ನಮ್ಮ ಬಗೆ ಮೃದು ಧೋರಣೆಯಿಂದ ಸಿಎಂ ಚುನಾವಣೆಗೆ ಟಿಕೆಟ್ ನೀಡೋದಾಗಿ ಹೇಳಿದ್ರು: ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್

ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ತೀರ್ಪು ಇನ್ನೂ ಬಾಕಿ ಇರುವುದರಿಂದ ಈಗಲೇ ಬಿಜೆಪಿ ಸೇರುತ್ತೇನೆ ಎಂದು ಹೇಳಲು ಬರುವುದಿಲ್ಲ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.
 

Published: 01st October 2019 01:36 PM  |   Last Updated: 01st October 2019 01:36 PM   |  A+A-


ಪ್ರತಾಪ್ ಗೌಡ ಪಾಟೀಲ್

Posted By : Raghavendra Adiga
Source : UNI

ಬೆಂಗಳೂರು: ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ವಿಚಾರಣೆ ತೀರ್ಪು ಇನ್ನೂ ಬಾಕಿ ಇರುವುದರಿಂದ ಈಗಲೇ ಬಿಜೆಪಿ ಸೇರುತ್ತೇನೆ ಎಂದು ಹೇಳಲು ಬರುವುದಿಲ್ಲ ಎಂದು ಅನರ್ಹ ಶಾಸಕ ಪ್ರತಾಪ್ ಗೌಡ ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಹದಿನೇಳು ಜನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದಲೇ ಬಿಜೆಪಿ ಸರ್ಕಾರ ರಚನೆ ಆಗಿದೆ. ಸರ್ಕಾರ ರಚನೆಗೆ ನಾವು ಸಹಕರಿಸಿದ್ದಕ್ಕಾಗಿಯೇ ನಮ್ಮ ಬಗ್ಗೆ ಬಿಜೆಪಿಗೆ ಮೃದು ಧೋರಣೆಯಿದೆ. ಆದ್ದರಿಂದ ಉಪಚುನಾವಣೆಗೆ ನಮಗೆ ಟಿಕೆಟ್ ನೀಡುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ ಎಂದರು.

ಮೊದಲು ನ್ಯಾಯಾಲಯದ ತೀರ್ಪು ಬರಲಿ. ಆ ನಂತರ ಯಾವ ಪಕ್ಷಕ್ಕೆ ಸೇರಬೇಕು ಎಂಬ ಬಗ್ಗೆ ನಿರ್ಧಾರ ಮಾಡಲಾಗುವುದು. ಯಾರು ಏನೇ ಹೇಳಿದರೂ ಗೊಂದಲ ಸೃಷ್ಟಿ ಮಾಡಿದರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಪ್ರತಾಪ್ ಗೌಡ ಸ್ಪಷ್ಟಪಡಿಸಿದರು.

Stay up to date on all the latest ರಾಜಕೀಯ news with The Kannadaprabha App. Download now
facebook twitter whatsapp