ಸರ್ಕಾರ ನಿಷ್ಕ್ರೀಯ: ರಾಜ್ಯಪಾಲರಿಗೆ ಕಾಂಗ್ರೆಸ್ ದೂರು 

ರಾಜ್ಯದ ಅಭಿವೃದ್ಧಿ ಕೆಲಸಗಳನ್ನೆಲ್ಲ ನಿರ್ಲಕ್ಷಿಸಿ, ಜನತೆಯ ಸಮಸ್ಯೆಗಳಿಗೆ  ಸ್ಪಂದಿಸದೇ ಸರ್ಕಾರಕ್ಕೆ ಸರ್ಕಾರವೇ ಉಪಚುನಾವಣೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ  ಕೆಪಿಸಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು : ರಾಜ್ಯದ ಅಭಿವೃದ್ಧಿ ಕೆಲಸಗಳನ್ನೆಲ್ಲ ನಿರ್ಲಕ್ಷಿಸಿ, ಜನತೆಯ ಸಮಸ್ಯೆಗಳಿಗೆ  ಸ್ಪಂದಿಸದೇ ಸರ್ಕಾರಕ್ಕೆ ಸರ್ಕಾರವೇ ಉಪಚುನಾವಣೆಯಲ್ಲಿ ಭಾಗಿಯಾಗಿದೆ ಎಂದು ಆರೋಪಿಸಿ  ಕೆಪಿಸಿಸಿ ರಾಜ್ಯಪಾಲರಿಗೆ ದೂರು ಸಲ್ಲಿಸಿದೆ.

ರಾಜ್ಯಪಾಲ ವಜೂಭಾಯಿ ವಾಲಾ ಅವರ  ಅನಾರೋಗ್ಯ ಕಾರಣದಿಂದಾಗಿ ಅವರ ನೇರ ಭೇಟಿ ಸಾಧ್ಯವಾಗದೇ ಇರುವುದರಿಂದ ಟಪಾಲು ಮೂಲಕ  ಮೇಲ್ಮನೆ ಸದಸ್ಯ ಪ್ರಕಾಶ್ ರಾಥೋಡ್ ನೇತೃತ್ವದ ಕಾಂಗ್ರೆಸ್ ನಿಯೋಗ ಗುರುವಾರ ದೂರು  ಸಲ್ಲಿಸಿತು.

ಸರ್ಕಾರದ ಸಚಿವರಿಂದ ನೀತಿ ಸಂಹಿತೆ ಉಲ್ಲಂಘನೆಯಾದರೂ ಆಯೋಗ ಕಣ್ಮುಚ್ಚಿ ಕುಳಿತಿದೆ. ಇಡೀ ಮಂತ್ರಿಮಂಡಲವೇ  ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿರುವುದರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದೇ   ಸರ್ಕಾರದ ಆಡಳಿತ ಯಂತ್ರ ಸ್ಥಗಿತಗೊಂಡಿದೆ.  ಮುಖ್ಯಮಂತ್ರಿಗಳಾದಿಯಾಗಿ  ಎಲ್ಲಾ ಸಚಿವರು ಉಪಚುನಾವಣೆಯಲ್ಲಿ ಭಾಗಿಯಾಗಿದ್ದರಿಂದ ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ  ಖಾಲಿಯಾಗಿದೆ ಎಂದು  ದೂರಿನಲ್ಲಿ ಹೇಳಲಾಗಿದೆ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com