10 ಗೆದ್ದರಷ್ಟೆ ಮೈತ್ರಿ: ಕಾದು ನೋಡುವ ತಂತ್ರ ಅನುಸರಿಸಿದ ತೆನೆಹೊತ್ತ ನಾಯಕರು

ಜೆಡಿಎಸ್ ಮಾತ್ರ ಎಂದಿನಂತೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಈ ಬಗ್ಗೆ ತಟಸ್ಥ ನೀತಿ‌ ತಾಳಿರುವ ಜೆಡಿಎಸ್ ನಾಯಕರು ಉಪಚುನಾವಣೆಯ ಫಲಿತಾಂಶದತ್ತ ಚಿತ್ತ ಹರಿಸಿದ್ದಾರೆ.

Published: 30th November 2019 09:16 PM  |   Last Updated: 30th November 2019 09:16 PM   |  A+A-


JDS leaders to wait for Bypoll results in Karnataka to get into alliance for Rajyasabha polls

10 ಗೆದ್ದರಷ್ಟೆ ಮೈತ್ರಿ: ಕಾದು ನೋಡುವ ತಂತ್ರ ಅನುಸರಿಸಿದ ತೆನೆಹೊತ್ತ ನಾಯಕರು

Posted By : Srinivas Rao BV
Source : Online Desk

ಬೆಂಗಳೂರು: ರಾಜ್ಯಸಭಾ ಚುನಾವಣೆಗೆ ಆಡಳಿತಾರೂಢ ಬಿಜೆಪಿ ಅಭ್ಯರ್ಥಿಯನ್ನು ಘೋಷಿಸಿದ್ದು, ಇತ್ತ ಕಾಂಗ್ರೆಸ್ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಆದರೆ ಜೆಡಿಎಸ್ ಮಾತ್ರ ಎಂದಿನಂತೆ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು, ಈ ಬಗ್ಗೆ ತಟಸ್ಥ ನೀತಿ‌ ತಾಳಿರುವ ಜೆಡಿಎಸ್ ನಾಯಕರು ಉಪಚುನಾವಣೆಯ ಫಲಿತಾಂಶದತ್ತ ಚಿತ್ತ ಹರಿಸಿದ್ದಾರೆ.

ಒಂದೇ ಕಲ್ಲಿನಲ್ಲಿ ಎರಡು ಮೂರು ಹಕ್ಕಿಗಳನ್ನು ಹೊಡೆದು ರಾಜಕೀಯವಾಗಿ ಲಾಭಮಾಡಿಕೊಳ್ಳುವ ಚಾಣಾಕ್ಷ ಹೆಚ್.ಡಿ.ದೇವೇಗೌಡ. ಯಾವುದೇ ಚುನಾವಣೆ ಇರಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಅಂತಿಮವಾಗುವವರೆಗೂ ಜೆಡಿಎಸ್ ಮಾತ್ರ ತನ್ನ ಅಭ್ಯರ್ಥಿಗಳನ್ನು ಅಖೈರುಗೊಳಿಸುವುದು ಬಹಳ ಕಡಿಮೆಯೇ. 

ಇದು ಉಪಚುನಾವಣೆಯಲ್ಲೂ ಹೊರತಾಗಿಲ್ಲ. ಆದರೆ ಈ ಬಾರಿ ಉಪಚುನಾವಣೆಗೂ ರಾಜ್ಯಸಭಾ ಚುನಾವಣೆಗೂ ನಂಟಿದ್ದು ರಾಜ್ಯಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜೆಡಿಎಸ್ ಕಿಂಗ್ ಮೇಕರ್ ಆಗಲಿದೆ.
 

Stay up to date on all the latest ರಾಜಕೀಯ news with The Kannadaprabha App. Download now
Poll
Coronavirus Lockdown

ಕರ್ಫ್ಯೂ, ಭಾನುವಾರದ ಲಾಕ್ ಡೌನ್ ನಿಂದ ರಾಜ್ಯದಲ್ಲಿ ಕೊರೋನಾ ಪ್ರಮಾಣ ತಗ್ಗಲಿದೆಯೇ?


Result
ಹೌದು
ಇಲ್ಲ
ಗೊತ್ತಿಲ್ಲ
facebook twitter whatsapp