಪ್ರಮಾಣ ಮಾಡುವಂತೆ ಆಹ್ವಾನ ನೀಡಿದೆ. ದೇವಸ್ಥಾನಕ್ಕೆ ಬಂದ ಅವರು ಮಹಾಭಾರತದಲ್ಲಿ ದುರ್ಯೋಧನನ ರೀತಿ ದೇವಸ್ಥಾನದಲ್ಲಿ ಅಡಗಿ ಕುಳಿತು ಬಿಟ್ಟರು ಎಂದು ಮಾಜಿ ಸಚಿವ ಸಾ.ರಾ ಮಹೇಶ್ ವಿರುದ್ದ ವಿಶ್ವನಾಥ್​ ವ್ಯಂಗ್ಯವಾಡಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp