ರಾಜ್ಯಸಭೆ ಚುನಾವಣೆ: ಬಿಜೆಪಿ ಅಭ್ಯರ್ಥಿ ಕೆ.ಸಿ. ರಾಮಮೂರ್ತಿ ಪತ್ನಿ ಆಸ್ತಿ ಎಷ್ಟು ಗೊತ್ತಾ?

ಡಿಸೆಂಬರ್ 12ಕ್ಕೆ ನಡೆಯುವ ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುತ್ತಿರುವ ಕೆಸಿ ರಾಮಮೂರ್ತಿ
ನಾಮಪತ್ರ ಸಲ್ಲಿಸುತ್ತಿರುವ ಕೆಸಿ ರಾಮಮೂರ್ತಿ

ಬೆಂಗಳೂರು: ಡಿಸೆಂಬರ್ 12ಕ್ಕೆ ನಡೆಯುವ ರಾಜ್ಯಸಭೆ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಕೆ.ಸಿ. ರಾಮಮೂರ್ತಿ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದರು.

ಇಂದು ವಿಧಾನಸೌಧಕ್ಕೆ ಕುಟುಂಬ ಸಮೇತರಾಗಿ ಆಗಮಸಿದ ಕೆ.ಸಿ.ರಾಮಮೂರ್ತಿ ಅವರು ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿಗೆ ಅವರಿಗೆ ನಾಮಪತ್ರ ಸಲ್ಲಿಕೆ ಮಾಡಿದರು. ಈ ವೇಳೆ ರಾಮಮೂರ್ತಿಗೆ ಕಂದಾಯ ಸಚಿವ ಆರ್.ಅಶೋಕ್, ಕೇಂದ್ರ ಸಚಿವ ಸದಾನಂದಗೌಡ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಂಸದೆ ಶೋಭಾ ಕರಂದ್ಲಾಜೆ, ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಸೇರಿ ಹಲವು ಬಿಜೆಪಿ ನಾಯಕರು ಸಾಥ್ ನೀಡಿದರು.

ಬಿಜೆಪಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ ಕೆ.ಸಿ. ರಾಮಮೂರ್ತಿ 26.5 ಕೋಟಿ ರೂ ಒಡೆಯರಾಗಿದ್ದು, ಅವರ ಪತ್ನಿ ಅವರಿಗಿಂತಲೂ ಶ್ರೀಮಂತರಾಗಿದ್ದು, 61.5 ಕೋಟಿ ರೂ ಒಡತಿ.

ರಾಮಮೂರ್ತಿ ಅವರು ತಮ್ಮ ಪ್ರಮಾಣಪತ್ರದಲ್ಲಿ ಈ ಮಾಹಿತಿ ನೀಡಿದ್ದಾರೆ. ರಾಮಮೂರ್ತಿ ಅವರ ಬಳಿ 10.5 ಕೋಟಿ ರೂ ಚರಾಸ್ತಿ, 16 ಕೋಟಿ ಸ್ಥಿರಾಸ್ಥಿ ಇದೆ.

ಪತ್ನಿ ಸಬಿತಾ ರಾಮಮೂರ್ತಿ 61.5 ಕೋಟಿ ಆಸ್ತಿ ಹೊಂದಿದ್ದಾರೆ. ಪತ್ನಿ ಬಳಿ 22.97 ಕೋಟಿ ಚರಾಸ್ತಿ, 39.5 ಕೋಟಿ ರೂ ಮೊತ್ತದ ಸ್ಥಿರಾಸ್ತಿ ಇದೆ. ಜತೆಗೆ ರಾಮಮೂರ್ತಿ ಅವರ ಹೆಸರಲ್ಲಿ 3.6 ಕೋಟಿ ಪತ್ನಿ ಹೆಸರಲ್ಲಿ 23 ಕೋಟಿ ಸಾಲ ಇದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com