'ಸಿದ್ದರಾಮಯ್ಯರ ಚೇಲಾ ದಿನೇಶ್ ಗುಂಡೂರಾವ್' - ಬಿ. ಸಿ. ಪಾಟೀಲ್  ಕಿಡಿ

ಉಪ ಚುನಾವಣೆಗೆ ಇನ್ನೂ ಐದು ದಿನಗಳು ಬಾಕಿ ಇರುವಂತೆಯೇ ಪ್ರಚಾರದ ಅಖಾಡ ಮತ್ತಷ್ಟು ರಂಗೇರಿದ್ದು,  ನಾಯಕರ ನಡುವಿನ ವೈಯಕ್ತಿಕ ಟೀಕೆ, ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದೆ

Published: 30th November 2019 01:49 PM  |   Last Updated: 30th November 2019 01:49 PM   |  A+A-


kpccpresidentPATIL1

ದಿನೇಶ್ ಗುಂಡೂರಾವ್, ಬಿ.ಸಿ. ಪಾಟೀಲ್

Posted By : Nagaraja AB
Source : Online Desk

ಯಲ್ಲಾಪುರ: ಉಪ ಚುನಾವಣೆಗೆ ಇನ್ನೂ ಐದು ದಿನಗಳು ಬಾಕಿ ಇರುವಂತೆಯೇ ಪ್ರಚಾರದ ಅಖಾಡ ಮತ್ತಷ್ಟು ರಂಗೇರಿದ್ದು,  ನಾಯಕರ ನಡುವಿನ ವೈಯಕ್ತಿಕ ಟೀಕೆ, ಆರೋಪ, ಪ್ರತ್ಯಾರೋಪಗಳು ತಾರಕಕ್ಕೇರಿದೆ.

ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಯಲ್ಲಾಪುರದಲ್ಲಿ ಬಿರುಸಿನ ಪ್ರಚಾರ ನಡೆಸಿದ ಅನರ್ಹ ಶಾಸಕ ಬಿ. ಸಿ. ಪಾಟೀಲ್, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು. ದಿನೇಶ್ ಗುಂಡೂರಾವ್  ಸಿದ್ದರಾಮಯ್ಯ ಅವರ ಚೇಲಾ, ಚಮಚಾ ಎಂದು ಕಿಡಿಕಾರಿದರು. 

ದಿನೇಶ್ ಗುಂಡೂರಾವ್ ಯಾರ ಕಾಲಿನ ದೂಳಿಗೆ ಸಮ ಎಂದು ಪ್ರಶ್ನಿಸಿದ ಅವರು,  ದಿನೇಶ್ ಗುಂಡೂರಾವ್  ಸಿದ್ದರಾಮಯ್ಯ ಅವರಿಗೆ ಸರಿ ಸಮ ಅಂತಾ ನಾನು ಹೇಳಿಲ್ಲ ಎಂದು ಸ್ಪಷ್ಟಪಡಿಸಿದರು.

ಗುರುವಾರ ಯಲ್ಲಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಭೀಮಣ್ಣ ನಾಯ್ಕ್ ಪರ  ಪ್ರಚಾರ ನಡೆಸಿದ್ದ ದಿನೇಶ್ ಗುಂಡೂರಾವ್,  ಈ ಚುನಾವಣೆ ಸ್ವಾಭಿಮಾನದ ಪ್ರಶ್ನೆ ಆಗಿದ್ದು, ಶಾಸಕರು, ರಾಜಕಾರಣಿಗಳು ಆಗುವ ಅರ್ಹತೆ ಕಳೆದುಕೊಂಡ ಅನರ್ಹರನ್ನು ಚುನಾವಣೆಯಲ್ಲಿ ಸೋಲಿಸುವ ಮೂಲಕ ಪಕ್ಷಾಂತರಿಗೆ ಸೂಕ್ತ ಎಚ್ಚರಿಕೆ ನೀಡಬೇಕಿದೆ ಎಂದು ಮತದಾರರಲ್ಲಿ ಮನವಿ ಮಾಡಿಕೊಂಡಿದ್ದರು.
 

Stay up to date on all the latest ರಾಜಕೀಯ news with The Kannadaprabha App. Download now
Poll
school

ಶಾಲೆಗಳನ್ನು ತೆರೆಯಲು ಸರ್ಕಾರ ಅನುಮತಿಸಿದರೆ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ನೀವು ಸಿದ್ಧರಿದ್ದೀರಾ?


Result
ಹೌದು
ಇಲ್ಲ
ಇನ್ನೂ ನಿರ್ಧರಿಸಿಲ್ಲ
facebook twitter whatsapp